ನ್ಯಾಮತಿ ಃ ನ್ಯಾಮತಿ ತಾಲೂಕಿನ ಕುರುವ ಗಡ್ಡೆ ರಾಮೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮಾದನಬಾವಿ ಗ್ರಾಮಸ್ಥರು ಬೀರಲಿಂಗೇಶ್ವರಸ್ವಾಮಿ, ರಂಗನಾಥಸ್ವಾಮಿ, ಮುರುಡಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪಕ್ಕದ ಬಸವನಹಳ್ಳಿ ಗ್ರಾಮದ ಮುಖಾಂತರ ಮೆರವಣಿಗೆ ಮೂಲಕ ತೆರಳುವಾಗ ಎರಡೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು, ಕಲ್ಲು ತೂರಾಟ ನಡೆದಿದೆ.

ರಥೋತ್ಸವದ ನಂತರ ಮಾದನಬಾವಿ ಗ್ರಾಮಸ್ಥರು ಬಸವನಹಳ್ಳಿ ಮೂಲಕವೇ ಮರಳಿ ಬರುವುದು ವಾಡಿಕೆ. ಮಾದನಬಾವಿ ಗ್ರಾಮಸ್ಥರನ್ನು ತಡೆಯುವ ಸಲುವಾಗಿ ಬಸವನಹಳ್ಳಿ ಗ್ರಾಮಸ್ಥರು ಗುಂಪುಗೂಂಡಿದ್ದರಿಂದ ಎರಡೂ ಗ್ರಾಮಗಳಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ.

ಎರಡು ಗ್ರಾಮಗಳ ಮಧ್ಯೆ ದೇವರ ವಿಚಾರದಲ್ಲಿ ಪೂರ್ವದಿಂದ ತಕರಾರು ಇದೆ. `ಯುಗಾದಿ ಚಂದ್ರದರ್ಶನ ನಂತರ ಗಡ್ಡೆ ರಾಮೇಶ್ವರಕ್ಕೆ ಉತ್ಸವ ಮೂರ್ತಿಗಳನ್ನು ಬಸವನಹಳ್ಳಿ ಮೂಲಕ ತೆಗೆದುಕೊಂಡು ಹೋಗುತ್ತೇವೆ. ಆ ವಿಚಾರವಾಗಿ ಬಸವನಹಳ್ಳಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ’ ಎಂದು ಮಾದನಬಾವಿ ಗ್ರಾಮಸ್ಥರ ಆರೋಪಿಸಿರುವರು.

ಮಾದನಬಾವಿ ಗ್ರಾಮಸ್ಥರು ಗ್ರಾಮದ ಮೂಲಕ ತೆರಳುವಾಗ ಗಲಾಟೆ ಮಾಡಿದರು ಎಂದು ಬಸವನಹಳ್ಳಿ ಗ್ರಾಮಸ್ಥರು ಪ್ರತ್ಯಾರೋಪ ಮಾಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್‍ಪಿ ರಾಮಗೊಂಡ ಬಿ. ಬಸರಂಗಿ, ಚನ್ನಗಿರಿ ಸಿಪಿಐ ಮಧು, ಹರಿಹರ ಸಿಪಿಐ ಸತೀಶ, ಹೊನ್ನಾಳಿ ಎಸ್‍ಐ ಬಸವನಗೌಡ, ನ್ಯಾಮತಿ ಎಸ್‍ಐ ಪಿ.ಎಸ್. ರಮೇಶ, ಹದಡಿ ಎಸ್‍ಐ ರೂಪಾ ತೆಂಬದ್ ಇದ್ದರು.
ಬಸವನಹಳ್ಳಿ-ಮಾಧನಬಾವಿ ಗ್ರಾಮಗಳಿಗೆ 144 ಸೆಕ್ಷನ್ ಜಾರಿ
ದೇವರ ಉತ್ಸವ ವಿಚಾರದಲ್ಲಿ ಎರಡು ಗ್ರಾಮಗಳ ಜನರ ಜಗಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಚನ್ನಗಿರಿ ಡಿವೈಎಸ್‍ಪಿ ಡಾ.ಸಂತೋಷ್ ಸಿಪಿಐ ಮತ್ತು ಪಿಎಸೈ ಗಳ ಮತ್ತು ಸಿಬ್ಬಂದಿಗಳಿಂದ ಸುಖ್ಯಾಂತ ಕಂಡು ಬಂದಿದೆ.

ಚಂದ್ರದರ್ಶನದ ದಿನ ಭಾನುವಾರ ನ್ಯಾಮತಿ ತಾಲೂಕಿನ ಮಾಧನಬಾವಿ ಗ್ರಾಮದ ದೇವರು ಶ್ರೀ ಬೀರಲಿಂಗೇಶ್ವರ ದೇವರನ್ನು ಬಸವನಹಳ್ಳಿ ಗೋವಿನಕೋವಿ ಮಾರ್ಗ ಗಡ್ಡೆರಾಮೇಶ್ವರ ಜಾತ್ರೆಗೆ ಬರುವಾಗ ನಡೆದ ಎರಡು ಗ್ರಾಮಗಳಾದ ಬಸವನಹಳ್ಳಿ ಮತ್ತು ಮಾದನಬಾವಿ ಗ್ರಾಮಗಳ ಜನರ ಜಗಳ ಕಡಿಮೆಯಾಗಿ ಅವರ ಅವರ ಗ್ರಾಮಗಳಿಗೆ ಜನರು ತೆರಳಿದ್ದಾರೆ ಕಾನೂನು ಸುವ್ಯವಸ್ಥೆಯಿಂದ ಎರಡು ಗ್ರಾಮಗಳಿಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಭಾನುವಾರ ಗೋವಿನಕೋವಿ ಬಳಿ ಮಾಧನಬಾವಿ ಶ್ರೀಬೀರಲಿಂಗೇಶ್ವರ ದೇವರನ್ನು ಪೊಲೀಸರೇ ಟ್ಯಾಕ್ಟರ್‍ಗಳ ಮೂಲಕ ಬಸವನಹಳ್ಳಿ ಮಾರ್ಗದಲ್ಲೇ ತೆಗೆದುಕೊಂಡು ಹೋಗಿ ಮಾಧನಬಾವಿ ಗ್ರಾಮದ ದೇಗುಲಕ್ಕೆ ದೇವರನ್ನು ಒಪ್ಪಿಸಿದ್ದಾರೆ, ಬಸವನಹಳ್ಳಿ ಗ್ರಾಮದ ಜನರು ಬಸವನಹಳ್ಳಿ ಗ್ರಾಮಕ್ಕೆ ತೆರಳಿದರೆ ಮಾಧನಬಾವಿ ಗ್ರಾಮದ ಜನರನ್ನು ಬಸವನಹಳ್ಳಿ ಗ್ರಾಮಹೊರತು ಪಡಿಸಿ ಬೇರೆ ಮಾರ್ಗವಾಗಿ ಹೋಗಿ ಎಂದು ಪೊಲೀಸರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *