ಶಿವಮೊಗ್ಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಎರಡು ದಿನಗಳ ಕಾಲ ನಡೆದ 16ನೇ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಭಾವಗೀತೆಗಳ ಗಾಯನವನ್ನು ಸಾಗರದ ಗಾಯಕಿ ಸಹನಾ ಜಿ. ಭಟ್ ಮತ್ತು ಶಿವಮೊಗ್ಗದ ಗಾಯಕಿ ಲಕ್ಷ್ಮೀ ಮಹೇಶ್ ನಡೆಸಿಕೊಟ್ಟರು. ರಾಷ್ಟ್ರಕವಿ ಕುವೆಂಪು, ಕೆ.ಎಸ್. ನಿಸಾರ್ ಅಹಮದ್, ಜಿ.ಪಿ. ರಾಜರತ್ನಂ, ಡಾ. ಚಂದ್ರಶೇಖರ ಕಂಬಾರ ಮುಂತಾದ ಕವಿಗಳ ಭಾವಗೀತೆಗಳನ್ನು ಕಂಠ ತುಂಬಿ ಹಾಡಿದರು.