ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ.-.ದಾವಣಗೆರೆ ಜಿಲ್ಲೆಯ ಅಕ್ಷರ ದಾಸೋಹದ ಮೇಲ್ವಿಚಾರಕರಾದ ಶ್ರೀಮತಿ ಡಾl ಪುಷ್ಪಲತಾ ಹಾಗೂ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಅಕ್ಷರ ದಾಸೋಹದ ಅಧಿಕಾರಿಯಾದ ಶ್ರೀ ಕೆ ರುದ್ರಪ್ಪನವರು ಶಾಲೆಗೆ ಭೇಟಿ ನೀಡಿ ಅಕ್ಷರ ದಾಸೋಹಕ್ಕೆ ಸಂಬಂಧಪಟ್ಟಂತಹ ದಾಖಲೆಗಳನ್ನು ಪರಿಶೀಲಿಸಿ ನಂತರ ಶಾಲೆಯಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮುಂಬರುವ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಹೇಗೆ ತಯಾರಾಗಬೇಕು ಮೊದಲು ವಿದ್ಯಾರ್ಥಿಗಳು ಸ್ವಲ್ಪ ದಿನಗಳ ತನಕ ಉತ್ತಮ ಫಲಿತಾಂಶ ತರಲು ಮೊಬೈಲ್ ಮತ್ತು ಟಿವಿ ಇಂದ ದೂರ ಇರಬೇಕು ಇದರ ಜೊತೆಗೆ ಪೋಷಕರು ಅಥವಾ ತಂದೆ-ತಾಯಿಗಳು ಎಲ್ಲರೂ ಸಹ ಉತ್ತಮ ಫಲಿತಾಂಶಕ್ಕಾಗಿ ಕೈಜೋಡಿಸಬೇಕು ನೀವುಗಳು ಪರೀಕ್ಷೆ ಬರೆಯಲು ಧೈರ್ಯದಿಂದ ಎದುರಿಸಬೇಕು ನಿಮ್ಮ ಶಾಲೆಯ ಎಲ್ಲಾ ಶಿಕ್ಷಕರುಗಳು ಉತ್ತಮವಾದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮಾಡಿಸಿದ್ದಾರೆ ನೀವು ಚೆನ್ನಾಗಿ ಓದಿ ಹಿಂದಿನ ವರ್ಷದ ವಿದ್ಯಾರ್ಥಿಗಳು ನೂರಕ್ಕೆ ನೂರು ಪರ್ಸೆಂಟೇಜ್ ತಂದಿದ್ದಾರೆ.
ನೀವು ಸಹ ಈ ವರ್ಷ ನೂರಕ್ಕೆ ನೂರರಷ್ಟು ಫಲಿತಾಂಶ ತರಬೇಕು ನೀವೆಲ್ಲರೂ ಸಹ ಪಾಸಾದರೆ ಶಿಕ್ಷಕರಿಗೆ ಗೌರವ ಸಿಕ್ಕಂತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಶ್ರೀ ಕುಬೇರಪ್ಪ. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಸಿ ತೀರ್ಥ ಲಿಂಗಪ್ಪ CRP ಯವರಾದ ಡಿ ನಾಗೇಶಪ್ಪ ಸಹಶಿಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *