ಹೊನ್ನಾಳಿ-ಮಾ;25;- ತಾಲೂಕು ಪಟ್ಟಣದಲ್ಲಿರುವ ಭಾರತೀಯ ವಿದ್ಯಾಸಂಸ್ಥೆಯ ಶಾಲೆಯ ಸಭಾಂಗಣದಲ್ಲಿ ಇಂದು ಡಾಕ್ಟರ್ ರಾಜಕುಮಾರ್ ಅವರ ಅಧ್ಯಕ್ಷತೆಯಲ್ಲಿ “ನಮ್ಮ ಸೇತುವೆ ನಮ್ಮ ಹೆಮ್ಮೆ” ಹೊನ್ನಾಳಿ ಕಮಾನ್ ಸೇತುವೆಯು ಉದ್ಘಾಟನೆಯಾಗಿ ನೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸುವ ಸಲುವಾಗಿ ಇಂದು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಡಾಕ್ಟರ್ ರಾಜಕುಮಾರ್ ನಂತರ ಮಾತನಾಡಿ 1922 ಸಾಲಿನಲ್ಲಿ ಒಡೆಯರ ಆಳ್ವಿಕೆ ಕಾಲದಲ್ಲಿ ವಿಶ್ವೇಶ್ವರಯ್ಯನವರು ಇಂಜಿನಿಯರಾಗಿ ಕೆಲಸವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಈ ಹೊನ್ನಾಳಿಯ ಕಮಾನ್ ಸೇತುವೆಯು ಪ್ರಾರಂಭಗೊಂಡ ಇಂದಿಗೆ ಈ ಸೇತುವೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಆಚರಿಸಬೇಕು ಅದಕ್ಕೆ ಶ್ರಮಿಸಿದ ಮಹನೀಯರಿಗೆ ಗೌರವ ಸಮರ್ಪಣೆಯನ್ನು ಕೂಡ ಸಲ್ಲಿಸುವ ಕಾರ್ಯವನ್ನು ಹೊನ್ನಾಳಿಯ ನಾಗರಿಕರು ಒಟ್ಟಾಗಿ ಸೇರಿ ಇತಿಹಾಸವನ್ನು ಹೊಂದಿದಂತಹ ದಕ್ಷಿಣ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಸಂಬಂಧವನ್ನು ಬೆಸೆಯುವಂತಹ ಈ ಸೇತುವೆ 3 .22000 ಕಡಿಮೆ ದುಡ್ಡಿನಲ್ಲಿ ಸರ್ಕಾರಿ ನೌಕರರ ಸಂಬಳದಲ್ಲಿ ಬಂದಂತಹ ಹಣದಲ್ಲಿಕಟ್ಟಿದ ಸೇತುವೆಯಾಗಿದೆ .ಈ ಸೇತುವೆಗೆ ನೂರು ವರ್ಷ ತುಂಬಿರಿವ ಕಾರಣ ನೂರು ವರ್ಷದ ಹಬ್ಬವನ್ನು ಆಚರಿಸುವ ಕಾಲಕೂಡಿ ಬಂದಿದೆ ಎಂದು ತಿಳಿಸಿದರು .
ಈ ಶತಮಾನೋತ್ಸವವನ್ನು ಆಚರಿಸಲಿಕ್ಕೆ ಕೆಲವೇ ನಾಗರಿಕರಿಂದ ಸಾಧ್ಯ ಇಲ್ಲ ,ಆದ ಕಾರಣ ಇಲ್ಲಿ ತಾಲೂಕಿನ ಮಾಜಿ ಶಾಸಕರುಗಳು ಇರಬಹುದು, ಹಾಲಿ ಶಾಸಕರು ಇರಬಹುದು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ,ಸಾಹಿತಿಗಳು ,ಪತ್ರಕರ್ತರು ,ಉಪನ್ಯಾಸಕರು ,ಶಿಕ್ಷಕರು, ರೈತ ಪರ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿ ಒಕ್ಕೊರಲಿನಿಂದ ಈ ಸೇತುವೆ ಶತಮಾನೋತ್ಸವವನ್ನು ಮಾಡಿದಾಗ ಇತಿಹಾಸದ ಪುಟ ಸೇರಿದಂತಾಗುತ್ತದೆ ಎಂದು ಈ ಸಭೆಯಲ್ಲಿ ಸೇರಿದ ನಾಗರಿಕರ ಅಭಿಪ್ರಾಯವನ್ನು ಸಹ ಸಂಗ್ರಹಿಸಿದರು,
ನಂತರ ಇಲ್ಲಿ ಸೇರಿದ ನಾಗರಿಕರು ಡಾ//ರಾಜಕುಮಾರ್ ಅವರ ಇಂಥ ಕಾರ್ಯಕ್ಕೆ ನಮ್ಮ ಸಹಕಾರ ಬೆಂಬಲ ನಿಮಗೆ ಸದಾ ಇರುತ್ತದೆ ಎಂದು ತಿಳಿಸಿದರು .
ಹಿರಿಯ ಸಾಹಿತಿ ಸಂಗನಾಳಮಠ ರವರು ಈ ಸೇತುವೆಯ ಇತಿಹಾಸದ ಬಗ್ಗೆ ಈ ಸಭೆಯಲ್ಲಿ ಕೂಲಂಕುಶವಾಗಿ ಚರ್ಚೆ ಮಾಡಿದರು.
ನಿವೃತ್ತ ಇಂಜಿನಿಯರ್ ಆದ ಆನಂದ್ ರಾವ್ ರವರು ಮಾತನಾಡಿ ಈ ಸೇತುವೆ ನೂರು ವರ್ಷ ದಾಟಿದೆ ಎಂದರೆ ಈ ಸೇತುವೆಯನ್ನು ಕಟ್ಟಿಸಲಿಕ್ಕೆ ಸಹಕಾರ ನೀಡಿದಂತಹ ಅಂದಿನ ಕಾಲದ ಒಡೆಯರ್ ಅವರಿಗೆ ಕಾರ್ಮಿಕ ವರ್ಗದವರಿಗೆ ತಾಂತ್ರಿಕ ವರ್ಗದವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಉಪಸ್ಥಿತಿಯಲ್ಲಿ ವೈದ್ಯರಾದ ರಾಜಕುಮಾರ್ ಎಚ್ ಪಿ ಹಿರಿಯ ಸಾಹಿತಿ ಸಂಗನಾಳ ಮಠ ,ಎಂಜಿನಿಯರ ಆನಂದರಾವ್, ಕೊಟ್ರೇಶ್ ಉತ್ತಂಗಿ ,ಈ ಶಾಲೆಯ ನಿರ್ದೇಶಕರಾದ ಅರುಣ್, ಹೊನ್ನಾಳಿಯ ನಾಗರಿಕರು ಮತ್ತು ವಿವಿಧ ಪರ ಸಂಘಟನೆಗಳು ,ಸಾಹಿತಿಗಳು ,ಉಪನ್ಯಾಸಕರು, ಪತ್ರಕರ್ತರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.