ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಐತಿಹಾಸಿಕ ಹಿನ್ನೆಲೆ ಇರುವ ಕೋಟೆ ಆಂಜನೇಯಸ್ವಾಮಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಥಕ್ಕೆ ಶುಕ್ರವಾರ ಬೆಳಿಗ್ಗೆ ಶಾಂತಿ ಹೋಮ ಹಾಗೂ ಬೆಳ್ಳಿಯ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕುಂಭಾಭಿಷೇಕ ಗ್ರಾಮಸ್ಥರ ಸಹಕಾರದೊಂದಿಗೆ ನೆರವೇರಿತು.
ಬೀರಗೊಂಡನಹಳ್ಳಿ ವೀರಭದ್ರಾಚಾರ್ ಐದು ಜನ ಶಿಲ್ಪಿಗಳ ತಂಡವು ಸುಮಾರು 30 ಲಕ್ಷ ರೂ ಅಂದಾಜು ವೆಚ್ಚದಲ್ಲಿ 31 ಅಡಿ ಎತ್ತರದ ನೂತನ ರಥವನ್ನು ಸತತವಾಗಿ ಆರು ತಿಂಗಳ ಕಾಲ ನವೀನ ಮಾದರಿಯ ಕಲಾತ್ಮಕ ಕೆತ್ತನೆಯಿಂದ ಸಿದ್ದಗೊಳಿಸಿದ್ದು. ನೂತನ ರಥದ ಶಾಂತಿ ಹೋಮದ ಪೂಜೆಯು ಬೆಂಗಳೂರಿನ ವಿಶ್ವಕರ್ಮ ಗುರುಗಳಾದ ಚಂದ್ರಶೇಖರ ಶರ್ಮ ಶಾಸ್ತ್ರಿಗಳ ನೇತೃತ್ವದಲ್ಲಿ ಗುರುವಾರ ರಾತ್ರಿಯಿಂದಲೇ ಧಾರ್ಮಿಕ ಪೂಜಾ ಕಾರ್ಯಗಳು ಗ್ರಾಮದ ಕೋಟೆ ಆಂಜನೇಯ ನರಸಿಂಹಸ್ವಾಮಿ ಕಲ್ಲೇಶ್ವರ ಆದಿಶಕ್ತಿ ಚೌಡಮ್ಮ ದೇವಿ ಉತ್ಸವ ಮೂರ್ತಿಗಳೊಂದಿಗೆ ಗಂಗಾಪೂಜೆ ನೆರವೇರಿಸುವುದರ ಮೂಲಕ ಆರಂಭಗೊಂಡವು.
ಗುರುವಾರ ರಾತ್ರಿ ರಥದ ಪ್ರತಿಷ್ಟಾ ವಿಧಾನದ ಅಂಗವಾಗಿ ಗಣಪತಿ ಪೂಜೆ, ಪುಣ್ಯ ಅವಾಚನ ನಾಂದಿ, ದೇವಾ ನಾಂದಿ ಪೂಜೆಗಳು, ರಾಕ್ಷೋಘ್ನ ಅಗೋರ ಹೋಮಾದಿ ಗಳನ್ನು ರಥಕ್ಕೆ ನಾಲ್ಕು ದಿಕ್ಕುಗಳಲ್ಲಿ ಹೋಮಾದಿಗಳು, ಅಷ್ಟ ಬಲಿಪ್ರದಾನ ಗಳನ್ನು ಮಾಡಲಾಯಿತು.
ಶುಕ್ರವಾರ ಬೆಳಿಗ್ಗೆ ಕೋಟೆ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿ ರಥಕ್ಕೆ ಪ್ರಾಣ ಪ್ರತಿಷ್ಠಾಪನೆ ನವಗ್ರಹ ಹೋಮ, ಮಹಾ ಗಣಪತಿ ಹೋಮ, ವಾಸ್ತು ಹೋಮ ಹಾಗೂ ಬೆಳ್ಳಿಯ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಗೆ ಕುಂಭಾಭಿಷೇಕ ಹಾಗೂ ಮಹಾ ಮಂಗಳಾರತಿ ಪೂಜೆ ನೆರವೇರಿಸಲಾಯಿತು.
ಶಾಂತಿಹೋಮ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ರವಿ, ಉಪಾಧ್ಯಕ್ಷ ಮೂರ್ತಿ ಸ್ವಾಮಿ, ಖಜಾಂಚಿ ರಾಜಣ್ಣ, ಕಾರ್ಯದರ್ಶಿ ಕಿರಣ್, ಚಂದ್ರಣ್ಣ ಸಂತೋಷ್ ಕುಮಾರ್ ಮಂಜಣ್ಣ ರಮೇಶಣ್ಣ ಹಾಲೇಶಪ್ಪ ನಾಗಪ್ಪ ರವಿ ಸಿದ್ದೇಶ್ ಮಧು ಚಂದ್ರಶೇಖರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.