ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮಪಂಚಾಯಿತಿಯಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿದ್ದ ಸುರೇಶ್ ಇವರ ಸ್ಥಾನ ತೆರವಾದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರಾಗಿ ಚಂದ್ರಕಲಾ ಶಿವಕುಮಾರ್ ಚಕ್ಕಡಿ ಇ ವರನ್ನ ಸೋಮವಾರ ಗ್ರಾಮ ಪಂಚಾಯಿತಿಯಲ್ಲಿ ಪಕ್ಷಾತೀತವಾಗಿ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಕಲಾ ಶಿವಕುಮಾರ್ ಚಕ್ಕಡಿ ಮಾತನಾಡಿ ಗ್ರಾಮ ಪಂಚಾಯಿತಿಗೆ ಮೂಲಭೂತವಾಗಿ ಕುಡಿಯುವ ನೀರು. ಗ್ರಾಮಗಳ ಸ್ವಚ್ಛತೆ ಬಗ್ಗೆ. ವಿದ್ಯುತ್ ಬೀದಿ ದೀಪಗಳ ಬಗ್ಗೆ. ಆರೋಗ್ಯದ ಬಗ್ಗೆ. ಹೆಚ್ಚಿನ ಆದ್ಯತೆ ನೀಡುತ್ತೇನೆ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರದೊಂದಿಗೆ ನನ್ನ ಅಧಿಕಾರ ಪೂರ್ಣಗೊಳ್ಳುವವರೆಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಗ್ರಾಮದ ಅಭಿವೃದ್ಧಿ ಕಡೆ ಗಮನ ನೀಡುತ್ತೇನೆ ಮತ್ತು ನಿವೇಶನ ಹಾಗೂ ವಸತಿ ಇಲ್ಲದವರ ಬಗ್ಗೆ ಮಾಹಿತಿ ಪಡೆದು ಅವರಿಗೆ ಸಿಗುವ ಸೌಲಭ್ಯಗಳ ಕಡೆ ಜನರಲ್ಲೂ ಸಹ ಜಾಗೃತಿ ಮೂಡಿಸಲಾಗುವುದು.

ಚುನಾವಣಾ ಅಧಿಕಾರಿಯಾಗಿ ಡಾ! ಬಾಬು ರತ್ನ. ಭಾಗವಹಿಸಿ ನೂತನ ಅಧ್ಯಕ್ಷರ ಪೋಷಣೆ ಮಾಡಿದರು.

ಉಪಾಧ್ಯಕ್ಷೆ. ರತ್ನಮ್ಮ. ಸದಸ್ಯರಾದ. ಎಚ್ ಸಿ ಸುರೇಶ್. ಸವಿತಾ ಎಂ. ಲಕ್ಷ್ಮೀಬಾಯಿ. ಶಿವಕುಮಾರ ನಾಯ್ಕ್. ರಮೇಶ ನಾಯ್ಕ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *