ನಾವು ಎಲ್ಲಿ, ಹೇಗೆ, ಯಾವ ಸಮುದಾಯದಲ್ಲಿ ಹುಟ್ಟುತ್ತೇವೆ
ಎನ್ನುವುದು ಮುಖ್ಯ ಅಲ್ಲ, ಹೇಗೆ ಆದರ್ಶಮಯವಾಗಿ
ಬದುಕುತ್ತೇವೆ ಎನ್ನುವುದು ಮುಖ್ಯ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ
ಮತ್ತು ಸಂಸ್ಕøತಿ ಇಲಾಖೆ ಮತ್ತು ಮಹಾನಗರ ಪಾಲಿಕೆ ದಾವಣಗೆರೆ
ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ
ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ
ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ 115ನೇ ಜನ್ಮ
ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ
ಸಲ್ಲಿಸಿ ಬಳಿಕ ಅವರು ಮಾತನಾಡಿದರು.
ಮಹನೀಯರ ಜೀವನ ಚರಿತ್ರೆಯನ್ನು ನಾವುಗಳು
ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಆದರ್ಶಮಯವಾಗಿ
ರೂಪಿಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ
ತಲುಪಿಸುವಂತ ಕಾರ್ಯಗಳನ್ನು ಎಲ್ಲರೂ ಒಗ್ಗೂಡಿ ಮಾಡೋಣ
ಎಂದರು.
ಇತ್ತೀಚೆಗೆ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದಂತೆ
ಜಿಲ್ಲಾಡಳಿತದಿಂದ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ಈ
ದಿನ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದ್ದು, ಏ.14 ಡಾ.ಬಿ.ಆರ್
ಅಂಬೇಡ್ಕರ್ ಅವರ ಜಯಂತಿ ದಿನದಂದು ಭವ್ಯ ಮೆರವಣಿಗೆ ನಡೆಸಿ
ನಂತರ ಮಹಾನಗರ ಪಾಲಿಕೆ ಆವರಣದಲ್ಲಿ ವಿಚಾರ ಸಂಕಿರಣ
ಕಾರ್ಯಕ್ರಮ ಆಯೋಜಿಸಿ ಅದ್ದೂರಿಯಾಗಿ ಆಚರಿಸಲಾಗುವುದು
ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಚನ್ನಪ್ಪ
ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ನಾಯಕರು ಜನಿಸಿ, ದೇಶಕ್ಕೆ
ಹಾಗೂ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ,
ಅಂತಹ ಮಹಾನುಭಾವರನ್ನು ನಾವು ಪ್ರತೀ ವರ್ಷ ನೆನಪಿಸುತ್ತೇವೆ.
ಡಾ. ಬಾಬು ಜಗಜೀವನ್ ರಾಂ ಅವರು ಸುಮಾರು 79 ವರ್ಷಗಳ ಕಾಲ
ಸಮಾಜದಲ್ಲಿ ಶೋಷಿತ ವರ್ಗದವರ ಧ್ವನಿಯಾಗಿ ಶ್ರಮಿಸುತ್ತ
ಬಂದವರು. ವಿದ್ಯಾರ್ಥಿ ದೆಸೆಯಿಂದಲೆ ಸಂಘಟನೆಯ ಮೂಲಕ ಹಲವಾರು
ಹೋರಾಟಗಳನ್ನು ನಡೆಸಿದರು. ಭಾರತ ಜನಸಂಖ್ಯೆಗೆ

ಅನುಗುಣವಾಗಿ ಪ್ರಸ್ತುತ ದಿನಮಾನಗಳಲ್ಲಿ ಸಮರ್ಪಕ ಆಹಾರ
ಪೂರೈಕೆಗೆ ಅವರು ರೂಪಿಸಿದ  ಹಸಿರು ಕ್ರಾಂತಿಯೆ ಕಾರಣವಾಗಿದೆ.
ಇಂತಹ ರಾಷ್ಟ್ರನಾಯಕರ ಆದರ್ಶ ಮಾರ್ಗದಲ್ಲಿ ಎಲ್ಲರೂ
ಸಾಗಬೇಕು ಎಂದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ರಾಜಕೀಯದಲ್ಲಿ
ಸಚಿವರಾಗಿ ಸುಮಾರು 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿದ
ಏಕೈಕ ವ್ಯಕ್ತಿ ಡಾ. ಬಾಬು ಜಗಜೀವನ್ ರಾಂ ಅವರು. ಇಂಡೋ-ಪಾಕ್
ಯುದ್ದದ ಸಂದರ್ಭದಲ್ಲಿ ದೇಶಕ್ಕೆ ಅವರ ಕೊಡುಗೆ
ಗಣನೀಯವಾದದ್ದು, ಅವರ ಹಾದಿಯಲ್ಲಿ ನಾವೆಲ್ಲರು ಸಾಗಿ ಶೋಷಿತ
ವರ್ಗದ ಜನರಿಗೆ ಸಹಾಯ ಮಾಡಬೇಕಿದೆ ಎಂದರು.
