ಹುಣಸಘಟ್ಟ: ಪರಿಶಿಷ್ಟ ಜಾತಿಯ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವ ಎಂಪಿ ರೇಣುಕಾಚಾರ್ಯ ಅವರ ಕುಟುಂಬದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿ. ಪಂ. ಮಾಜಿ ಅಧ್ಯಕ್ಷ ಅರಕೆರೆ ಆರು ನಾಗಪ್ಪ ಹೇಳಿದರು.
ಭಾನುವಾರ ಲಿಂಗಾಪುರ ಗ್ರಾಮದ ದಲಿತರ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಏಪ್ರಿಲ್ 4 ರಂದು ಬುಧವಾರ ಅವಳಿ ತಾಲೂಕಿನ ಹೊನ್ನಾಳಿಯಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರಾಲಿಯ ಕರಪತ್ರಗಳನ್ನು ಪ್ರತಿ ಮನೆ ಮನೆಗಳಿಗೂ ಹಂಚಿ ಸುದ್ದಿಗಾರರೊಂದಿಗೆ ಮಾತನಾಡಿ ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕಾಗಿ ವಿದ್ಯೆ ಆಸ್ತಿ ಅಧಿಕಾರ ಮತ್ತು ಸಂಪತ್ತಿನಿಂದ ವಂಚಿಸಲ್ಪಟ್ಟಿದ್ದ ಭಾರತದ ಶೇಕಡ 85 ರಷ್ಟು ಮೂಲನಿವಾಸಿ ಸಮುದಾಯಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಎಲ್ಲಾ ವರ್ಗದವರ ಸಾಮಾಜಿಕ ಸಮಾನತೆ ಸಾಧಿಸಲು ಸವಿಂಧಾನದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಿಕೊಡಲಾಗಿದೆ.
ಆದರೆ ನಮ್ಮನ್ನಾಳುವ ಮನುವಾದಿ ಸರ್ಕಾರಗಳು ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿ ಮಾಡದೆ ಸಮುದಾಯವನ್ನು ವಂಚಿಸಿದರೆ ಮತ್ತೊಂದೆಡೆ ಮೀಸಲಾತಿಯನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಪ ಜಾತಿ ಮತವನ್ನು ಹೊಂದಿರುವ ಎಂಪಿ ರೇಣುಕಾಚಾರ್ಯ ಜಾತಿ-ಜಾತಿಗಳ ನಡುವೆ ತಂದೆ ಮಕ್ಕಳ ನಡುವೆ ಸಹೋದರ ಸಹೋದರ ನಡುವೆ ವಿಷ ಬೀಜ ಬಿತ್ತಿ ವೈಶಮ್ಯಗಳನ್ನು ಸೃಷ್ಟಿಸಿ ಕುಟುಂಬಗಳನ್ನು ಒಡೆದು ನಯ ವಂಚಕತನದ ಮಾತುಗಳ ಮೂಲಕ ಒಮ್ಮೆಲಿಂಗಾಯಿತರು, ಒಮ್ಮೆ ಖಾಲಿ ಜೋಡಿಗೆ ಜಂಗಮ ನಾನು ಎನ್ನುತ್ತಾ ಜನರಿಗೆ ಮಂಕುಬೂದಿ ಎರಚಿ ನೂರಾರು ಕೋಟಿ ರೂಪಾಯಿಗಳನ್ನು, ಐಷಾರಾಮಿ ಬಂಗಲೆಗಳನ್ನು, ಕಾರುಗಳನ್ನು ಖಾಲಿ ಜೋಳಿಗೆಯೊಳಗೆ ತುರುಕಿದ್ದು ಇದು ಕಣ್ಣೆದುರಿಗಿರುವ ಸತ್ಯ. ಹಣ ಐಶ್ವರ್ಯ ರಾಜಕೀಯ ಅಧಿಕಾರಕ್ಕಾಗಿ ನಾನು ಎಂಥಾ ಕೃತ್ಯಕ್ಕೂ ಸಿದ್ಧ ಎನ್ನುವುದನ್ನು ಮಲಹೊರುವ, ಚಪ್ಪಲಿ ಹೊಲಿಯುವ, ಮೇಲ್ವರ್ಗಗಳ ಸೇವೆ ಮಾಡುವ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಆರ್ಥಿಕವಾಗಿ ಹಿಂದುಳಿದಿರುವ ದನ, ಹಂದಿ, ಕುರಿ, ಕೋಳಿ ಮಾಂಸ ತಿಂದು ಅಸ್ಪೃಶ್ಯರೆನಿಸಿಕೊಂಡ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ತಮ್ಮ ಮಕ್ಕಳಾದ ಎಂ ಆರ್ ಚೇತನ ಮತ್ತು ಅವರ ಮಗನಿಗೆ ಕೊಡಿಸುವ ಮೂಲಕ ತಾನೊಬ್ಬ ಆಧುನಿಕ ಕಲಿಯುಗ ಬ್ರಹ್ಮಾಂಡ ಭ್ರಷ್ಟ ಎಂಬುದನ್ನು ರಾಜ್ಯಕ್ಕೆ ಸಾಬೀತುಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಒಕ್ಕೂಟದ ಮುಖಂಡರಾದ ಎಡಿ ಈಶ್ವರಪ್ಪ, ರುದ್ರೇಶ್ ಕೊಡತಾಳ್, ಉಪನ್ಯಾಸಕ ಎಂ ಸಿ ಮೋಹನ್, ಬಿಎಸ್ಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್ ಕುಬೇರ್, ಮಹಾಂತೇಶ್ ಹನುಮಂತಪ್ಪ ಲೋಕೇಶ್ಉಪಸ್ಥಿತರಿದ್ದರು.