ಆದ್ಯತೆ ನೀಡಿದ್ದರು : ಮಹಾಂತೇಶ್ ಬೀಳಗಿ
ಕಾಯಕ ತತ್ವವನ್ನು ತಮ್ಮ ಜೀವನದಲ್ಲಿ ಸಂಪೂರ್ಣವಾಗಿ
ಅಳವಡಿಸಿಕೊಂಡವರು ಆದ್ಯ ವಚನಕಾರ ದೇವರ
ದಾಸಿಮಯ್ಯನವರು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ
ಇಲಾಖೆ ಮತ್ತು ಮಹಾನಗರ ಪಾಲಿಕೆ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ಬುಧವಾರ ಆಯೋಜಿಸಲಾಗಿದ್ದ ಆದ್ಯ ವಚನಕಾರ, ನೇಕಾರ ಸಂತ
ವಿಶ್ವಮಾನ್ಯ ಶರಣ ದೇವರ ದಾಸಿಮಯ್ಯ ಜಯಂತಿ
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ
ಬಳಿಕ ಅವರು ಮಾತನಾಡಿದರು.
ಹನ್ನೆರಡನೆ ಶತಮಾನದಲ್ಲಿ ಶರಣ ಕ್ರಾಂತಿ ನಡೆದದ್ದು
ಸಮಾಜದಲ್ಲಿ ಬೇರೂರಿದ್ದ ಜಾತಿಯತೆ, ಅಸಮಾನತೆ, ಮೌಢ್ಯತೆ
ತೊಲಗಿ ಎಲ್ಲರೂ ಸಮಾನರು ಎಂದು ಅನುಭವ ಮಂಟಪದಲ್ಲಿ ಸೇರಿ
ಚರ್ಚಿಸುತ್ತಿದ್ದರು. ಶರಣರು ಕಾಯಕ ಮತ್ತು ದಾಸೋಹಕ್ಕೆ
ಹೆಚ್ಚಿನ ಆದ್ಯತೆ ನೀಡಿದ್ದರು, ಕಾಯಕ ಎಂದರೆ ಮನಸ್ಸಿಟ್ಟು
ದುಡಿಯುವುದು, ದಾಸೋಹವೆಂದರೆ ದುಡಿದದ್ದನ್ನು ನಾವು
ಉಪಯೋಗಿಸಿಕೊಂಡು ಸಮಾಜದ ಇತರರಿಗೂ ಹಂಚುವುದಾಗಿದೆ,
ಹಾಗಾಗಿ ಎಲ್ಲರೂ ಕಾಯಕ ಶರಣರ ಆದರ್ಶಗಳನ್ನು ಪಾಲಿಸೋಣ
ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಚನ್ನಪ್ಪ
ಮಾತನಾಡಿ, ಕಾಯಕದಲ್ಲಿ ಶಿವನನ್ನು ಕಂಡವರು
ದೇವರದಾಸಿಮಯ್ಯ. ದಾಸೋಹ ತತ್ವದಿಂದ ಹಸಿವನ್ನು ನೀಗಿಸಲು
ಸಾಧ್ಯ ಎಂದು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ. ಹನ್ನೆರಡನೇ
ಶತಮಾನದ ಶರಣರಿಂದ ಕಾಯಕ ಮತ್ತು ದಾಸೋಹ ಎಂಬ ಎರಡು
ಮುಖ್ಯ ಅಂಶಗಳನ್ನು ನಾವು ತಿಳಿಯಬಹುದಾಗಿದೆ. ಕಾಯಕ
ಶ್ರದ್ಧೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು
ಶರಣರು ತಿಳಿಸಿಕೊಟ್ಟರು ಎಂದು ಹೇಳಿದರು.
ನೇಕಾರ ಸಮಾಜದ ಸಿ.ಪ್ರಕಾಶ್ ಉಪನ್ಯಾಸ ನೀಡಿ, ಭಾರತದಲ್ಲಿ
ಅನೇಕ ದಾರ್ಶನಿಕರು ಸಾಧುಸಂತರು ಜನಿಸಿದ್ದಾರೆ. ಬಸವಾದಿ
ಶರಣರಿಗಿಂತಲೂ ಹಿರಿಯರು ಆದ್ಯ ವಚನಕಾರರಾಗಿದ್ದಾರೆ. ತಮ್ಮ
ವಚನಗಳ ಮೂಲಕ ಸ್ತ್ರಿ ಸಮಾನತೆ, ಸಮತೋಲನದ ಬದುಕು,
ಲಿಂಗತಾರತಮ್ಯದ ಕುರಿತು ತಮ್ಮ ವಚನಗಳಲ್ಲಿ ಜಾಗೃತಿ
ಮೂಡಿಸಿದ್ದಾರೆ.
ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕವಾಗಿ ತಾಂತ್ರಿಕವಾಗಿ
ಮುಂದುವರೆದರೂ ಕೂಡ ಹಸಿವು ನೀಗಿಸುವಲ್ಲಿ ಹಿಂದುಳಿದಿದ್ದೇವೆ.
ಹೀಗಾಗಿ ವಚನಗಳಲ್ಲಿ ಶರಣರು ಅಳವಡಿಸಿರುವ ಸಾಮಾಜಿಕ ಆರ್ಥಿಕ
ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಮತ್ತು ಸರಳ
ಜೀವನದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಸಾಗೋಣ ಎಂದರು.
ನೇಕಾರ ಸಮಾಜದ ಗೌರವಾಧ್ಯಕ್ಷ ಬಸವರಾಜ್ ಗುಬ್ಬಿ
ಮಾತನಾಡಿ, ದಾವಣಗೆರೆ ನಗರದ ಯಾವುದಾದರೂ ವೃತ್ತಕ್ಕೆ
ದೇವರ ದಾಸಿಮಯ್ಯ ಅವರ ಹೆಸರು ನಾಮಕರಣ ಮಾಡಬೇಕು
ಎಂದು ಮನವಿ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮಾ ಕೌಸರ್, ಕನ್ನಡ
ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ,
ಡಿವೈಎಸ್ಪಿ ನರಸಿಂಹ.ವಿ.ತಾಮ್ರಧ್ವಜ, ವಿವಿಧ ಇಲಾಖೆ ಅಧಿಕಾರಿಗಳು,
ನೇಕಾರ ಸಮಾಜದ ಅಧ್ಯಕ್ಷ ಬಸವರಾಜ್, ಕಾರ್ಯದರ್ಶಿ ಶ್ರೀನಿವಾಸ್ ಇಂಡಿ
ಹಾಗೂ ನೇಕಾರ ಸಮಾಜದವರು ಇತರೆ ಮುಖಂಡರು ಹಾಜರಿದ್ದರು.