ಬುಧವಾರ ಹಿರೇಕಲ್ಮಠದಲ್ಲಿ ಲಿ.ಮೃತ್ಯುಂಜಯ ಶಿವಾಚಾರ್ಯಸ್ವಾಮಿಗಳ 52 ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ.ಒಡೆಯರ ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರನ್ನು ಕಾಣುವುದಕ್ಕೆ ಮಠ ಮಂದಿರಕ್ಕೆ ಹೋಗುತ್ತಿರಿ,ಸರಿ ಆದರೆ ಅದೇ ದೇವರನ್ನು ತಮ್ಮ ಕಾಯಕ ಹಾಗೂ ಅತ್ತೆ,ಮಾವ ಹಾಗೂ ತಂದೆತಾಯಿರು ಹಾಗೂ ಹಿರಿಯರ ಸೇವೆ ಮಾಡಿಯೂ ದೇವರನ್ನು ಕಾಣಬಹುದು ಎಂದರು.
ಮದುವೆಯಾದ ತಕ್ಷಣ ಕೂಡಿ ಬಾಳದೇ ಮನೆಗಳು ಒಡೆದು ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದು, ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ನಾಣ್ಣುಡಿಯಂತೆ ಒಂದಾಗಿ ದೊಡ್ಡ ಕುಟುಂಬದಲ್ಲಿ ಉತ್ತಮವಾಗಿ ಬಾಳುವುದನ್ನು ಕಲಿತುಕೊಳ್ಳಬೇಕು.ಪುಟ್ಟ ಸಂಸಾರ ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾದ ಕಾರಣ ನೂತನ ದಂಪತಿಗಳು ಮಿತ ಸಂತಾನಕ್ಕೆ ಒತ್ತು ಕೊಡಬೇಕು ಎಂದ ಅವರು,ಸರ್ಕಾರ ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುತ್ತಿದ್ದು ಇದಕ್ಕೆ ವೈಯಕ್ತಿಕ ಆರ್ಥಿಕ ಹೊರೆಯಾಗಬಾರದು ಎನ್ನುವುದು ಕಾರಣವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಶ್ರೀಮಠದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುತ್ತಿದ್ದು ಸ್ವಾಮಿಗಳ ಸನ್ನಿಧಾನದಲ್ಲಿ ಮದುವೆಯಾದ ದಂಪತಿಗಳು ಪುಣ್ಯವಂತರು ಎಂದು ಹೇಳಿದರು.
ಶಾಸಕ ಎಂ.ಪಿ.ರೇಣುಕಾಚಾರ್ಯ ಅಧಿವೇಶನದಲ್ಲಿರುವುದರಿಂದ ಸಂದೇಶವೊಂದನ್ನು ಕಳುಹಿಸಿ, ಕರ್ನಾಟಕದಲ್ಲಿನ ಮಠಗಳ ಕೊಡುಗೆ ಅಪಾರ, ಸರ್ಕಾರ ಮಾಡುವ ಅನೇಕ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಮಠಗಳು ಮಾಡುತ್ತಿವೆ ಅದರಲ್ಲೂ ನಮ್ಮ ಹಿರೇಕಲ್ಮಠ ಒಂದು ಹೆಜ್ಜೆ ಮುಂದೆ ಎಂದು ಸಂದೇಶದಲ್ಲಿ ಹೇಳಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದಲ್ಲಿರುವ ಬಹುತೇಕ ಮಠಗಳು ಅನ್ನ ದಾಸೋಹ, ಅಕ್ಷರ ದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿವೆ ಎಂದು ಹೇಳಿದರು.
ಗಂಜಿಗಟ್ಟಿಯ ಶಿವಲಿಂಗ ಶಿವಾಚರ್ಯ ಶ್ರೀಗಳು ಮಾತನಾಡಿ, ಅದ್ದೂರಿ ಮದುವೆಗಳಲ್ಲಿ ನೆಮ್ಮದಿ ಕಡಿಮೆ ಹಾಗೂ ಖರ್ಚು ಹೆಚ್ಚು ಆದರೆ ಸರಳ ವಿವಾಹಗಳಲ್ಲಿ ಖರ್ಚು ಕಡಿಮೆ ಹಾಗೂ ಹೆಚ್ಚು ಎಂದ ಅವರು ಆಡಂಬರದ ಮದುವೆಗಳಲ್ಲಿ ನೆಮ್ಮದಿ ಹಾಗೂ ಸಂತೋಷವನ್ನು ಕಾಣಲಿಕ್ಕೆ ಆಗಲ,ಕಂಡರೂ ಅದು ಕ್ಷಣಿಕ ಎಂದರು.
