ಹರಪನಹಳ್ಳಿ ತಾಲ್ಲೂಕಿನ ಶ್ರೀ ಕ್ಷೇತ್ರ ಉಚ್ಚಂಗಿದುರ್ಗದಲ್ಲಿ
ಏ.03 ಮತ್ತು 04 ರಂದು ಜರುಗಲಿರುವ ಉತ್ಸವಾಂಬ ದೇವಿ ಜಾತ್ರಾ
ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ
ಘಟಕಗಳ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ
ಭಕ್ತಾಧಿಕಾಗಳ ಅನುಕೂಲಕ್ಕಾಗಿ 35 ಹೆಚ್ಚುವರಿ ವಿಶೇಷ ಬಸ್
ಕಾರ್ಯಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪ್ರಯಾಣಿಕರ ಜನದಟ್ಟಣೆಗನುಣವಾಗಿ ಹೆಚ್ಚುವರಿ ವಾಹನ
ಕಾರ್ಯಚರಣೆ ಮಾಡಲಾಗುವುದು. ಭಕ್ತಾದಿಗಳು ವಿಶೇಷ
ವಾಹನಗಳ ಸದುಪಯೋಗವನ್ನು ಉತ್ತಮ ರೀತಿಯಿಂದ
ಪಡೆದುಕೊಂಡು ದೇವಿ ಕೃಪೆಗೆ ಪಾತ್ರರಾಗುವಂತೆ ಕರ್ನಾಟಕ
ರಾಜ್ಯ ರಸ್ತೆ ಸಾರಿಗೆ ನಿಗಮದ ದಾವಣಗೆರೆ ವಿಭಾಗದ ವಿಭಾಗೀಯ
ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.