ದಾವಣಗೆರೆ : ಪುನೀತ್ ರಾಜ್‍ಕುಮಾರ್ ಮತ್ತು ಜಿ.ಎಸ್.ಮಂಜುನಾಥ್ ಅಭಿಮಾನಿಗಳ ಬಳಗದಿಂದ ದಾವಣಗೆರೆ ನಗರದ 38ನೇ ವಾರ್ಡ್‍ನ ಎಂ.ಸಿ.ಸಿ. ‘ಬಿ’ ಬ್ಲಾಕ್‍ನ ಸ್ವಿಮೀಂಗ್ ಪೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪುನೀತ್ ರಾಜ್‍ಕುಮಾರ್ ಅವರ ಪ್ರತಿಮೆಯನ್ನು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಗುರುವಾರದಂದು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಡಾ|| ಶಾಮನೂರು ಶಿವಶಂಕರಪ್ಪನವರು ಪುನೀತ್ ರಾಜ್‍ಕುಮಾರ್ ಅತಿಚಿಕ್ಕ ವಯಸ್ಸಿನಲ್ಲಿ ಮಹೋನ್ನತ ಸಾಧನೆ ಮಾಡಿ ಕೇವಲ ಕರ್ನಾಟಕ ರಾಜ್ಯವಲ್ಲ. ದೇಶ-ವಿದೇಶದ ಜನರಲ್ಲಿ ಗೌರವ-ಅಭಿಮಾನವನ್ನು ಹೊಂದಿದ್ದಾರೆ ಎಂದರು.
ಪುನೀತ್ ಅವರ ನಿಧನರಾದ ವೇಳೆ ಅವರ ಅಭಿಮಾನಿಗಳ ಯಾವುದೇ ಅಹಿತಕರ ಘಟನೆ ಆಗದಂತೆ ಅಭಿಮಾನ ತೋರ್ಪಡಿಸಿರುವುದು ಇಂದು ಪುನೀತ್ ಅಭಿನಯದ ಜೇಮ್ಸ್ ಚಿತ್ರ ಬಿಡುಗಡೆ ಆಗಿದ್ದು, ಅವರ ಅಭಿಮಾನಿಗಳು ಚಿತ್ರಮಂದಿರದ ಬಳಿ ಹಬ್ಬದಂತೆ ವಾತಾವರಣ ಸೃಷ್ಟಿಸಿರುವುದನ್ನು ಶ್ಲಾಘಿಸಿದರು.
ಇಂದು ಪುನೀತ್ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಮತ್ತು ಜಿ.ಎಸ್.ಮಂಜುನಾಥ್ ಅಭಿಮಾನಿಗಳ ಬಳಗದಿಂದ ಪುನೀತ್ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಜೊತೆಗೆ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹ ಲೈಫ್ ಲೈನ್ ಮತ್ತು ಭಾರತೀಯ ರೆಡ್ ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ 60ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಲಾಯಿತು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಯರ್ ಶ್ರೀಮತಿ ಜಯಮ್ಮ ಗೋಪಿನಾಯ್ಕ, ಸದಸ್ಯ ಎ.ನಾಗರಾಜ್, ಚಮನ್ ಸಾಬ್, ಮಾಜಿ ಸದಸ್ಯರುಗಳಾದ ಕೆ.ಜಿ.ಶಿವಕುಮಾರ್, ಶ್ರೀಮತಿ ಶೋಭ ಪಲ್ಲಾಗಟ್ಟೆ, ಶ್ರೀಮತಿ ಜ್ಯೋತಿ ಸಿದ್ದೇಶ್, ಅಂದನೂರು ಮುಪ್ಪಣ್ಣ, ಎಸ್.ಟಿ.ಕುಸುಮಶೆಟ್ರು, ಬಿ.ಹೆಚ್. ಪರಶುರಾಮಪ್ಪ, ಗೌಡ್ರು ಚನ್ನಬಸಪ್ಪ, ಪ್ರಮೋದ್, ಅನಿಲ್ ಬಾರೆಂಗಳ್, ಪೃಥ್ವಿ ಬಾದಾಮಿ, ಗೋಪಾಲಕೃಷ್ಣ, ಗಾಯಕವಾಡ್ ಸಂತೋಷ್, ಶೇಷಾಚಲ, ಮಾಧವ ಪದಕಿ, ಮಧುಕೇಶವ, ಜಗನ್, ವಸಂತರಾಜ್, ಉಮೇಶ್ ಶೆಟ್ಟಿ, ಡಿ.ಎಸ್.ಸಾಗರ್, ಡಿ.ಎಸ್.ಸಿದ್ದಣ್ಣ, ಜಾವೆದ್ ಸಾಬ್, ಗುರುಮೂರ್ತಿ, ಅಂಗಡಿ ಸಾಬ್, ಸಿದ್ದೇಶ್, ಚಂದನ್ ಪಲ್ಲಾಗಟ್ಟೆ, ಆಲೂರು ಜ್ಯೋತಿರ್ಲಿಂಗ, ಸತೀಶ್, ಪ್ರಜ್ವಲ್, ಮುರುಗೇಶ್ ಮಂತ್ರಿ, ಮನು, ಭರತ್ ಮೈಲಾರ, ನಿಖಿಲ್ ಮಂತ್ರಿ, ಐನಳ್ಳಿ ಪುಟ್ಟಣ್ಣ ಮತ್ತಿತರರಿದ್ದರು.