ಮುಖಂಡ ಹೆಚ್. ಮಲ್ಲೇಶ್ ಮಾತನಾಡಿ, ಜಗಜೀವನರಾಂ ಅವರು
ಅತೀ ಚಿಕ್ಕ ವಯಸ್ಸಿನಲ್ಲಿಯೇ ಗಾಂಧೀಜಿಯವರ ಪ್ರಭಾವಕ್ಕೆ
ಒಳಗಾಗಿ ಸಾಮಾಜಿಕ ಬದಲಾವಣೆ ಕ್ರಾಂತಿಗೆ ದುಮುಕಿದರು.
ಭಾರತದ ಪತ್ರಿಕೆಗಳು ಗುರುತಿಸದ ಜಗಜೀವನ್ ರಾಂ
ಕಾರ್ಯಗಳನ್ನು ಅಮೇರಿಕಾದ ಪತ್ರಿಕೆ ಗುರುತಿಸಿ ಪ್ರಕಟಿಸಿತ್ತು.
ರಕ್ಷಣಾ, ಕೃಷಿ ಕ್ಷೇತ್ರಕ್ಕೆ ಅವರು ಅನೇಕ ಕೊಡುಗೆಗಳನ್ನು
ನೀಡಿದ್ದಾರೆ. ಭಾರತದ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿ ಉತ್ತಮ
ಆಡಳಿತ ನೀಡಿದ್ದರು. ಅವರ ಸಂಪುಟಗಳನ್ನು ಸರ್ಕಾರ ಮುದ್ರಿಸಿ
ನವ ಪೀಳಿಗೆಗೆ ಓದಲು ಅನುವು ಮಾಡಿಕೊಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ
ಮಾತನಾಡಿ, ಹುಟ್ಟಿದ ದಿನಗಳನ್ನು ಆಚರಣೆ ಮಾಡುವುದರಿಂದ
ವ್ಯಕ್ತಿಗಳು ಮಹಾತ್ಮರಾಗುವುದಿಲ್ಲ, ಆದರೆ ಮಹಾತ್ಮರು ಹುಟ್ಟಿದ
ದಿನಗಳು ಸುದಿನವಾಗುತ್ತವೆ. ಅತ್ಯಂತ ಕಡು ಬಡತನದ
ಹಿನ್ನಲೆಯ ಕುಟುಂಬದಿಂದ ಬಂದ ಜಗಜೀವನ್ ರಾಂ ಅವರು ಸಾಮಾಜಿಕ
ಸಮಾನತೆಗಾಗಿ ಶ್ರಮಿಸಿದರು, ಸ್ವಾತಂತ್ರ್ಯ ಹೋರಾಟದಲ್ಲಿ
ಪಾಲ್ಗೊಂಡಿದ್ದರು. ಅನೇಕ ಜನಪರ ಕಾಳಜಿಯುಳ್ಳ
ರಾಜಕಾರಣಿಗಳಲ್ಲಿ ಬಾಬು ಜಗಜೀವನ್ ರಾಂ ಶ್ರೇಷ್ಠ
ರಾಜಕಾರಣಿಯಾಗಿದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಅನೇಕ ರೀತಿಯ
ಹೋರಾಟಗಳನ್ನು ಕೈಗೊಂಡಿದ್ದರು. ಹಸಿರು ಕ್ರಾಂತಿಯನ್ನು
ಜನಪ್ರಿಯಗೊಳಿಸಿದ ನಾಯಕರು ಜಗಜೀವನರಾಂ ಅವರು. ಹಾಗಾಗಿ
ಮಹನೀಯರ ಕಾರ್ಯಗಳನ್ನು ನೆನಪು ಮಾಡಿಕೊಳ್ಳುವ
ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತದೆ ಎಂದರು.
ಮುಖಂಡರಾದ ಬಿ.ಹೆಚ್ ವೀರಭದ್ರಪ್ಪ, ಸೋಮಲಾಪುರ
ಹನುಮಂತಪ್ಪ ಡಾ.ಬಾಬು ಜಗಜೀವನ್ ರಾಂ ಜಯಂತಿ ಉದ್ದೇಶಿಸಿ
ಮಾತನಾಡಿದರು.
ಕಾರ್ಯಕ್ರಮದಲ್ಲಿ  ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇμÁ್ಮ ಕೌಸರ್, ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ,
ಪರಿಶಿಷ್ಟ ವರ್ಗಗಳ ಇಲಾಖೆಯ ಮಂಜನಾಯ್ಕ್, ಅಲ್ಪಸಂಖ್ಯಾತರ
ಕಲ್ಯಾಣ ಇಲಾಖೆಯ ಅಮಿತ್ ಬಿದರಿ, ಮುಖಂಡರಾದ ಎಲ್.ಎಂ
ಹನುಮಂತಪ್ಪ, ನೀಲಗಿರಿಯಪ್ಪ ಹಾಗೂ ಇತರ ಅಧಿಕಾರಿಗಳು,
ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *