ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ಬಲರಾಮ ರೈತ ಉತ್ಪಾದಕರ ಸಂಸ್ಥೆಯಲ್ಲಿ ನಡೆದ ಪ್ರಮುಖ ರೈತರಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರೈತರ ಕೆಲಸ ಅಂದ್ರೆ ಬರೀ ಬೆಳೆಗಳನ್ನು ಬೆಳೆಯುವುದು ಅಲ್ಲ. ಕೃಷಿ ಉತ್ಪಾದನೆ ಜೊತೆಗೆ ಕುರಿ-ಕೋಳಿ ಜೇನು ಸಾಕಣೆ, ಹೈನೋದ್ಯಮಕ್ಕೆ ಸರ್ಕಾರವು ಹೆಚ್ಚು ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದ ಅವರು ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮೂಲಕ ಸಹಕಾರಿ ವಲಯದಲ್ಲಿ ಸಂಘಟಿತ ಮಾರುಕಟ್ಟೆ ವ್ಯವಸ್ಥೆ ನಿರ್ಮಿಸಬೇಕು. ಇಡೀ ದೇಶದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಯಶಸ್ವಿಯಾಗಿ ಕಟ್ಟಬೇಕು ಇದರಿಂದ ದಲ್ಲಾಳಿಗಳ ಹಾವಳಿ ನಿರ್ಮೂಲನೆ ಯಾಗುವ ಜೊತೆಗೆ ರೈತರಿಗೆ ಮನೆಬಾಗಿಲಲ್ಲಿ ಮಾರುಕಟ್ಟೆ ಸೌಲಭ್ಯ ಮತ್ತು ಉತ್ತಮ ಧಾರಣೆ ಸಿಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ರೈತಮುಖಂಡ ಕುಮಾರ ನಾಯ್ಡು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ರೈತ ಬೆಳೆದ ಬೆಳೆಯ ಒಳ್ಳೆಯ ಅಮ್ಮಿದ ಕಾಳುಗಳೇ ರೈತರು ಬಿತ್ತಿ ಬೆಳೆಯಲು ಒಳ್ಳೆಯ ಬೀಜದ ತಳಿಯ ಕಾಳುಗಳಾಗಿದ್ದು, ರೈತರು 3 ಬೇಳೆಯ ಬೀಜದ ಕಾಳುಗಳಾಗಿ ಬಳಸಬಹುದು. ರೈತರು ಉತ್ಕೃಷ್ಟವಾಗಿ ಬೆಳೆಯಲು ಇಳುವರಿ ಪಡೆಯಲು ಕಂಪನಿಯ ಬೀಜವೇ ಬೇಕಾಗಿಲ್ಲ. ಕಂಪನಿ ಬೀಜದ ತಳಿಗಳು ಹೆಚ್ಚು ದುಬಾರಿ. ನಮ್ಮ ಹಿರಿಯರು ಬಿತ್ತಿ ಬೆಳೆಯಲು ಸುಮಾರು 750ಕ್ಕೂ ಹೆಚ್ಚು ತಳಿ ಬೀಜಗಳನ್ನು ತಾವೇ ಸಿದ್ಧಪಡಿಸಿಕೊಂಡು ಬೀಜಗಳನ್ನು ಕೊಟ್ಟಿಗೆ ಗೊಬ್ಬರ ಬಳಸಿ ಖರ್ಚುವೆಚ್ಚಕ್ಕೆ ಕಡಿವಾಣ ಹಾಕಿ ಉತ್ಕೃಷ್ಟ ಬೆಳೆಯನ್ನು ಬೆಳೆದು ಆದಾಯ ಕಳಿಸುತ್ತಿದ್ದರು. ಕೃಷಿಯ ಜೊತೆಗೆ ದನಕರು ಮೇಕೆಗಳನ್ನು ಸಾಕಿ ಹಾಲು ಮೊಸರು ತುಪ್ಪ ತಿಂದುಂಡು ಶತಾಯಿಸಿಗಳಾಗಿ ಬದುಕುತ್ತಿದ್ದರು. ಇಂದು ನಾವು ಬಳಸುವ ಆಹಾರ ಪದ್ಧತಿಯು ವಿಷಪೂರಿತವಾಗಿದೆ ಆಯಸ್ಸು ಕಡಿಮೆಯಾಗಿದೆ. ಆದಾಯದ ಮುಕ್ಕಾಲು ಭಾಗದ ಹಣವನ್ನು ಆರೋಗ್ಯಕ್ಕೆ ಮನುಷ್ಯ ಹಣ ಸುರಿಯುತ್ತಿದ್ದಾನೆ ಎಂದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆಪ್ಪಲ್ ರಾಜು ವಹಿಸಿ ಮಾತನಾಡಿದರು. ಉಪಾಧ್ಯಕ್ಷ ತಿಮ್ಮಯ್ಯ, ಸಹಾರಾ ಸಂಸ್ಥೆ ಸಂಯೋಜಕ ರಾಜೇಶ್,ನಿರ್ದೇಶಕರಾದ ಹರ್ಷ ಪಟೇಲ್ ಸೇರಿದಂತೆ ಹೋಬಳಿ ವ್ಯಾಪ್ತಿಯ 26 ಹಳ್ಳಿಯ 300ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.