ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ
ಕ್ಷಯರೋಗ ದಿನದ ಅಂಗವಾಗಿ ಮಾ.24 ರಂದು ಬೆಳಿಗ್ಗೆ 07.30ಕ್ಕೆ
ನಗರದ ನಿಜಲಿಂಗಪ್ಪ ಬಡಾವಣೆಯಿಂದ ಶಿವಾಲಿ ಟಾಕೀಸ್ ರೋಡ್, ಹೊಂಡದ
ಸರ್ಕಲ್, ದೊಡ್ಡ ಪೇಟೆ ಮಾರ್ಗವಾಗಿ ಸಿ.ಜಿ ಆಸ್ಪತ್ರೆಯವರೆಗೆ ಸೈಕಲ್
ಜಾಥಾ ಹಮ್ಮಿಕೊಳ್ಳಲಾಗಿದೆ. ಹಾಗೂ ಸಂಜೆ 06.30 ಕ್ಕೆ ನಗರದ ರಾಂ
ಅಂಡ್ ಕೋ ವೃತ್ತದಲ್ಲಿ ದೀಪ ಬೆಳಗಿಸುವ ಕಾರ್ಯಕ್ರಮ
ಜರುಗಲಿದೆ.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ.ಚನ್ನಪ್ಪ ಅವರು ಉದ್ಘಾಟಿಸುವರು.
ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿ ಡಾ.ನಾಗರಾಜ ವಹಿಸುವರು. ಮುಖ್ಯ ಅತಿಥಿಗಳಾಗಿ ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಹಾನಗರ ಪಾಲಿಕೆ ಆಯುಕ್ತ
ವಿಶ್ವನಾಥ್ ಮುದ್ದಜ್ಜಿ, ಸಿ.ಜಿ ಆಸ್ಪತ್ರೆ ಅಧೀಕ್ಷಕ ಷಣ್ಮುಖಪ್ಪ ಎಸ್,
ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಬಾಲು ಪಿ.ಎಸ್, ಮಹಿಳಾ
ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ನೀಲಕಂಠ ನಾಯ್ಕ್, ಜಿಲ್ಲಾ
ಆಯುಷ್ ಅಧಿಕಾರಿ ಡಾ.ಶಂಕರಗೌಡ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ
ಡಾ.ಮೀನಾಕ್ಷಿ ಕೆ.ಎಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ
ಮಲೇರಿಯಾಧಿಕಾರಿ ಡಾ.ನಟರಾಜ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ
ಡಾ.ರೇಣುಕಾರಾಧ್ಯ ಎ.ಎಂ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ
ಡಾ.ಮುರಳೀಧರ ಪಿ.ಡಿ, ಹಾಗೂ ಇತರರು ಭಾಗವಹಿಸುವರು ಎಂದು
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಕೆ.ಹೆಚ್. ಗಂಗಾಧರ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *