ಹೊನ್ನಾಳಿ :-ಏಪ್ರಿಲ್:-7 – ತಾಲೂಕು ದಿಡಗೂರು ಗ್ರಾಮದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಹೆಸರಿನ ಮೇಲೆ ರಚಿತವಾಗಿರುವ “ಕಣ್ಣಿನ ಹನಿಗಳು ಕರೆದಿವೆ ಹನುಮ “ಹಿರೇಬಾಸೂರು ,ಹರಳಹಳ್ಳಿ ,ಬೀರದೇವರ ಕುರಿತು ಭಕ್ತಿ ಗೀತೆಗಳ ಧ್ವನಿ ಮುದ್ರಿಕೆ ಬಿಡುಗಡೆ ಕಾರ್ಯಕ್ರಮ ವನ್ನು ನಡೆಸಲಾಯಿತು.
ದಿಡಗೂರು ಆಂಜನೇಯ ಸ್ವಾಮಿ ದೇವಸ್ಥಾನ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ// ಚನ್ನಮಲ್ಲಿಕಾರ್ಜುನ ಸ್ವಾಮಿ ಹಿರೇಕಲ್ಮಠ ಇವರು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಜ್ಯೋತಿ ಬೆಳಗಿಸುವುದರ ಮೂಲಕ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಾಗತ ಭಾಷಣವನ್ನು ಅಂಜನಾ ಗುರುಮೂರ್ತಿ ಡಿಎಂ ರವರು ನಡೆಸಿಕೊಟ್ಟರು.
ಉಪಸ್ಥಿತಿಯಲ್ಲಿ ;-ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹಿರೇಕಲ್ಮಠ ,ಅಣ್ಣಪ್ಪಸ್ವಾಮಿ ದಿಡಗೂರು ,ಹರಳಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧಮ್ಮ ,ಗಾಯಕ ಎಚ್ ಕಡದಕಟ್ಟೆ ತಿಮ್ಮಪ್ಪ, ಸಾಹಿತ್ಯ ಮೋಹನ್ ಕುಮಾರ್ ಡಿ ಎಂ ,ದಿಡಗೂರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದೇಶ್, ಪ್ರಕಾಶ್ ಎ ಜಿ, ಓ ಎನ ವೆಂಕಟೇಶ್, ಪ್ರಭಾಕರ ಡಿಎಂ ದಿಡಗೂರು ಗ್ರಾಮಸ್ಥರು ಆಂಜನೇಯ ಸ್ವಾಮಿಯ ಭಕ್ತಾದಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.