ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿ
ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನು
ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ
ಇಲಾಖೆ ಕಳೆದ ಅಕ್ಟೋಬರ್ 21 ರಂದು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡ
ಧಾನ್ಯವನ್ನು ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ಕೆಎಸ್‍ಸಿಎಫ್‍ಸಿ ಸಗಟು
ಮಳಿಗೆ 1 ರಲ್ಲಿ ಮಾ.29 ರಂದು ಬಹಿರಂಗ ಹರಾಜು
ಮಾಡಲಾಗುತ್ತಿದ್ದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ
ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದ ಅಜಾದ್ ನಗರದ
2ನೇ ಮೇನ್ 10ನೇ ಕ್ರಾಸ್‍ನಲ್ಲಿರುವ ಖಾದರ್ ಅವರ ಮನೆಯಲ್ಲಿ
ಅಕ್ರಮವಾಗಿ ಸಂಗ್ರಹಿಸಲಾಗಿದ್ದ 6.79 ಕ್ವಿಂ. ಪಡಿತರ ಅಕ್ಕಿ ಮತ್ತು 8.09
ಕ್ವಿಂ. ರಾಗಿಯನ್ನು ಆಹಾರ ನಿರೀಕ್ಷಕರು ಅಕ್ಟೋಬರ್ 21 ರಂದು
ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದರು.
ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿ ಮತ್ತು ರಾಗಿಯನ್ನು
ಜಿಲ್ಲಾಧಿಕಾರಿಗಳ ಸೂಚನೆಯಂತೆ, ಮಾ.29 ರಂದು ಮಧ್ಯಾಹ್ನ 12
ಗಂಟೆಗೆ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 1, ಎ.ಪಿ.ಎಂ.ಸಿ ಆವರಣ, ದಾವಣಗೆರೆ
ಇಲ್ಲಿ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು
ಮಾಡಲಾಗುವುದು.
ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಹರಾಜು ದಿನ ಒಂದು
ಗಂಟೆ ಮುಂಚೆ ಬಂದು ಶೇ. 10 ರಷ್ಟು ಮೊಬಲಗನ್ನು ಮುಂಗಡ
ಠೇವಣಿಯಾಗಿ ಇಡಬೇಕು. ತಪ್ಪಿದಲ್ಲಿ ಅಂತಹವರಿಗೆ ಹರಾಜಿನಲ್ಲಿ
ಭಾಗವಹಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಯನ್ನು ಆಹಾರ ನಾಗರಿಕ
ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ
ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು
ಪ್ರಕಟಣೆ ತಿಳಿಸಿದೆ.