ಹೊನ್ನಾಳಿ,4: 17.50 ಲಕ್ಷ ನಗದು ಹಾಗೂ 539 ಗ್ರಾಂ (ಅರ್ದ ಕೆಜಿ ಚಿನ್ನ) ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ಹೊನ್ನಾಳಿ ನಗರದ ಗಂಗಾ ಸಾಮಿಲ್ ಹಿಂಬಾಗದ ಮನೆಯೊಂದರಲ್ಲಿ ನಡೆದಿದೆ.
ಘಟನೆ ವಿವರ ; ಗಂಗಾ ಸಾಮಿಲ್ ಹಿಂಬಾಗ ನಿವಾಸಿಯಾಗಿರುವ ಮೂಲತಃ ಹಾಸನ ಜಿಲ್ಲೆಯವರಾದ ನಗರದ ಕೊರಿ ಕಾಂಪೆಕ್ಸ್‍ನಲ್ಲಿ ಎಸ್‍ಎಲ್‍ವಿ ಅಯ್ಯಂಗಾರ ಬೇಕರಿ ಮಾಲೀಕ ಚನ್ನೆಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ.
ಚನ್ನೆಗೌಡರು ಹಾಗು ಕುಟುಂಬ ಭಾನುವಾರ ಸಂಜೆ ನಾಲ್ಕು ಗಂಟೆಗೆ ಧರ್ಮಸ್ಥಳಕ್ಕೆ ಹೋದೆವು,ಬೆಳಗ್ಗೆ ಆರು ಗಂಟೆಗೆ ಧರ್ಮಸ್ಥಳ ತಲುಪಿದ ನಂತರ ನಮಗೆ ದೂರವಾಣಿ ಕರೆ ಮೂಲಕ ನಿಮ್ಮ ಮನೆಯಲ್ಲಿ ಕಳ್ಳತನ ನಡೆದಿದೆ ಎಂದ ತಕ್ಷಣವೇ ನಾವು ವಾಪಸ್ ಹೊನ್ನಾಳಿಗೆ ಮರಳಿರುವರು.
ನಂತರ ಪರಿಶೀಲಿಸಿದಾಗ ಮುಖ್ಯದ್ವಾರ ಬಾಗಿಲು ಕೀ ಹೊಡೆದು ನಂತರ ವಾರ್ಡ್‍ರೂಂ ಒಡೆದು ನಗದು ಹಾಗೂ ಬಂಗಾರವನ್ನು ದೊಚಿರುವುದಾಗಿ ವಿವರಿಸಿದರು.
ಹೊನ್ನಾಳಿ ನಗರದಲ್ಲಿದ್ದ ಎಸ್‍ಎಲ್‍ವಿ ಅಯ್ಯಂಗಾರ ಬೇಕರಿ ಮಾರಾಟ ಮಾಡಿದ ಹಣವನ್ನು ಮನೆಯಲ್ಲಿ ತಂದಿರಿಸಿದ್ದ ಹಣ ಕಳ್ಳತನವಾಗಿರುವುದಾಗಿ ಹೊನ್ನಾಳಿ ಪೊಲೀಸರಿಗೆ ದೂರು ನೀಡಿರುವರು.
ಮನೆಗೆ ದಾವಣಗೆರೆಯಿಂದ ಶ್ವಾನ ದಳದ ತಂಡ ಬಂದು ಪರಿಶೀಲನೆ ನಡೆಸಿ ಕಳ್ಳತನ ಆದ ಮನೆಯಿಂದ ಹಿರೇಮಠ ಸರ್ಕಲ್ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಬಳಿ ಬಂದು ಶ್ವಾನವು ಸುತ್ತಾಡಿದೆ.
ನೆರೆಹೊರೆಯವರು ಪೊಲೀಸ್‍ಠಾಣೆಗೆ ವಿಷಯ ಮುಟ್ಟಿಸಿದ ನಂತರ ಹೊನ್ನಾಳಿ ಪಿಎಸೈ ಬಸವರಾಜಬಿರಾದರ್ ಬಂದುಪರಿಶೀಲಿಸಿದರ್ದಾರೆ.ಸ್ಥಳಕ್ಕೆ ಚನ್ನಗಿರಿ ಡಿವೈಎಸ್ಪಿ ಡಾ.ಸಂತೋಷ್,ಬೆರಳಚ್ಚು ಇಲಾಖೆಯ ರುದ್ರೇಶ್, ಭೇಟಿ ನೀಡಿದರು, ಡಿವೈಎಸ್ಪಿ ಡಾ.ಸಂತೋಷ್ ಅವರು ಕಳ್ಳತನ ಹೇಗೆ ನೆಡದಿರುಬಹುದು ಎಂಬುದರ ಬಗ್ಗೆ ಪಿಎಸೈ ಬಸವರಾಜ ಬಿರಾದರ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಪೇದೆಗಳಾದ ಜಗದೀಶ್,ಧರ್ಮಪ್ಪ,ಯೋಗಿಶ್,ಭೋಜರಾಜ್ ನಾಗರಾಜ, ಹಾಗೂ ಇತರರು ಇದ್ದರು.