ಹೊನ್ನಾಳಿ : ಯುಗಾದಿ ಹಬ್ಬವನ್ನು ರಾಜ್ಯ ಸರ್ಕಾರ ಧಾರ್ಮಿಕ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ಸ್ವಾಗತಾರ್ಹ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿರುವ ಮಂಜುನಾಥಸ್ವಾಮಿ,ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಲಾಗುತ್ತಿದ್ದು, ಯುಗಾದಿ ಹಬ್ಬ ಎಲ್ಲಾರ ಬಾಳಲ್ಲಿ ಸಂತೋಷ ತರಲಿ ಎಂದರು.
ಸೌರಮಾನ ಯುಗಾದಿ ಹಬ್ಬವನ್ನು ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಲು ಮುಜರಾಯಿ ಸಚಿವರು ಸೂಚಿಸಿದ್ದು, ರಾಜ್ಯ ಧಾರ್ಮಿಕ ದಿನಾಚರಣೆ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಸರ್ಕಾರದ ಆಶಯದಂತೆ ನಾನು ಇಂದು ಸುಂಕದಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ,ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು.
ಯುಗಾದಿ ದಿನ ಬೆಳಗ್ಗೆ ದೇವರಿಗೆ ವಿಶೇಷ ಸಂಕಲ್ಪ, ಪ್ರಾರ್ಥನೆ ಮೂಲಕ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು ಬೆಲ್ಲ ವಿತರಿಸಿದ್ದು, ಬೇವು-ಬೆಲ್ಲಾದಂತೆ ಎಲ್ಲರ ಬಾಳಲ್ಲಿ ಸಿಹಿ,ಕಹಿ ಎರಡು ಇರಲಿ ಎಂದರು.
ಪ್ರತಿವರ್ಷವೂ ಕೂಡ ಯುಗಾದಿ ಹಬ್ಬದಂದೂ ರಾಜ್ಯದ ಎ ಶ್ರೇಣಿಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ದಿನಾಚರಣೆ ಆಚರಿಸಲಾಗಿದೆ ಎಂದರು.
ಈ ಸಂದರ್ಭ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ನರಸಿಂಹ ಮೂರ್ತಿ, ಸದಸ್ಯರಾದ ಕರಿಯಪ್ಪ, ಪ್ರಸನ್ನಕುಮಾರ್,ರಾಕೇಶ್,ಚಂದ್ರಮ್ಮ, ಗೌರಮ್ಮ,ನರಸಪ್ಪ, ಎಕೆ ಅಣ್ಣಪ್ಪ, ಅರ್ಚಕರಾದ ಎಸ್.ವಿ.ರಾಜು ಮುಂಕಡರಾದ ಮಂಜಪ್ಪ ಗಣೇಶ್, ಸಿದ್ದಪ್ಪ ಸೇರಿದಂತೆ ಮತ್ತಿತತರಿದ್ದರು.

Leave a Reply

Your email address will not be published. Required fields are marked *