ಹೊನ್ನಾಳಿ -ಮಾ;-17-ತಾಲೂಕಿನ ವ್ಯಾಪ್ತಿಯ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಾಲ್ಯ ವಿವಾಹ ನಿಷೇಧ ಅಭಿಯಾನದ ಕುರಿತು ಎಲ್ಇಡಿ ಅನ್ ವೀಲ್ ಕಾರ್ಯಕ್ರಮಕ್ಕೆ ಮಾನ್ಯ ತಾಲೂಕು ದಂಡಾಧಿಕಾರಿಗಳು ಹಾಗೂ ತಾಸಿಲ್ದಾರರು ಆದ ಶ್ರೀಮತಿ ರಶ್ಮಿ ಹಾಲೇಶಪ್ಪ ರಿಬ್ಬನ್ ಕತ್ತರಿಸಿ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .
ಈ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಷೇಧ ಜನಾಂದೋಲನ ಸಹಿ ಸಂಗ್ರಹ.
ಮಾನವ ಸರಪಳಿ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ.
ಬಾಲ್ಯ ವಿವಾಹದ ನಿಷೇಧ ಕುರಿತು ಪ್ರಮಾಣವಚನ ಸ್ವೀಕಾರ ಹಾಗೂ ಎಲ್ಇಡಿ ಮುಖಾಂತರ ಬಾಲ್ಯವಿವಾಹದ ಅರಿವು ಕುರಿತು ಕಿರುಚಿತ್ರ ಪ್ರದರ್ಶನ ಮುಖಾಂತರ ಇಂಫಾರ್ಮೇಷನ್ ಎಜುಕೇಶನ್ ಹ್ಯಾಂಡ್ ಕಮ್ಯುನಿಕೇಶನ್(ಐ ಈಸಿ )ಕಾರ್ಯಕ್ರಮ ವನ್ನುಸಾರ್ವಜನಿಕರಿಗೆ ತಲುಪಿಸುವ ಬಾಲ್ಯ ವಿವಾಹಗಳ ಆಗದಂತೆ ತಡೆಯುವ ಸದುದ್ದೇಶ ಇರುವ ಈ ಕಾರ್ಯಕ್ರಮ ಮೂರು ದಿನಗಳ ಕಾಲ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿನ ವಿವಿಧ ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು 2ನೇ ದಿನವಾದ ಇಂದು ಹೊನ್ನಾಳಿ ಬೇಲಿಮಲ್ಲೂರು ಗೋವಿನಕೋವಿ ಚೀಲೂರು ಗ್ರಾಮಗಳಲ್ಲಿ ಐದು ಪ್ರದರ್ಶನಗಳನ್ನು ಕೈಗೊಳ್ಳಲಾಗಿದೆ ಇಂದಿನ ಕಾರ್ಯಕ್ರಮಗಳಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಆಶಾ ಕಾರ್ಯಕರ್ತೆಯರು ರಕ್ಷಣಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ವಿವಿಧ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳು ಸಾರ್ವಜನಿಕರು ಪುರಸಭೆ ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಭಾಗವಹಿಸಿದ್ದರು.