ಹೊನ್ನಾಳಿ -ಮಾ;-ದಿನಾಂಕ 17/03/2022 ರಂದು ಮದ್ಯಾಹ್ನ ಸಮಯದಲ್ಲಿ ಬಸವಾಪಟ್ಟಣ ಗ್ರಾಮದ ಕಡೆಯಿಂದ ಹೊನ್ನಾಳಿ ಟೌನ್ ಕಡೆಗೆ ಎರಡು ಓಮಿನಿ ವಾಹನಗಳಲ್ಲಿ ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಮೇರೆಗೆ ಶ್ರೀ ದೇವರಾಜ್, ಸಿಪಿಐ, ಹೊನ್ನಾಳಿ ವೃತ್ತ ಇವರ ಮಾರ್ಗದರ್ಶನದಲ್ಲಿ ಶ್ರೀ ಬಸವರಾಜ ಬಿರಾದರ ಪಿ.ಎಸ್.ಐ ಹೊನ್ನಾಳಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ಹಾಗು ಶ್ರೀ ಮಂಜುನಾಥ ಹೆಚ್.ಸಿ, ನಾಗರಾಜ ಗಂಜೀನಹಳ್ಳಿ ಆಹಾರ ನಿರೀಕ್ಷಕರು, ತಾಲ್ಲೂಕು ಕಛೇರಿ ಹೊನ್ನಾಳಿ ರವರು ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಳ್ಳಿ ಗ್ರಾಮದ ಬಳಿ ಬಸವಾಪಟ್ಟಣ ಕ್ರಾಸ್ ಹತ್ತಿರ ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರುಗಳನ್ನು ಬಂಧಿಸಿ, ರೂ 18,000/- ಮೌಲ್ಯದ 12 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಮತ್ತು ಪಡಿತರ ಅಕ್ಕಿಯನ್ನು ಸಾಗಾಟ ಮಾಡಲು ಬಳಸಿದ ಎರಡು ಓಮಿನಿ ವಾಹನಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ. ಎರಡು ಓಮಿನಿ ವಾಹನಗಳಲ್ಲಿ ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣದ ಪತ್ತೆ ಕಾರ್ಯದಲ್ಲಿ ಹೊನ್ನಾಳಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀ ದೇವರಾಜ್ ಟಿ.ವಿ, ಹೊನ್ನಾಳಿ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಬಸವರಾಜ ಬಿರಾದರ ಹಾಗು ಸಿಬ್ಬಂದಿಯವರಾದ ರವಿ, ರಾಘವೇಂದ್ರ, ಗಣೇಶ, ಯೋಗೇಶ, ಜಗಧೀಶ ಸಹ ಭಾಗವಹಿಸಿದ್ದರು.