ಹುಣಸಘಟ್ಟ: ಹೊನ್ನಾಳಿ ತಾಲೂಕು ಲಿಂಗಾಪುರ ಗ್ರಾಮದ ತುಂಗಭದ್ರಾ ನದಿ ದಡದ ಮೇಲೆ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿ ಅಳವಡಿಸಿರುವ ವಿದ್ಯುತ್ ಕಂಬ ಹಾಗೂ ತಂತಿ ಸುಮಾರು 40 ರಿಂದ 50 ವರ್ಷ ತುಂಬಾ ಹಳೆಯ ಸಂಪರ್ಕ ವಾಗಿದ್ದು ತಂತಿ ಅಲ್ಲಲ್ಲಿ ತುಂಡಾಗಿ ಬೀಳುತ್ತಿದ್ದು ಅವಘಡ ಸಂಭವಿಸುವ ಮೊದಲೇ ಬೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಹೊಸ ವಿದ್ಯುತ್ ಕಂಬ ಹಾಗೂ ತಂತಿಯನ್ನು ಅಳವಡಿಸುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.
ಲಿಂಗಾಪುರ ಗ್ರಾಮದ ರೈತ ಮುಖಂಡ ಮಲ್ಲೇಶಚಾರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ನದಿ ದಂಡೆಯ ಸುಮಾರು 30ರಿಂದ 40 ಜನರ ಐಪಿ ರೆಡ್ಡಿಗಳಿಗೆ ಕಲ್ಪಿಸಿರುವ ಪವರ್ ಲೈನ್ ತುಂಬಾ ಹಳೆಯದಾಗಿದ್ದು ಹಿಂದೆ 100 ಮೀಟರ್ ಗೆ ಒಂದು ಕಂಬ ನೆಟ್ಟು ವಿದ್ಯುತ್ ಸಂಪರ್ಕ ನೀಡಿದ್ದು ವಿದ್ಯುತ್ ತಂತಿಯು ತುಂಬಾ ಹಳೆಯದಾಗಿರುವ ದರಿಂದ ಅಡಿಕೆ ತೋಟದ ನೆಲಕ್ಕೆ ಆಗುವಷ್ಟು ಜ್ಯೋತಿ ಬಿದ್ದಿದ್ದು ಆಗಿಂದಾಗೆ ತುಂಡುತುಂಡಾಗಿ ಬೀಳುತ್ತಿದೆ. ಜನ-ಜಾನುವಾರು ಹಲವಾರು ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದು ಇಲಾಖೆಯವರ ಗಮನಕ್ಕೆ ಹಲವು ಬಾರಿ ತಂದರೂ ಗಮನಹರಿಸಿಲ್ಲ. 100kv ಟಿಸಿಗೆ ಸುಮಾರು 25ರಿಂದ 30 ಜನರು 100 ಎಚ್ ಪಿ ಗಿಂತ ಅಧಿಕ ಮೋಟಾರ್ ಸಂಪರ್ಕ ಹೊಂದಿವೆ. ರೈತರ ಐಪಿ ಸೆಟ್ ಮೋಟಾರ್ ಗಳಿಗೆ ವೋಲ್ಟೇಜ್ ಸಾಕಾಗುತ್ತಿಲ್ಲ. ನೀರಿಲ್ಲದೆ ರೈತರ ಅಡಿಕೆ ತೋಟಗಳು ಒಣಗಿ ಹೋಗುತ್ತದೆ ಎಂದರು.
ಟಿಸಿ ಇಂದ ಎಲ್ ಟಿ ಲೈನ್ ಸಂಪರ್ಕ ದುರಸ್ತಿಯಲ್ಲಿದೆ. ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕೆಲವು ರೈತರು ಜಮೀನುಗಳಿಗೆ ನೀರಿಲ್ಲದೆ ಹಾಗೆಯೇ ಕೈಚೆಲ್ಲಿ ನಾಟಿ ಮಾಡುವುದನ್ನು ಬಿಟ್ಟಿದ್ದಾರೆ. ಅಡಿಕೆ ತೋಟಗಳು ನೀರಿಲ್ಲದೆ ಮರಗಳು ಒಣಗಿ ಉದುರುತ್ತಿವೆ. ಕಾಲಕಾಲಕ್ಕೆ ವಿದ್ಯುತ್ ಪೂರೈಕೆ ಇಲ್ಲದೆ ಮೋಟಾರುಗಳು ಸುಟ್ಟು ಹೋಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಹೊಸ ವಿದ್ಯುತ್ ಕಂಬ ಹಾಗೂ ತಂತಿ ಸಂಪರ್ಕ ಕಲ್ಪಿಸಿ ರೈತರಿಗೆ ಬೆಳೆ ಬೆಳೆಯಲು ನೆರವಾಗುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತರಾದ ನಟರಾಜ್ ಕೃಷ್ಟೋಜಿರಾವ್ ಸಿದ್ದೋಜಿ ರಾವ್ ಗಣೇಶ್ ರಾವ್ ತಿಪ್ಪೋಜಿರಾವ್ ರಂಗಪ್ಪ ಸೇರಿದಂತೆ 30ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.