ಹೊನ್ನಾಳಿ–ಎಪ್ರಿಲ್;-1;- ಹೊನ್ನಾಳಿ ಪಟ್ಟಣದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಹೊನ್ನಾಳಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು .ಇದರಉದ್ಘಾಟನೆಯನ್ನು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರ ರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ಜಗಳೂರು ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಡಿ ಆರ್ ಚಂದ್ರಪ್ಪನವರು ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳ ಇಂದ ಅತಿ ಹೆಚ್ಚು ಕೆಲಸ ಮಾಡಿದಾಗ ಎಲ್ಲರ ಸಹಕಾರದಿಂದ ಪ್ರಾಬಲ್ಯ ಬರಲಿಕ್ಕೆ ಸಾಧ್ಯ ಎಂದು ತಿಳಿಸಿದರು.
ತಾಲೂಕು ಉಪ ವಿಭಾಗಾಧಿಕಾರಿಯಾದ ಹುಲ್ಲು ಮನೆ ತಿಮ್ಮಣ್ಣ ನವರು ನಂತರ ಮಾತನಾಡಿ ನೂತನ ಸರಕಾರಿ ನೌಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಗುರುತಿನ ಚೀಟಿಯನ್ನು ನನ್ನ ಕೈಯಿಂದ ವಿತರಿಸಿರುವುದು ತುಂಬಾ ಸಂತೋಷ ಮತ್ತು ಅರ್ಥಪೂರ್ಣವಾಗಿದೆ ಎಂದು ಹೇಳುತ್ತಾ ನೂತನ ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಪದಗ್ರಹಣ ಮಾಡಿದ ನೌಕರರಿಗೆ ಕಿವಿಮಾತನ್ನು ಹೇಳಿ ,ತಮ್ಮಿಂದ ನೌಕರರ ಪರವಾಗಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡಿ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.


ಉದ್ಘಾಟನೆಯನ್ನು ಮಾಡಿ ಅಧ್ಯಕ್ಷ ಭಾಷಣ ಮಾಡಿದ ಡಿ ಜಿ ಶಾಂತನಗೌಡ್ರು ರವರು ಹೊನ್ನಾಳಿ ತಾಲೂಕಿನ ನೌಕರ ಸಂಘದ ಸಮುದಾಯ ಭವನವು 1980ರಲ್ಲಿ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಓಬಳೇಶ್ ಪ್ಪ ಇವರ ಪ್ರಯತ್ನದಿಂದ ಸರ್ಕಾರಿ ನೌಕರ ಸಂಘದ ಸಮುದಾಯ ಭವನ ಇವರ ಸತತ ಪ್ರಯತ್ನದಿಂದ ಫಲವಾಗಿ ಪ್ರಾರಂಭವಾಗಲಿಕ್ಕೆ ಕಾರಣೀ ಭೂತರಾದರು . ಎಂದು ತಿಳಿಸುತ್ತಾ, ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರ ವರ್ಗದವರು ಶಿಕ್ಷಕರನ್ನು ಹೊರತುಪಡಿಸಿ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಪ್ರಾಮಾಣಿಕ ಕೆಲಸವನ್ನು ಮಾಡಿ ತೋರಿಸಬೇಕಾಗಿದೆ ಎಂದು ತಿಳಿಸಿದರು.
ಅದರಲ್ಲಿ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಇನ್ನೂ ಬೇರೆ ಬೇರೆ ಇಲಾಖೆಯವರು ರೈತ ವರ್ಗದವರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಆಫೀಸಿಗೆ ಬಂದ ತಕ್ಷಣ ಕೆಲಸವನ್ನು ಮಾಡಿಕೊಡಿ ಪದೇ ಪದೇ ಅವರನ್ನು ಓಡಾಡಿ ಸುವ ಕೆಲಸವನ್ನು ನೀವುಗಳು ಮಾಡಬೇಡಿ ಎಂದು ಅಧಿಕಾರಿಗಳಿಗೆ ಕಿವಿಮಾತನ್ನು ತಿಳಿಸುತ್ತಾ, ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಪಟ್ಟ ಪ್ರವಾಸಿ ಮಂದಿರದಲ್ಲಿ ಸುಮಾರು 37 ವರ್ಷ ಕೆಲಸ ಮಾಡುತ್ತಿದ್ದ ಡಿ-ದರ್ಜೆ ನೌಕರರಾದ ಕೆಂಚಪ್ಪನವರ ನಿವೃತ್ತಿ ಹೊಂದಿರುವ ಕಾರಣ ಅವರಿಗೆ ಡಿ ಜಿ ಶಾಂತನಗೌಡ್ರು ಅವರಿಗೆ ಶಾಲನ್ನು ವಧಿಸಿ ಪುಷ್ಪ ಹಾರವನ್ನು ಹಾಕುವುದರ ಜೊತೆಗೆ ಸನ್ಮಾನವನ್ನು ಸಹ ಮಾಡಿದರು.


ಅವರ ಮಾಡಿರುವ ಸೇವೆಯನ್ನು ತಾಲೂಕಿನ ಸರಕಾರಿ ನೌಕರರ ಎದುರುಗಡೆ ಶ್ಲಾಘಿಸಿದರು.
ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ಎಲ್ಲಾ ಸರ್ಕಾರಿ ನೌಕರ ಅಧಿಕಾರಿ ವರ್ಗದವರಿಗೆ ಹಾಗೂ ಸಂಘದ ಪದಾಧಿಕಾರಿಗಳಿಗೆ ನೂತನ ಆಯ್ಕೆಯಾದ ಕಾರ್ಯದರ್ಶಿ ರವಿಕುಮಾರ್ ಮತ್ತು ಖಜಾಂಚಿ ಮಹೇಂದ್ರಕುಮಾರ್ ಅಧಿಕಾರ ಸ್ವೀಕಾರದ ನಂತರ ಅವರುಗಳಿಗೆ ಎಲ್ಲ ಸರ್ಕಾರಿ ನೌಕರ ವರ್ಗದ ವತಿಯಿಂದ ಸನ್ಮಾನವನ್ನು ಮಾಡಲಾಯಿತು.
ಉಪಸ್ಥಿತಿಯಲ್ಲಿ ಡಿ ಜಿ ಶಾಂತನಗೌಡ್ರು ಮಾಜಿ ಶಾಸಕರು ಹೊನ್ನಾಳಿ, ಉಪವಿಭಾಗಾಧಿಕಾರಿ ಗಳಾದ ತಿಮ್ಮಣ್ಣ ಹುಲ್ಮನಿ, ಪಿ ರಾಜೀವ್ ಬಿಇಓ, ತಾಲೂಕು ನೌಕರ ಸಂಘದ ಅಧ್ಯಕ್ಷರು ಕುಮಾರ್ ನಾಯ್ಕ, ನೂತನ ಕಾರ್ಯದರ್ಶಿ ರವಿ ಎಚ್ ಟಿ ,ಖಜಾಂಚಿ ಮಹೇಂದ್ರಕುಮಾರ್ ಕೆಎಸ್ ,ಮಾಜಿ ನೌಕರ ಸಂಘದ ಅಧ್ಯಕ್ಷ ಚಂದ್ರಶೇಖರ ಎಚ್ ಜಿ, ಇನ್ನೂ ಅನೇಕ ತಾಲೂಕು ಮಟ್ಟದ ಅಧಿಕಾರಿ ವರ್ಗದವರು ಹಾಗೂ ಶಿಕ್ಷಕರು ಮತ್ತು ಶಿಕ್ಷಕಿಯರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *