ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾ.26
ಮತ್ತು 27 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಜರುಗಲಿದೆ
ದಾವಣಗೆರೆ ತಾಲೂಕು ಎಲೆಬೇತೂರು ಗ್ರಾಮದ
ಮಾಗಾನಹಳ್ಳಿ ಅಂಬಾಸಪ್ಪನವರ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ
ಸಮ್ಮೇಳನದ ಉಧ್ಘಾಟನಾ ಸಮಾರಂಭ ನಡೆಯಲಿದ್ದು ಸಿರಿಗೆರೆ
ಬೃಹನ್ಮಠದ ಶ್ರೀಶ್ರೀಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ
ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಮಾಜಿ ಸಚಿವರು, ದಾವಣಗೆರೆ ಉತ್ತರ ವಿಧಾನ
ಸಭಾ ಹಾಲಿ ಶಾಸಕರಾದ ಎಸ್.ಎ ರವೀಂದ್ರನಾಥ್ ವಹಿಸುವರು.
ಉದ್ಘಾಟನೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ನೆರವೇರಿಸುವರು.
ಆಶಯ ನುಡಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷರಾದ ಬಿ.ವಾಮದೇವಪ್ಪ ನುಡಿಯುವರು. ಸಿರಿಗೆರೆ ಶ್ರೀ
ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಮಹಾಮಂಟಪದ
ಉದ್ಘಾಟನೆಯನ್ನು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ
ಸಚಿವರಾದ ಭೈರತಿ ಬಸವರಾಜ್ ಉದ್ಘಾಟಿಸುವರು. ಶ್ರೀ ಬಸವನಾಳ್
ಬಸವರಾಜಪ್ಪ ವೇದಿಕೆ ಉದ್ಘಾಟನೆಯನ್ನು ಮಾಜಿ ಸಚಿವರು ಹಾಗೂ
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶಾಮನೂರು
ಶಿವಶಂಕರಪ್ಪ ನೆರವೇರಿಸುವರು. ಸ್ಮರಣ ಸಂಚಿಕೆ
ಬಿಡುಗಡೆಯನ್ನು ಮಾಜಿ ಕೇಂದ್ರ ಸಚಿವರು ಹಾಗೂ ದಾವಣಗೆರೆ
ಲೋಕಸಭಾ ಸದಸ್ಯರಾದ ಡಾ.ಜಿ.ಎಂ ಸಿದ್ದೇಶ್ವರ
ಬಿಡುಗಡೆಗೊಳಿಸುವರು. ಸವಗದ್ದಿಗೆ ಸಂಗಮೇಶ್ವರ ಸ್ವಾಮಿ
ಮಹಾದ್ವಾರ ಉದ್ಘಾಟನೆಯನ್ನು ಕರ್ನಾಟಕ ಸಾಬೂನು ಮತ್ತು
ಮಾರ್ಜಕ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಚನ್ನಗಿರಿ
ಕ್ಷೇತ್ರದ ಹಾಲಿ ಶಾಸಕರಾದ ಮಾಡಾಳು ವಿರುಪಾಕ್ಷಪ್ಪ
ಉದ್ಘಾಟಿಸುವರು. ಕೃತಿಗಳ ಬಿಡುಗಡೆಯನ್ನು ಮಹರ್ಷಿ ವಾಲ್ಮೀಕಿ
ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ
ಹಾಲಿ ಶಾಸಕರಾದ ಎಸ್.ವಿ ರಾಮಚಂದ್ರ ಮತ್ತು ಬಾಬು ಜಗಜೀವನ್‍ರಾಂ
ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಹಾಲಿ
ಶಾಸಕರಾದ ಪ್ರೊ ಎನ್.ಲಿಂಗಣ್ಣ ಅವರುಗಳು
ಬಿಡುಗಡೆಗೊಳಿಸುವರು. ಯುವರತ್ನ ಪುನೀತ್ ರಾಜ್‍ಕುಮಾರ್
ಮಹಾದ್ವಾರ ಉದ್ಘಾಟನೆಯನ್ನು ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್
ಉದ್ಘಾಟಿಸುವರು. ಶ್ರೀ ದುರ್ಗಾಂಭಿಕಾದೇವಿ ಮಹಾದ್ವಾರ
ಉದ್ಘಾಟನೆಯನ್ನು ಹರಿಹರ ಶಾಸಕ ಎಸ್.ರಾಮಪ್ಪ ಉದ್ಘಾಟಿಸುವರು.
ಸಮ್ಮೇಳನಾಧ್ಯಕ್ಷರಾದ ಜಿ.ಎಸ್.ಸುಶೀಲಾದೇವಿ ಆರ್.ರಾವ್
ಉಪಸ್ಥಿತರಿರುವರು. ಕನ್ನಡ ಧ್ವಜದ ಹಸ್ತಾಂತರವನ್ನು ನಿಕಟ
ಪೂರ್ವ ಸಮ್ಮೇಳನಾಧ್ಯಕ್ಷರಾದ ಎನ್.ಟಿ.ಎರ್ರಿಸ್ವಾಮಿ
ಹಸ್ತಾಂತರಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ, ಸಂಸ್ಕøತಿ ಚಿಂತಕ
ಕಾಳೇಗೌಡ ನಾಗವಾರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ್
ದಾನಮ್ಮನವರ್, ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷರಾದ
ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ
ಕೆ.ಸಿ.ಸುಮಾ ಬಿ.ವಿರುಪಾಕ್ಷಪ್ಪ ರವರು ಆಗಮಿಸುವರು.
ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಕ.ಸಾ.ಪ ಮಾಜಿ
ಅಧ್ಯಕ್ಷರಾದ ಎ.ಆರ್ ಉಜ್ಜನಪ್ಪನವರು ನಡೆಸಿಕೊಡುವರು.
ಸಮ್ಮೇಳನಾಧ್ಯಕ್ಷರಿಗೆ ಗೌರವ ಸಮರ್ಪಣೆಯನ್ನು ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ತು ಮತ್ತು 11ನೇ ಜಿಲ್ಲಾ ಕನ್ನಡ ಸಾಹಿತ್ಯ
ಸಮ್ಮೇಳನ ಸ್ವಾಗತ ಸಮಿತಿಯವರು ನೆರವೇರಿಸುವರು.
ಸುಗಮ ಸಂಗೀತ ಕಲಾವಿದರಿಂದ ನಾಡಗೀತೆ ಮತ್ತು ರೈತಗೀತೆ
ನಡೆಯಲಿದೆ.