ನ್ಯಾಮತಿ- ಮಾರ್ಚ್;- 15 -ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ನಾಗೇಶ್ ನಾಯ್ಕರವರ ನೇತೃತ್ವದಲ್ಲಿ ಸಬೆ ನಡೆಯುತು.
ಮುಸ್ಯನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕರವರು ಈ ಸಭೆಯನ್ನು ಉದ್ದೇಶಿಸಿ ನಂತರ ಮಾತನಾಡಿ, ನಮ್ಮ ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಸಾಮಾನ್ಯ ಸಭೆಗಳು ನಡೆದಿವೆ, ಆದರೆ ಇಲ್ಲಿಯವರೆಗೂ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಯಾವುದೇ ಹಳ್ಳಿಗಳಲ್ಲಿ ಸರ್ಕಾರದಿಂದ ಕೆಲಸವನ್ನು ಮಾಡಲಿಕ್ಕೆ ಸಾಧ್ಯವಾಗಿಲ್ಲ, ನಾವು ಗ್ರಾಮ ಪಂಚಾಯಿತಿ ಸದಸ್ಯರಾಗಿ ನಾವು ನಮ್ಮ ಹಳ್ಳಿಯಿಂದ ಆಯ್ಕೆಯಾಗಿದ್ದೇವೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸವನ್ನು ಮಾಡಿ ನಮ್ಮ ಗ್ರಾಮವನ್ನು ಸ್ವಚ್ಛತೆ ಮತ್ತು ಗ್ರಾಮದ ಕೆಲಸ ಕಾರ್ಯಗಳನ್ನು ಮಾಡಿ ಅಭಿವೃದ್ಧಿ ಕಡೆಗೆ ತೆಗೆದುಕೊಂಡು ಹೋಗಬೇಕು ಎಂಬ ಮನೋಭಾವನೆ ನಮ್ಮಲ್ಲಿತ್ತು, ಆದರೆ ನಾವುಗಳು ಸರ್ಕಾರದ ಯೋಜನೆಗಳು ಪುಸ್ತಕದಲ್ಲಿವೆ ವಿನಹ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯಾವುದೇ ಕೆಲಸ ಕಾರ್ಯಗಳು ಬಂದಿಲ್ಲ ಆದ್ದರಿಂದ ಸರ್ಕಾರ ಕೂಡಲೇ ಕಾಮಗಾರಿಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಇಲ್ಲಿನ ಶಾಸಕರು ಒತ್ತಡ ಹಾಕಿ ಸರ್ಕಾರದಿಂದ ಕಾಮಗಾರಿ ಗಳನ್ನು ತಂದುಕೊಟ್ಟಾಗ ಮಾತ್ರ ನಮ್ಮ ಗ್ರಾಮ ಪಂಚಾಯಿತಿ ಉದ್ದಾರವಾಗುತ್ತದೆ ಎಂದು ಅಲ್ಲಿ ಸೇರಿರುವ ಸಾಮಾನ್ಯಸಭೆಯಲ್ಲಿ ಗ್ರಾಮ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಅವರಿಗೆ ಆಕ್ರೋಶ ವ್ಯಕ್ತಪಡಿಸಿ ನಿಮ್ಮ ಮೇಲಾಧಿಕಾರಿಗೆ ಗಮನಕ್ಕೆ ತರುವಂತೆ ಸೂಚಿಸಿದರು.
ಮುಸ್ಯನಾಳ ಗ್ರಾಮದ ವ್ಯಾಪ್ತಿಯಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು ಅದರ ಜೊತೆಗೆ ಕಲ್ಲನ್ನು ಹೇರಿಕೊಂಡು ಹೋಗವ ಲಾರಿಗಳು ಸ್ಪೀಡಾಗಿ ಓಡಾಡುವುದುದರಿಂದ ನಮ್ಮ ಗ್ರಾಮ ದೂಳು ಆವರಿಸಿಕೊಂಡು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ, ಕೂಡಲೇ ನಮ್ಮ ಗ್ರಾಮವನ್ನು ದೂಳು ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಒತ್ತಾಯಿಸಿದರು.
ಇದೇ ತಿಂಗಳು 21 ನೇ ತಾರೀಖಿನವರೆಗೆ ತಮಗೆ ಗಡುವಯನ್ನು ಕೊಡುತ್ತೇನೆ ,ನಮ್ಮ ಗ್ರಾಮ ದೂಳು ಮುಕ್ತವಾಗದಿದ್ದರೆ ಗ್ರಾಮ ಪಂಚಾಯಿತಿ ಎದುರುಗಡೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು .
ಸದಸ್ಯರ ಮನವಿಯನ್ನು ಆಲಿಸಿದ ಗ್ರಾಮಾಭಿವೃದ್ಧಿ ಅಧಿಕಾರಿ ತಾಲೂಕಿನ ದಂಡಾಧಿಕಾರಿಗಳಿಗೆ ಮತ್ತು ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿಗಳಿಗೆ ಕೂಡಲೇ ಗಮನಕ್ಕೆ ತರುತ್ತೇನೆ ಎಂದು ಪ್ರಕಾಶ ರವರಿಗೆ ತಿಳಿಸಿದರು.
ಇದರ ಜೊತೆಗೆ ಪಲವಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮವಿಕಾಸ ಸೌಧವನ್ನು ಶೀಘ್ರದಲ್ಲೇ ಕಟ್ಟಡವನ್ನು ಕಟ್ಟಲಿಕ್ಕೆ ಪ್ರಾರಂಭವನ್ನು ಮಾಡುತ್ತೇವೆ ಎಂದು ಸರ್ವಸದಸ್ಯರ ಎದುರುಗಡೆಯಲ್ಲಿ ಪಿಡಿಒ ತಿಳಿಸಿದರು. ಇದಕ್ಕೆ ಸರ್ವ ಸದಸ್ಯರುಗಳು ಸಮ್ಮತಿಯನ್ನು ವ್ಯಕ್ತಪಡಿಸಿದರು.
ಉಪಸ್ಥಿತಿಯಲ್ಲಿ;- ಅಧ್ಯಕ್ಷರಾದ ಅನಿತಾ ,ಉಪಾಧ್ಯಕ್ಷರಾದ ನಾಗೇಶ್ ನಾಯ್ಕ, ಮುಸ್ಯೇನಾಳ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಕಾಶ್ ನಾಯ್ಕ . ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪ್ರವೀಣ್ ಗಂಜಿನಳ್ಳಿ, ಸದಸ್ಯರಾದ ನಟರಾಜಪ್ಪ, ಗೋವಿಂದರಾಜ್, ಸುಮಿತ್ರಮ್ಮ, ಪ್ರೀತಿ ಮತ್ತು ಪಿಡಿಒ ವಿಜಯಕುಮಾರ್ ಮತ್ತು ಕಾರ್ಯದರ್ಶಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಇನ್ನು ಮುಂತಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *