ಹೊನ್ನಾಳಿ-ಮಾ;-31 ಹೊನ್ನಾಳಿ ಪಟ್ಟಣದಲ್ಲಿರುವ ಪತ್ರಿಕಾಭವನದಲ್ಲಿ ಇಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಸೇರಿ ಪತ್ರಿಕಾಗೋಷ್ಠಿಯನ್ನು ನಡೆಸಿದರು .
ತಾಲೂಕ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಕೆ ಎಲ್ ವೀರೇಶ್ ರಾವ್ ಹನಗವಾಡಿ ನಂತರ ಮಾತನಾಡಿ ,ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ಅವರ ಸಹೋದರರು ವಂಶಪಾರಂಪರ್ಯವಾಗಿ ಪೌರೋಹಿತ ಶಾಹಿ ವರ್ಗಕ್ಕೆ ಸೇರಿದವರಾಗಿದ್ದರೂ, ಸಹ ಆಕ್ರಮವಾಗಿ ಪರಿಶಿಷ್ಟ ಜಾತಿ (ಎಸ್.ಸಿ) ಪ್ರಮಾಣ ಪತ್ರವನ್ನು ಪಡೆದುಕೊಂಡು, ದುರುಪಯೋಗ ಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಸಕರಾದ ಶ್ರೀ ಎಂ.ಪಿರೇಣುಕಾಚಾರ್ಯ ಮತ್ತು ಅವರ ಸಹೋದರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸದ್ಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಅವರು ಮಾತನ್ನು ಮುಂದುವರಿಸಿ
ನಮ್ಮ ದೇಶದ ಸಂವಿಧಾನದ ಪ್ರಕಾರ ಈ ನೆಲದಲ್ಲಿ ಜಾತಿ ವ್ಯವಸ್ಥೆಯಲ್ಲಿ ಅಸ್ಪಶ್ಯರು, ಶೂದ್ರರು, ಎಂದು ಕಡೆಯಾಗಿ ಕಂಡು ,ಸಾವಿರಾರು ವರ್ಷ ತುಳಿತಕ್ಕೆ ಒಳಗಾದ ನಿರ್ಗತಿಕ ಜಾತಿಯ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರ್ಕಾರವು ನೀಡುತ್ತಿದೆ. ಆದರೆ ನಮ್ಮ ತಾಲ್ಲೂಕಿನ ಶಾಸಕರಾದ ಶ್ರೀ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಕುಟುಂಬದವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು, ತಾವುಗಳು ಲಿಂಗಾಯಿತ ಪೌರೋಹಿತ ಶಾಹಿ ಸೇರಿದವರಾಗಿದ್ದರೂ ಸಹ ಬೇಡ ಜಂಗಮ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ತಮ್ಮ ಕುಟುಂಬದ ಸದಸ್ಯರುಗಳಿಗೆ ತಗೆದುಕೊಂಡಿರುತ್ತಾರೆ. ಅಲ್ಲದೇ ಹಲವಾರು ತಾಲ್ಲೂಕುಗಳಲ್ಲಿ ಬೇಡ ಜಂಗಮ ಹೆಸರಿನಲ್ಲಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವಂತೆ ತಮ್ಮ ಎಲ್ಲಾ ಜಾತಿಯ ಜನರಿಗೆ ಪ್ರತಿಭಟನೆಯನ್ನು ಮಾಡಿಸುವುದರ ಮೂಲಕ ಸಭೆ ಸಮಾರಂಭಗಳನ್ನು ಮಾಡಿಸಿ, ಪ್ರೋತ್ಸಾಹಿಸಿರುತ್ತಾರೆ. ಆದ್ದರಿಂದ ರಾಜ್ಯದಲ್ಲಿ ಬಹಳಷ್ಟು ಕಡೆ ಲಿಂಗಾಯಿತ ಜಾತಿಗೆ ಸೇರಿದ ಇವರ ಜಾತಿಯ ಜನರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸರ್ಕಾರದಿಂದ ಕೊಡಿಸಿರುತ್ತಾರೆ.
