ಹೊನ್ನಾಳಿ ; ಹಳ್ಳಿಹಳ್ಳಿಗಳಲ್ಲಿ ಸುಂದರ ಪರಿಸರ ನಿರ್ಮಾಣ ಮಾಡಲು ಸಾರ್ವಜನಿಕರು ಗ್ರಾಮಪಂಚಾಯಿತಿಯೊಂದಿಗೆ ಕೈಜೋಡಿಸುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ಕುಂದೂರು ಹಾಗೂ ತಿಮ್ಲಾಪುರ ಗ್ರಾಮಗಳಲ್ಲಿ 34 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳ್ಳಿಗಳನ್ನು ಸ್ವಚ್ಚವಾಗಿಡುವುದು ಕೇವಲ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕೆಲಸವಲ್ಲಾ, ಹಳ್ಳಿಗಳು ಸುಂದರವಾಗಿರ ಬೇಕೆಂದರೆ ಗ್ರಾಮಪಂಚಾಯಿತಿ ಸಿಬ್ಬಂದಿಗಳ ಜೊತೆಸಾರ್ವಜನಿಕರು ಕೈಜೋಡಿಸ ಬೇಕೆಂದು ಕರೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಸ್ವಚ್ಚಭಾರತ ಯೋಜನೆಯಡಿ ಅವಳಿ ತಾಲೂಕಿನಾಧ್ಯಂತ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಗಾಗೀ 45 ಗ್ರಾ.ಪಂಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಜೊತೆಗೆ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ಒದಗಿಸಲಾಗಿದ್ದು ಗ್ರಾ.ಪಂ ನವರು ಗ್ರಾಮದ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸ ಬೇಕೆಂದು ಕರೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಸ್ವತಃ ಪೊರಕೆ ಹಿಡಿದು ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.ಅದೇ ರೀತಿ ನಾನು ಕೂಡ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲೂ ಸ್ವಚ್ಚಭಾರತ್ ಆಂದೋಲನ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಹಳ್ಳಿಹಳ್ಳಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡುತ್ತಿದ್ದು ಜನರು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ತಮ್ಮ ಮನೆಯ ಸುತ್ತಲಿನ ಪರಿಸರ ಹಾಗೂ ಗ್ರಾಮಗಳನ್ನು ಸ್ವಚ್ಚವಾಗಿಡಲು ಮುಂದಾಗ ಬೇಕೆಂದು ಕರೆ ನೀಡಿದರು.
ಹಳ್ಳಿಗಳು ಸ್ವಚ್ಚವಾಗಿದ್ದರೇ ದೇಶ ಸ್ವಚ್ಚವಾಗಿರುತ್ತದೇ ಎಂದು ನಂಬಿದವನು ನಾನು ಈ ಹಿನ್ನೆಲೆಯಲ್ಲಿ ಜನರು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗ ಬೇಕೆಂದರು.
ಈ ಸಂದರ್ಭ ತಾ.ಪಂ.ಮಾಜಿ ಸದಸ್ಯರಾದ ತಿಪ್ಪೇಶ್, ಕುಂದೂರು ಗ್ರಾ.ಪಂ ಅದ್ಯಕ್ಷರಾದ ಬಿ,ಚಿದಾನಂದ, ಉಪಾಧ್ಯಕ್ಷರಾದ ರೇಖಾ ರೇವಣಸಿದ್ದಪ್ಪ, ಸದಸ್ಯರಾದ ರೆಹಮತುಲ್ಲಾ, ಲತಾ ಹಾಲೇಶ್, ಪ್ರಸನ್ನ, ಧನಂಜಯ್ಯ, ಸೇರಿದಂತೆ ಗ್ರಾಮದ ಮುಖಂಡರಿದ್ದರು.