ಹೊನ್ನಾಳಿ : ಮಾತು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕು, ಈ ನಿಟ್ಟಿನಲ್ಲಿ ನಾನು ನುಡಿದಂತೆ ನಡೆಯುವ ಮೂಲಕ ಕೆಲಸ ಮಾಡುತ್ತಿದ್ದು ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡುತ್ತೇನೆಂದು ಸಿಎಂ ರಾಜಕೀಯ ಕಾಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಎರಡು ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ,ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಅಭಿವೃದ್ದಿ ಮಾಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಮಾತು ನೀಡಿದ್ದೇ ಅದರಂತೆ ನಡೆದುಕೊಳ್ಳುವ ಮೂಲಕ ಮೂಲಭೂತ ಸೌಲಭ್ಯಗಳನ್ನು ಪ್ರತಿ ಗ್ರಾಮಕ್ಕೂ ಕಲ್ಪಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಚುನಾವಣಾ ಪೂರ್ವದಲ್ಲಿ ಅವಳಿ ತಾಲೂಕಿನ ಕರೆಗಳನ್ನು ತುಂಬಿಸುವುದಾಗಿ ಮಾತು ನೀಡಿದ್ದೇ, ಅದರಂತೆ ನಾನು ನಡೆದುಕೊಂಡಿದ್ದು ಇದೀಗ 518 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು ಇನ್ನು ಕೆಲವೇ ತಿಂಗಳಲ್ಲಿ ಅವಳಿ ತಾಲೂಕಿನ ಕೆರೆಗಳು ತುಂಬಲಿವೆ ಎಂದರು.
ರಾಜ್ಯದ ಭೂಪಟದಲ್ಲಿ ಅವಳಿ ತಾಲೂಕಿನ ಚಿತ್ರಣವನ್ನೇ ಬದಲಿಸ ಬೇಕೆಂಬುದು ನನ್ನ ಕನಸಾಗಿದ್ದು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುವ ಮೂಲಕ ಅವಳಿ ತಾಲೂಕ ಪ್ರತಿಯೊಂದು ಹಳ್ಳಿಗಳನ್ನು ಧೂಳು ಮುಕ್ತ ಗ್ರಾಮಗಳನ್ನಾಗಿ ಮಾಡುತ್ತೇನೆ ಎಂದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ತಾಲೂಕಿನ ನೇರಲಗುಂಡಿ ಗ್ರಾಮದಲ್ಲಿ 38 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ,ತಿಮ್ಲಾಪುರ ಗ್ರಾಮದಲ್ಲಿ 18 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಯರೇಹಳ್ಳಿ ಗ್ರಾಮದಲ್ಲಿ 11.82 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ, ತಿಮ್ಮೇನಹಳ್ಳಿ ಗ್ರಾಮದಲ್ಲಿ 70 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ 20 ಲಕ್ಷ ರೂಪಾಯಿ ವೆಚ್ಚದ ಎರಡು ಶಾಲಾ ಕಟ್ಟಡಗಳು, ನೆಲವೊನ್ನೆ ಗ್ರಾಮದಲ್ಲಿ 41,47 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು ಸೇರಿದಂತೆ ಸುಮಾರು ಎರಡು ಕೋಟಿಗೂ ಹೆಚ್ಚು ವೆಚ್ಚದ ಕಾಮಗಾರಿಗಳನ್ನು ರೇಣುಕಾಚಾರ್ಯ ಅವರ ಉದ್ಘಾಟಿಸಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಲಲಿತಾಬಾಯಿ, ಕಿರಣ್ ಸೇರಿದಂತೆ ಗ್ರಾಮದ ಮುಖಂರಾದ ಉಮೇಶನಾಯ್ಕ, ರೇಖ್ಯಾನಾಯ್ಕ,ನಾಗರಾಜ್ ನಾಯ್ಕ,ಮಹೇಂದ್ರನಾಯ್ಕ, ಉಮೇಶ್ ಟಿ.ಎಲ್, ಲಕ್ಷ್ಮಣ್ ನಾಯ್ಕ, ನರಸಗೊಂಡನಹಳ್ಳಿ ರಘು ಸೇರಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಗಂಗಪ್ಪ,ಮಹೇಶ್ ನಾಯ್ಕ ಸೇರಿದಂತೆ ಮತ್ತೀತತರಿದ್ದರು.