ಹೊನ್ನಾಳಿ : ಯುಗಾದಿ ಹಬ್ಬದಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಾಲೂಕಿನ ಕೋಟೆಮಲ್ಲೂರು ಗ್ರಾಮದಲ್ಲಿ ರೈತರ ಜಮೀನಿನಲ್ಲು ಉಳುಮೆ ಮಾಡುವ ಮೂಲಕ ಗಮನ ಸೆಳೆದರು.
ತಾಲೂಕಿನ ಕೋಟೆಮಲ್ಲೂರು ಗ್ರಾಮದ ಹಾಲೇಶಪ್ಪ ಗೌಡ್ರು ನೂತನ ಟ್ಯಾಕ್ಟರ್ ಖರೀದಿ ಮಾಡಿದ್ದು ಅವರ ಟ್ಯಾಕ್ಟರ್ ಚಲಾಯಿಸುವ ಮೂಲಕ ಅವರ ಜಮೀನಿನಲ್ಲಿ ಉಳೆಮ ಮಾಡುವ ಮೂಲಕ ರೈತ ಬಾಂದವರಿಗೆ ಹೊಸ ವರ್ಷದ ಶುಭಾಶಯ ಕೋರಿದರು.
ಯುಗಾದಿ ಹಬ್ಬ ಬಂದರೆ ಸಾಕು ರೈತರ ಕೃಷಿ ಚಟುವಟಿಕೆಗೆ ಜೀವನ ಕಳೆ ಬಂದಗೆ ಎಂದ ರೇಣುಕಾಚಾರ್ಯ ಯುಗಾದಿ ಹಬ್ಬ ರೈತರ ಬಾಳಲ್ಲಿ ಬಂಗಾರ ತರಲಿ ಎಂದು ಆಶೀಸಿದರು.
ಲಗೋರಿ ಆಡಿದ ರೇಣುಕಾಚಾರ್ಯ : ಯುಗಾದಿ ಹಬ್ಬದಂದು ಕೋಟೆ ಮಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ರೇಣುಕಾಚಾರ್ಯ ಗ್ರಾಮೀಣ ಕ್ರೀಡೆಯಾದ ಲಗೋರಿ, ಚೂಚೆಂಡು ಆಡ ವಾಡುವಾಡಿದರು.
ಯುಗಾದಿ ಹಬ್ಬದಂದು ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರಿಡೇಗಳು ಆಟವಾಡುವುದು ವಾಡಿಕೆ, ಆಧುನೀಕತೆ ಬೆಳೆದಂತೆ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದು ಯುವಕರು ಗ್ರಾಮೀಣ ಕ್ರಿಡೆಗಳ ಕಡೆ ಹೆಚ್ಚಿನ ಗಮನ ಕೊಡುವಂತೆ ರೇಣುಕಾಚಾರ್ಯ ಯುವಕರಲ್ಲಿ ಮನವಿ ಮಾಡಿದರು.