ಹೊಸದಾಗಿ ಮದುವೆಯಾಗಿ ಬರುವ ಸೊಸೆಯನ್ನು ತನ್ನ ಮಗಳಂತೆಡ ಹಾಗೂ ಸೊಸೆಯೂ ತನ್ನ ಅತ್ತೆಯನ್ನು ತಾಯಿಯಂತೆ ಕಂಡರೆ ಆ ಮನೆ ನಂದಗೋಕುಲವಾಗುತ್ತದೆ, ಸಪ್ತಪದಿ ತುಳಿದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನೀಮ್ಮ ಸಂಸಾರ ಸುಖ ಸಂಸಾರವಾಗಲಿ ಎಂದು ಹಾರೈಸಿದರು.
ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ವಧುವರರನ್ನು ಆಶೀರ್ವದಿಸಿ,ಸರಳ ಹಾಗೂ ಸಾಮುಹಿಕ ಮದುವೆಗಳಲ್ಲಿ ಮದುವೆ ಆದರೆ ಕುಟುಂಬಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಅಲ್ಲದ ಇಂಥ ಸರಳ ಮದುವೆಗಳು ಸಮಾಜಕ್ಕೆ ಪೂರಕ ಎಂದರು.
ಹಿರೇಕಲ್ಮಠದಲ್ಲಿ ಸನಾತನ ಕಾಲದಿಂದಲ್ಲೂ ಸರಳ ಮದುವೆಗಳನ್ನು ಮಾಡುತ್ತ ಭಕ್ತರ ಆರ್ಥಿಕ ಹೊರೆ ಇಳಿಸುವ ಕಾರ್ಯ ಮಾಡುತ್ತಿದೆ ಎಂದರು. ಅದ್ದುರಿ ಮದುವೆ ಮಾಡಿಕೊಂಡು ಸಾಲಕ್ಕೆ ಸಿಲುಕಿ ಎಷ್ಟೋ ಜನ ತಮ್ಮ ನಮ್ಮದಿಯನ್ನೇ ಕಳೆದುಕೊಂಡಿದ್ದಾರೆ ಆದ್ದರಿಂದ ಮದುವೆಯಾಗುವ ಎಲ್ಲರು ಆಡಂಬರ ಮದುವೆಗಳನ್ನು ಬಯಸದೆ ಸರಳ ಮದುವೆ ಅಥವಾ ಸಾಮುಹಿಕ ಮದುವೆಗಳಲ್ಲಿ ಮದುವೆ ಮಾಡಿಕೊಂಡರೆ ಮದುವೆಗೆ ಖರ್ಚಾಗುವ ಹಣವನ್ನು ತಮ್ಮ ಕುಟುಂಬದ ಅಭಿವೃದ್ಧಿಗೆ ಬಳಸಬಹುದು ಎಂದರು.
ಮುಷ್ಠೂರು ಮಠದ ರುದ್ರಮುನಿ ಶಿವಾಚಾರ್ಯಸ್ವಾಮೀಜಿ,ರಾಂಪುರ ಬೃಹನ್ಮಠದ ಶ್ರೀ ಶಿವಕುಮಾರ ಹಾಲಸ್ವಾಮಿಜಿ,ಅವರಗೊಳ್ಳ ಶ್ರೀಮಠದ ಓಂಕಾರೇಶ್ವರ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪುರಸಭೆ ಅಧ್ಯಕ್ಷ ಬಾಬು ಹೋಬಳದರ್, ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ,ತಹಸೀಲ್ದಾರ್ ರಶ್ಮಿ,ಬಿಜೆಪಿ ಮುಖಂಡ ಎಂ.ಪಿ.ರಾಜು,ಕಾಂಗ್ರೆಸ್ ರಾಜ್ಯ ಮುಖಂಡ ಎಚ್.ಎ.ಉಮಾಪತಿ,ಶಿವಯೋಗಿ,ಪುರಸಭೆ ಸದಸ್ಯ ಹೊಸಕೇರಿ ಸುರೇಶ್,ಪ.ಪಂ ಮಾಜಿ ಉಪಾಧ್ಯಕ್ಷ ಸರಳಿನಮನೆ ಮಂಜುನಾಥ, ಚನ್ನಪ್ಪಸ್ವಾಮಿ ವಿದ್ಯಾಪೀಠ ಕಾರ್ಯದರ್ಶಿ ಚನ್ನಯ್ಯಬೆನ್ನುರಮಠ, ಎಂ.ಪಿ.ಎಂ.ವಿಜಯಾನಂದಸ್ವಾಮಿ ಉಪಸ್ಥಿತರಿದ್ದರು.