ಹೊನ್ನಾಳಿ ಏ.3:- ಹೊನ್ನಾಳಿ ಪಟ್ಟಣದ ವಾಸಿಯಾದ ಸಾಹುಕಾರ್ ಪಟ್ಟಣಶೆಟ್ಟಿ ಪರಮೇಶ್ ರನವರು ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಶ್ರೀಯುತರುಗಳಿಗೆ ಗೌರವಪೂರ್ವಕವಾಗಿ ಸನ್ಮಾನನ್ನು ಮಾಡಿದರು.
ನಂತರ ಮಾತನಾಡಿದ ಡಿ ಜಿ
ಶಾಂತಗೌಡ್ರುರವರು ನೀವುಗಳು ರಾಜ್ಯ ಪಂಚಮಸಾಲಿ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದೆ ಆದರೆ ನೀವುಗಳು ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯಾದ್ಯಂತ ಸಮಾಜವನ್ನು ಸಂಘಟಿಸಲು ಸುತ್ತಾಡಿ ಪಂಚಮಸಾಲಿ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರಿಗೆ ಶುಭ ಹಾರೈಸಿದರು.