ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಮಹೋತ್ಸವ ಸೋಮವಾರದಿಂದ ಶುಕ್ರವಾರದವರೆಗೂ ನಡೆದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಸೋಮವಾರದಿಂದ ಊರಿನ ಸುತ್ತಮುತ್ತಲ ದಾರಿಗೆ ಬೇಲಿ ಹಾಕುವುದು ಹಾಗೂ ಮಂಗಳವಾರದಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು ಗ್ರಾಮದಲ್ಲಿ ಉಲುಸಿನ ಕಾಳು ಗಳನ್ನು ಹಾಗೂ ಸಿಹಿಹಣ್ಣು ನೈವೇದ್ಯ ಮಾಡಿ
9:00 ಗಂಟೆಯಿಂದ ಶ್ರೀ ಮಾರಿಕಾಂಬ ದೇವಿಯನ್ನು ಜಾನಪದ ಮೇಳಗಳೊಂದಿಗೆ ಮಾರಮ್ಮ ದೇವಸ್ಥಾನದಿಂದ ಗ್ರಾಮದ ಮಧ್ಯಭಾಗದಲ್ಲಿರುವ ಮಾರಮ್ಮನ ಗದ್ದಿಗೆ ಕರೆತರಲಾಯಿತು.
ಬೆಳಗಿನ ಜಾವ ಮೆರವಣಿಗೆ ಮೂಲಕ ಘಟೇ ತರುವುದು ಮತ್ತು ಸಂಭ್ರಮದಿಂದ ಉಳಿಸಿನ ಕಾಲುಗಳನ್ನು ಸುತ್ತಮುತ್ತ ಚರಗ ಹೊಡೆಯಲಾಯಿತು
ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಬೇವು ಮತ್ತು ಬೇಟೆ ಕಾರ್ಯಕ್ರಮ ನಡೆಯಿತು
ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಭೂತರಾಜ ರಿಂದ ಧಾರ್ಮಿಕ ಕಾರ್ಯಕ್ರಮ ನೆಡೆಯಿತು.
ಗ್ರಾಮದ ಶ್ರೀ ಆಂಜನೇಯಸ್ವಾಮಿ. ಶ್ರೀ ವೀರಭದ್ರೇಶ್ವರ ಸ್ವಾಮಿ. ಶ್ರೀ ಮಾತಂಗಮ್ಮ. ಶ್ರೀ ಕರಿಯಮ್ಮ. ದುರ್ಗಮ್ಮ. ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಕಾರ್ಯಗಳು ನಡೆದವು.