ಹೊನ್ನಾಳಿ,28: ಕರೊನಾ ಸೋಂಕಿನಿಂದ ಮುಕ್ತರಾದ ನಂತರ ಇದೇ ಮೊದಲಬಾರಿಗೆ ಅವಳಿ ತಾಲೂಕಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ನಿರ್ಭಯವಾಗಿ ಬರೆದರು.ಪರೀಕ್ಷೆ ಕೇಂದ್ರಕ್ಕೆ ಆಗಮಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಷ್ಣತೆ ಹಾಗೂ ಹಾಗೂ ಆಮ್ಲಜನಕವನ್ನು ಶೂಶ್ರಕರು ಹಾಗೂ ಆಶಾ ಕಾರ್ಯಕರ್ತರು ಪರೀಕ್ಷೆ ಮಾಡಿ ಕೇಂದ್ರಕ್ಕೆ ಕಳುಹಿಸುತಿದ್ದು ಕಂಡು ಬಂತು.
3118 ವಿದ್ಯಾರ್ಥಿಗಳ ಪೈಕಿ 3070 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು,ಬಾಕಿ 40 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿತ್ತು.
ಈ ಬಾರಿ ನಾಲ್ಕು ಹೊಸ ಕೇಂದ್ರಗಳನ್ನು ತೆರಯಲಾಗಿತ್ತು,ಹೊನ್ನಾಳಿ ತಾಲೂಕಿನ ಲಿಂಗಾಪುರ,ಹೊನ್ನಾಳಿ ನಗರ,ಗೊಲ್ಲರಹಳ್ಳಿ ಹಾಗೂ ಅರಬಗಟ್ಟೆಯಲ್ಲಿ ನಾಲ್ಕು ಹೊಸ ಕೇಂದ್ರಗಳನ್ನು ತೆರಯಲಾಗಿತ್ತು ಇದುವರೆವಿಗೂ 10 ಕೇಂದ್ರಗಳು ಇತ್ತು,ಇದೀಗ ಒಟ್ಟು 14 ಕೇಂದ್ರಗಳಲ್ಲಿ 3070 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದಾರೆ,ಆದರೆ ವಿದ್ಯಾರ್ಥಿಗಳ ಗೈರುಹಾಜರಿಗೆ ಕಾರಣ ತಿಳಿದು ಬಂದಿಲ್ಲ.
ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಶಾಲಾ ಹೊರ ಕೊಠಡಿಯಲ್ಲಿ ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ,ಆದರೆ ಈ ವೇಲೆ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಬಿಇಒ ರಾಜಿವ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *