ಮಲೆಬೆನ್ನೂರು, ಹೊನ್ನಾಳಿ ಪುರಸಭೆ ಮತ್ತು ನ್ಯಾಮತಿ
ಪಟ್ಟಣ ಪಂಚಾಯಿತಿಯಲ್ಲಿ ಖಾಲಿ ಇರುವ ಜೂನಿಯರ್ ಪ್ರೋಗ್ರಾಮರ್
ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ
ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 03 ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳು ಖಾಲಿ ಇದ್ದು
ಡಿಪೆÇ್ಲೀಮಾ ಇನ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಹೊಂದಿರಬೇಕು, ಆಂಗ್ಲ
ಮತ್ತು ಕನ್ನಡ ಭಾμÉಯಲ್ಲಿ ಉತ್ತಮ
ಜ್ಞಾನವುಳ್ಳವರಾಗಿರಬೇಕು. ಅವಧಿ ಒಂದು ವರ್ಷಕ್ಕೆ ಕನ್ಸಲ್‍ಟೆಂಟ್
ಆಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಯು
ತೃಪ್ತಿದಾಯಕವಾಗಿ ಕಾರ್ಯ ಪೂರೈಸಿದಲ್ಲಿ ಅವರ ಸೇವೆಯನ್ನು
ಮುಂದಿನ ವರ್ಷಕ್ಕೆ ವಿಸ್ತರಿಸಲಾಗುವುದು. ಅಭ್ಯರ್ಥಿಗಳು, ಜನನ
ಪ್ರಮಾಣ ಪತ್ರ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರಮಾಣ ಪತ್ರಗಳ
ಪ್ರತಿಗಳನ್ನು ಹಾಗೂ ಒಂದು ಭಾವಚಿತ್ರವನ್ನು ಆರ್ಜಿಯೊಂದಿಗೆ
ಲಗತ್ತಿಸಬೇಕು. ಸರ್ಕಾರಿ ವಲಯದಲ್ಲಿ ಕನ್ಸಲ್‍ಟೆಂಟ್ ಆಗಿ ಕಾರ್ಯ
ನಿರ್ವಹಿಸಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ
ನೀಡಲಾಗುವುದು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸಿ
(ವಸ್ತುನಿಷ್ಟ ಪರೀಕ್ಷೆ) ಮೆರಿಟ್ ಆಧಾರದ ಮೇಲೆ ಆಯ್ಕೆ
ಮಾಡಲಾಗುವುದು.
ಅರ್ಜಿ ನಮೂನೆಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ
ಸಂಖ್ಯೆ 22, ಮೊದಲನೇ ಮಹಡಿ, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ
ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಇದೇ ಕಚೇರಿಗೆ ಅರ್ಜಿಯನ್ನು
ಮಾ.31 ರ ಸಂಜೆ 05-30 ರೊಳಗಾಗಿ ಸಲ್ಲಿಸಬೇಕು ಎಂದು
ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.