ನ್ಯಾಮತಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಅಭಿವೃದ್ದಿ ಮಾಡಿದ್ದು ಅವಳಿ ತಾಲೂಕುಗಳನ್ನು ಧೂಳು ಮುಕ್ತ ಮಾಡುವುದರ ಜೊತೆ, ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಉದ್ಯೋಗ ಖಾತ್ರಿ ಯೋಜನೆಯರಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮೆಟ್ಲಿಂಗ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಅವಳಿ ತಾಲೂಕುಗಳನ್ನು ನನ್ನ ಎರಡು ಕಣ್ಣುಗಳು, ಅವುಗಳನ್ನು ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ, ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದರು.
ಅಧಿಕಾರ ಎಂಬುದು ನೀರ ಮೇಲಿನ ಗುಳ್ಳೆ ಇದ್ದಂತೆ, ಸಾಮಾನ್ಯ ಶಿಕ್ಷಕನ ಮಗನನ್ನು ಅವಳಿ ತಾಲೂಕಿನ ಜನರು ಮೂರು ಬಾರೀ ಶಾಸಕನ್ನಾಗಿ ಮಾಡಿದ್ದು, ನಾನು ಅವಳಿ ತಾಲೂಕಿನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ನಾನು ರಾಜಕೀಯ ಚುನಾವಣೆ ಬಂದಾಗ ಮಾಡುತ್ತೇನೆ, ಆದರೇ ನನಗೆ ಅವಳಿ ತಾಲೂಕಿನ ಅಭಿವೃದ್ದಿ ಮುಖ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡಲು ಪಣ ತೊಟ್ಟಿದ್ದೇನೆ ಎಂದರು.
ಈಗಾಗಲೇ ಗೋವಿನಕೋವಿ ಗ್ರಾಮದಾಧ್ಯಂತ 22 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೇ ಎಂದರು.
ಚುನಾವಣೆ ಪೂರ್ವದಲ್ಲಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವುದಾಗಿ ಮಾತು ಕೊಟ್ಟಿದ್ದೇ, ಕೊಟ್ಟ ಮಾತಿನಂತೆ ಇದೀಗ ನಡೆದುಕೊಂಡಿದ್ದು ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಕಾಮಗಾರಿ ಇದೀಗ ಪ್ರಗತಿಯಲ್ಲಿದ್ದು ಇನ್ನು ಕೆಲವೇ ತಿಂಗಳಿನಲ್ಲಿ ಅವಳಿ ತಾಲೂಕಿನ ಕೆರೆಗಳು ತುಂಬಲಿವೆ ಎಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ನರಸಿಂಹಪ್ಪ ಸೇರಿದಂತೆ ಮುಖಂಡರಾದ ಚಂದ್ರಪ್ಪ, ಸತೀಶ್, ಅಂಬಿಗರ ವೆಂಕಟೇಶಪ್ಪ, ಶಿವಮೂರ್ತಪ್ಪ, ರಮೇಶಪ್ಪ, ಬಸವಣ್ಯಪ್ಪ, ಪರಮೇಶಪ್ಪ ಮಾಸ್ಟರ್, ಪ್ರವೀಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.