ಬೆಳಗುತ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ ಪ್ರಬಂಧ ಸ್ಪರ್ಧೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮಾರ್ಚ್ =18 ಬೆಳಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿನ ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಜಿ ಕುಬೇರಪ್ಪ ನವರ ಉದ್ಘಾಟಿಸಿ ಈ ರೋಗವು ಮಾನವನಿಗೆ ಮತ್ತು ಹಲವು ಪ್ರಾಣಿಗಳಿಂದ ಬರುವಂತಹ ಮಾರಕ ರೋಗ ಈ ರೋಗವು ಮೈಕೋ ಬ್ಯಾಕ್ಟೀರಿಯಾ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುತ್ತದೆ ಈ ರೋಗವು ಮುಂದೆ ಮನುಷ್ಯನ ದೇಹದ ಹಲವು ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಂಗಾಂಗಗಳಿಗೆ ಮಾರಕವಾಗಿ ಹರಡುತ್ತದೆ ಒಬ್ಬ ರೋಗಿಯೂ ಕೆಮ್ಮಿದಾಗ ಅವರ ಕಪ ಅಥವಾ ಉಗುಳು ಹೊರಬಂದಾಗ ರೋಗಾಣುಗಳು ಹೊರಬಂದು ಅಕ್ಕಪಕ್ಕದಲ್ಲಿರುವ ವ್ಯಕ್ತಿಗೆ ಹರಡುತ್ತದೆ ಈ ರೋಗಕ್ಕೆ ಸುಮಾರು ನೂರು ವರ್ಷಗಳ ಇತಿಹಾಸವಿದೆ ಈ ರೋಗವು 15-45 ವರ್ಷ ದ ಒಳಗಿನವರಿಗೆ ಹೆಚ್ಚಾಗಿ ಕಾಣುತ್ತದೆ ಹೆಚ್ಐವಿ – ಏಡ್ಸ್ ಇತ್ಯಾದಿ ರೋಗಗಳಿಂದ ಪ್ರಜೆಗಳು ಎಚ್ಚರವಿರಬೇಕು ಎಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸಿ ತೀರ್ಥ ಲಿಂಗಪ್ಪ ಸಹ ಶಿಕ್ಷಕರಾದ ಚನ್ನಮಲ್ಲಿಕಾರ್ಜುನ ಆರೋಗ್ಯ ಕೇಂದ್ರದ ಮೇಲ್ವಿಚಾರಕರುಗಳಾದ ಶ್ರೀ ಎಂ ಶಿವಣ್ಣ. ಎಂಪಿ ಕರಿಬಸಪ್ಪ. ಎಸ್ ಎನ್ ಸುರೇಶ್. ಫೌಜಿಯ ಅಂಜುಮ್ ತನುಜ. ಆಶಾ ಕಾರ್ಯಕರ್ತರಾದ . ಕವಿತಾ ಉಷಾ ಸುನೀತ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಗಾಯಿತ್ರಿ ಲತಾ ಪ್ರಜ್ವಲ್ ಪುಷ್ಪ ಮಧುರ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

Leave a Reply

Your email address will not be published. Required fields are marked *