ನ್ಯಾಮತಿ : ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ದಿಯೇ ನನ್ನ ಮೂಲ ಮಂತ್ರ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಅವಳಿ ತಾಲೂಕಗಳನ್ನು ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ 47 ಲಕ್ಷ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸುರಹೊನ್ನೆ ಗ್ರಾಮದಲ್ಲಿ 35 ಕೋಟಿಗೂ ಅಧಿಕ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಿದ್ದು, ಇಡೀ ಸುರಹೊನ್ನೆ ಗ್ರಾಮವನ್ನೇ ಧೂಳು ಮುಕ್ತ ಗ್ರಾಮನ್ನಾಗಿ ಮಾಡಿದ್ದೇನೆ ಎಂದರು.
ಸುರಹೊನ್ನೆ ಗ್ರಾಮವು ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದು ಒಂದು ಕೋಟಿ ವೆಚ್ಚದಲ್ಲಿ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳೂ ಕೂಡ ನಡೆಯುತ್ತಿದ್ದು ಸುರಹೊನ್ನೆ ಗ್ರಾಮವನ್ನು ಮಾದರಿ ಗ್ರಾಮವಾಗಲಿದೆ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳು ನನ್ನ ಎರಡು ಕಣ್ಣುಗಳನ್ನು ಅವುಗಳನ್ನು ಅಭಿವೃದ್ದಿ ಮಾಡುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದು ಅವಳಿ ತಾಲೂಕುಗಳನ್ನು ರಾಜ್ಯದಲ್ಲೇ ಮಾದರಿ ತಾಲೂಕುಗಳನ್ನಾಗಿ ಮಾಡುತ್ತೇನೆ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರಾದ ಹಾಲೇಶ್, ಉಪಾದ್ಯಕ್ಷರಾದ ರುಕ್ಮಿಣಮ್ಮ, ಸದಸ್ಯರಾದ ಗಣೇಶಪ್ಪ, ಮಧು, ಈರಣಯ್ಯ, ಸುಮಿತ್ರಮ್ಮ, ಜಯಶೀಲಾ, ಸವಿತಾ, ರೇಖಾ ಸೇರಿದಂತೆ ಗ್ರಾಮದ ಮುಖಂಡರು ವಿವಿಧ ಇಲಾಖೆ ಅಧಿಕಾರಿಗಳಿದ್ದರು.