ದಾವಣಗೆರೆ ಬಿಎಸ್‍ಎನ್‍ಎಲ್ ಕಚೇರಿಯಿಂದ ಸಿಮ್ ಮೇಳವನ್ನು
ಆಯೋಜಿಸಲಾಗಿದ್ದು, ಮಾ. 28 ರವರೆಗೆ ಉಚಿತವಾಗಿ ಸಿಮ್ ವಿತರಣೆ
ಮಾಡಲಾಗುವುದು. 500 ರೂ. ವರೆಗಿನ ಎಲ್ಲಾ ಬ್ರಾಡ್‍ಬ್ಯಾಂಡ್
(ಎಫ್‍ಟಿಟಿಹೆಚ್) ಸೇವೆಗಳ ಶುಲ್ಕದಲ್ಲಿ ಶೇ. 90 ರಷ್ಟು ರಿಯಾಯಿತಿ
ನೀಡಲಾಗುವುದು. ಮಾ. 27 ರಂದು ಗ್ರಾಹಕ ಸೇವಾ
ಕೇಂದ್ರಗಳು ಸೇವೆ ನೀಡಲಿವೆ ಎಂದು ಬಿಎಸ್‍ಎನ್‍ಎಲ್ ಉಪಪ್ರಧಾನ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.