ಹಿಂದೂ ಜನಜಾಗೃತಿ ಸಮಿತಿ ಸೇರಿ, ಅನೇಕ ಹಿಂದೂ ಸಂಘಟನೆಗಳು ಯುಗಾದಿಯ ಮರುದಿನ ನಡೆಯುವ ಹೊಸತೊಡಕಿಗೆ ಹಲಾಲ್ ಮಾಂಸವನ್ನು ಬಹಿಷ್ಕಾರವನ್ನು ಮಾಡಿ, ಜಟ್ಕಾ ಮಾಂಸವನ್ನು ಖರೀದಿಸಲು ಅಹ್ವಾನ ಮಾಡಲಾಗಿತ್ತು. ಅದರಂತೆ ಹಿಂದೂ ಸಮಾಜವು ಯುಗಾದಿಯ ಮರುದಿನ ಅಂದರೆ ಹೊಸತೊಡಕು ದಿನ ಸಮಾಜವು ಹಲಾಲ್ ಮಾಂಸವನ್ನು ಬಹಿಷ್ಕಾರ ಮಾಡಿ, ಜಟ್ಕಾ ಮಾಂಸದ ಖರೀದಿಯನ್ನು ಮಾಡಿರುವುದು ಬಹಳಷ್ಟು ಜಿಲ್ಲೆಗಳಲ್ಲಿ ಗಮನಕ್ಕೆ ಬಂದಿದೆ. ಹಲಾಲ್ ಮೂಲಕ ಪ್ರಾಣಿಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡುವುದು ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಪ್ರಕಾರ ಕಾನೂನುಬಾಹಿರವಾಗಿದೆ. ಹಿಂದೂ ಸಮಾಜದಲ್ಲಿ ಸಹ ಪ್ರಾಣಿಗಳನ್ನು ಇಷ್ಟು ಕ್ರೂರವಾಗಿ, ಬರ್ಬರವಾಗಿ ಹತ್ಯೆ ಮಾಡುವುದು ನಿಷೇಧವಿದೆ.
ನಮ್ಮ ಬೇಡಿಕೆಗೆ ಸ್ಪಂದಿಸಿ ಹಲಾಲ್ ಮಾಂಸವನ್ನು ಬಹಿಷ್ಕಾರ ಮಾಡಿದ ಹಿಂದೂ ಸಮಾಜಕ್ಕೆ ಅಭಿನಂದನೆಗಳು ! ಇದೇ ರೀತಿಯಲ್ಲಿ ಮುಂದೆಯೂ ಸಹ ಅನ್ಯ ಹಲಾಲ್ ಉತ್ಪನ್ನಗಳನ್ನು ನಾವು ಬಹಿಷ್ಕರಿಸೋಣ
ಮುಂದೆ ರಾಜ್ಯ ಸರ್ಕಾರವು ಹಲಾಲ್ ಹೆಸರಿನಲ್ಲಿ ಪ್ರಾಣಿಗಳನ್ನು ಕ್ರೂರ ರೀತಿಯಲ್ಲಿ ಹತ್ಯೆಯನ್ನು ತಡೆಯಲು, ಪ್ರಾಣಿ ಹತ್ಯೆ ಮಾಡುವ ಮೊದಲು stunning ಮಾಡಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ ರಾಜ್ಯವ್ಯಾಪಿ ಅನ್ವಯ ಮಾಡಬೇಕು, ಎಂದು ಆಗ್ರಹಿಸುತ್ತಿದ್ದೇವೆ.
ಶ್ರೀ. ಮೋಹನ ಗೌಡ,
ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ.
ಸಂಪರ್ಕ ಸಂಖ್ಯೆ – 7204082609