ಪ್ರಧಾನ ಮಂತ್ರಿ ಮಹಿಳಾ ಸಶಕ್ತೀಕರಣ ಯೋಜನೆಯಡಿ
ಮಹಿಳಾ ಶಕ್ತಿ ಕೇಂದ್ರಕ್ಕೆ ಜಿಲ್ಲಾ ಸಂಯೋಜಕರು-02
ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಭರ್ತಿ
ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ಉತ್ತಮವಾಗಿ ಕೆಲಸ
ನಿರ್ವಹಿಸಿರುವ ಬಗ್ಗೆ ಅನುಭವ ಹೊಂದಿರುವ ಮತ್ತು ಉತ್ತಮ ಪತ್ರ
ವ್ಯವಹಾರ ನಿರ್ವಹಿಸಬಲ್ಲ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ
ಓದಲು ಬರೆಯಲು ಮತ್ತು ಮಾತನಾಡಲು ಬರುವ, ಕಂಪ್ಯೂಟರ್
ಪರಿಣಿತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಜಿಲ್ಲಾ ಸಂಯೋಜಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು
ಅಭ್ಯರ್ಥಿಯು ಹೂಮ್ಯಾನಿಟಿಸ್, ಸಮಾಜ ವಿಜ್ಞಾನ ಹಾಗೂ ಸಮಾಜಕಾರ್ಯ
ಇವುಗಳಲ್ಲಿ ಯಾವುದಾದರು ಒಂದು ಪದವಿ ಪಡೆದಿದ್ದು, ಗರಿಷ್ಠ
ವಯಸ್ಸು 35 ವರ್ಷವಿರಬೇಕು. ಮಹಿಳಾ ಸಬಲೀಕರಣದಲ್ಲಿ
ಕಾರ್ಯನಿರ್ವಹಿಸಿದ ಅನುಭವ ಹೋದಿರಬೇಕು, ಕಂಪ್ಯೂಟರ್
ಜ್ಞಾನದಲ್ಲಿ ಪ್ರಾವೀಣ್ಯತೆ ಹೋದಿರಬೇಕು, ಸ್ಥಳೀಯ ಭಾಷೆ ಮತ್ತು
ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ಎಂ.ಸಿ.ಸಿ ‘ಬಿ’ ಬ್ಲಾಕ್, ಕುವೆಂಪು ನಗರ, ದಾವಣಗೆರೆ ಇಲ್ಲಿ
ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ನಿಗದಿತ ಅರ್ಜಿಯನ್ನು ಏ.20 ರ
ಸಂಜೆ 05 ಗಂಟೆಯೊಳಗಾಗಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ: 08192-296268 ಕ್ಕೆ ಸಂಪರ್ಕಿಸಬಹುದು ಎಂದು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ
ನಿರ್ದೇಶಕರು ಪ್ರಕಟಣೇಯಲ್ಲಿ ತಿಳಿಸಿದ್ದಾರೆ.