ಆಗೆನೇ
ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಬೇಡ ಜಂಗಮ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರದ ಆಕ್ರಮದ ಬಗ್ಗೆ ಪ್ರಸ್ತಾಪಿಸಿದ ಶಾಸಕರುಗಳ ವಿರುದ್ಧವೇ ಪತ್ರಿಕಾ ಗೋಷ್ಟಿ ನಡೆಸಿದ ಶಾಸಕರ ಸಹೋದರ ದ್ವಾರಕೇಶಯ್ಯನವರು ಸದನದ ಹೊರಗೆ ಬಂದು ಚರ್ಚಿಸಿ ತಮಗೆ ಧೈರ್ಯವಿದ್ದರೆ ,ನಿಮ್ಮ ಮೇಲೆ ಮಾನಹಾನಿ ಮೊಕದ್ದಮೆ ಹೂಡುತ್ತವೆ ಎಂದು ಇಲ್ಲದ ಸಲ್ಲದ ಮಾತುಗಳನ್ನಾಡಿ ತಮ್ಮ ಬಂಡತನದ ಪರಮಾವಧಿಯನ್ನು ಪ್ರದರ್ಶಿಸಿರುತ್ತಾರೆ. ಆದುದರಿಂದ ಹೊನ್ನಾಳಿ ತಾಲೂಕಿನ ಶಾಸಕರಾದ ಶ್ರೀ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಸಹೋದರರನ್ನು ಕೂಡಲೇ ಬಂಧಿಸಿ, ಇದರ ಜೊತೆಗೆ ಬೇಡ ಜಂಗಮ ಎಂಬ ಲಿಂಗಾಯಿತ ಜನಾಂಗದ ಸಂಘ ಸಂಸ್ಥೆಗಳನ್ನು ರದ್ದುಗೊಳಿಸಿ ,ಇಲ್ಲಿಯವರೆಗೆ ಸರ್ಕಾರವು ನೀಡಿರುವ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರಗಳನ್ನು ಹಾಗೂ ಅದರಿಂದ ತೆಗೆದುಕೊಂಡಿರುವ ಅನುದಾನವನ್ನು ಸಹ ವಾಪಾಸ್ ಪಡೆಯುವಂತೆ ಒತ್ತಾಯಿಸಿ, ತಾಲ್ಲೂಕಿನ ಎಲ್ಲಾ ದಲಿತ ಸಂಘಟನೆಗಳ ಬೆಂಬಲದೊಂದಿಗೆ ನಮ್ಮ ಜೆಡಿಎಸ ಪಕ್ಷದವರು ಸೇರಿ ಪ್ರತಿಭಟನೆಯನ್ನು ಸದ್ಯದಲ್ಲಿ ಮಾಡುತ್ತೇವೆ ಎಂದು ತಾಲೂಕು ಜೆಡಿಎಸ ಪಕ್ಷದ ಅಧ್ಯಕ್ಷರಾದ ಕೆ ಎಲ್ ವೀರೇಶ್ ರಾವ್ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಉಪಸ್ಥಿತಿಯಲ್ಲಿ ;-ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ವೀರೇಶ್ ರಾವ್ ಕೆ ಎಲ್ ,ಕಾರ್ಯಾಧ್ಯಕ್ಷರಾದ ಶಿವಮೂರ್ತಿ ಗೌಡ್ರು ಕೋಟೆಮಲ್ಲೂರು, ಕಾರ್ಯದರ್ಶಿ ಸುಭಾಷ್ ಬಳ್ಳೇಶ್ವರ, ಜೆಡಿಎಸ್ ಪಕ್ಷದ ಮುಖಂಡರಾದ ಪರಮೇಶ್ ಬಿ ವೈ ,ಎಸ್ಸಿ ಘಟಕದ ಅಧ್ಯಕ್ಷರಾದ ಎ ಕೆ ಕರಿಯಪ್ಪ ಸಹ ಭಾಗಿಯಾಗಿದ್ದರು.