ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ
ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಸ್ವ-
ಉದ್ಯೋಗವನ್ನು ಆರಂಭಿಸಿ ಯಶಸ್ವಿ ಉದ್ಯಮಶೀಲ
ವ್ಯಕ್ತಿಗಳಾಗುವ ನಿರೀಕ್ಷೆಯಲ್ಲಿರುವ ವಿಕಲಚೇತನರಿಗೆ
ತರಬೇತಿಯನ್ನು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ
ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ಇಲ್ಲಿ ಗ್ರಾಮೀಣ
ಮಟ್ಟದ ಬಡತನ ರೇಖೆಗಿಂತ ಕೆಳಗಿರುವ 18 ರಿಂದ 45 ವರ್ಷ
ವಯೋಮಾನದ ನಿರುದ್ಯೋಗ ಯುವಕ/ಯುವತಿಯರು
ತರಬೇತಿ ಪಡೆಯಲು ಅರ್ಹರಿರುತ್ತಾರೆ.
ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಊಟ ಮತ್ತು ವಸತಿ
ಸಹಿತವಾಗಿರುತ್ತದೆ. ಏ.05 ರಂದು ತರಬೇತಿ ಪ್ರಾರಂಭವಾಗಿದ್ದು, ಈ
ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಣಿ
ಮಾಡಿಸಬಹುದಾಗಿದೆ. ತರಬೇತಿಯ ಕಾರ್ಯಕ್ರಮ-ಡಿ.ಟಿ.ಪಿ (ಡೆಸ್ಕಟಾಪ್
ಪಬ್ಲಿಷಿಂಗ್), 45 ದಿನಗಳು ತರಬೇತಿ ನಡೆಸಲಾಗುತ್ತದೆ.
ಆಸಕ್ತ ವಿಕಲಚೇತನರು ತರಬೇತಿಯಲ್ಲಿ ಭಾಗವಹಿಸಿ ಸ್ವ-
ಉದ್ಯೋಗ ತರಬೇತಿಯ ಸದುಪಯೋಗ ಪಡೆಯಬಹುದು.
ನೋದಾಣಿಗಾಗಿ ಮೊ.ಸಂ: 7975139332, 7019980484, 9964111314,
9538395817 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ
ಹಾಗೂ ಹಿರಿಯ ನಾಗರಿಕರ
ಸಬಲೀಕರಣಾಧಿಕಾರಿ ಡಾ.ಕೆ.ಕೆ ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *