ಹೊನ್ನಾಳಿ;-ಏಪ್ರಿಲ್ -9 ;-ತಾಲೂಕು ದಿಡಗೂರು ಆಂಜನೇಯ ಸ್ವಾಮಿ ಸೇವಾ ಸಮಿತಿ ಇವರ ವತಿಯಿಂದ ಶ್ರೀ ಆಂಜನೇಯ ಸ್ವಾಮಿಯ ಶುಕ್ರವಾರ ಸಂಜೆ 8:00 ಗಂಟೆಗೆ ಕಂಕಣಧಾರಣೆ ನಡೆಯಿತು. ಶನಿವಾರ ಮತ್ತು ಭಾನುವಾರ ಬೆಳಗ್ಗೆ ಹುಚ್ಚಯ್ಯ ಅರಿಯುವುದು ,10/ 04: /20 22 ರ ಭಾನುವಾರ ಸಂಜೆ 6 ಗಂಟೆಗೆ ಸರಿಯಾಗಿ ಬ್ರಹ್ಮ ರಥೋತ್ಸವ ಜರುಗುವುದು. ದಿನಾಂಕ 11 /4 /20 22 ನೇ ಸೋಮವಾರ ಬೆಳಗಿನಜಾವ ದಿಡಗೂರು ಶ್ರೀ ಆಂಜನೇಯಸ್ವಾಮಿ, ಹಿರೇಬಾಸೂರು ಶ್ರೀ ಆಂಜನೇಯ ಸ್ವಾಮಿ, ಶ್ರೀ ಕಟ್ಟಮ್ಮ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ದುರ್ಗಾದೇವಿ ಹರಳಹಳ್ಳಿ ಈ ದೇವರುಗಳ ಸಾನಿಧ್ಯದಲ್ಲಿ ರಥೋತ್ಸವ ಜರುಗುವುದು. ಹಾಗೂ ಪ್ರಸಾದ ವಿನಿಯೋಗ ಮತ್ತು ಜವಳ ಬೆಲ್ಲದ ಬಂಡಿ ,ಮಣೇವು, ಮುಳ್ಳಿನ ಸೇವೆ ಹಾಗೂ ರಾತ್ರಿ 8:00 ಗಂಟೆಗೆ ಶ್ರೀ ಭೂತರಾಜರ ಸೇವೆ ಕಾರ್ಯಕ್ರಮವು ಜರಗುವುದು. ಅದರ ಜೊತೆಗೆ 12 /4./20 22ನೇ ಮಂಗಳವಾರ ಬೆಳಗ್ಗೆ ಓಕುಳಿ ಕಾರ್ಯಕ್ರಮ ನಡೆಯುವುದು ಎಂದು ದಿಡಗೂರಿನ ಅಣ್ಣಪ್ಪ ಸ್ವಾಮಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.