ಕೇಂದ್ರ ಸರ್ಕಾರದ ನಿರ್ದೇಶನದಂತೆ ದಾವಣಗೆರೆ, ಹರಿಹರ,
ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ
ತಾಲ್ಲೂಕು ಮಟ್ಟದಲ್ಲಿ ಏ. 18 ರಿಂದ 22ರ ವರೆಗೆ ಬೃಹತ್ ಆರೋಗ್ಯ
ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ
ಮತ್ತು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಹೆಚ್ಚಿನ
ಒತ್ತು ನೀಡಲಾಗುವುದು. ಆಯುμÁ್ಮನ್ ಭಾರತ್- ಆರೋಗ್ಯ
ಕರ್ನಾಟಕ, ಆರೋಗ್ಯ ಕಾರ್ಡ್ಗಳನ್ನು ವಿತರಣೆ
ಮಾಡಲಾಗುವುದು. ದೂರವಾಣಿ ಮೂಲಕ ಪ್ರಾಥಮಿಕ
ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ, ಅವಶ್ಯಕತೆ
ಇದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸ್ಸು ಸೇವೆಗಳನ್ನು ಡಿಜಿಟಲ್ ಐ.ಡಿ,
ಕ್ರಿಯೇಷನ್ ಒದಗಿಸುವುದು. ಅಸಾಂಕ್ರಾಮಿಕ ರೋಗಗಳಾದ
ಮಧುಮೇಹ, ಅಧಿಕ ರಕ್ತದ ಒತ್ತಡ, ಬಾಯಿ ಕ್ಯಾನ್ಸರ್
ರೋಗಗಳನ್ನು ಗುರುತಿಸಲು ಸೂಕ್ತ ವ್ಯವಸ್ಥೆ
ಮಾಡಲಾಗುವುದು. ಯೋಗ ಮತ್ತು ಧ್ಯಾನಗಳಿಗೆ
ಸಂಬಂಧಪಟ್ಟ ತರಬೇತಿಗಳನ್ನು ಆಯೋಜಿಸುವ ಸಂಬಂಧ ವಿವಿಧ
ಮಾಧ್ಯಮಗಳ ಮೂಲಕ ಶಿಬಿರದ ಬಗ್ಗೆ ಜನರಲ್ಲಿ ಪ್ರಚಾರ
ಮಾಡುವುದು
ಶಿಬಿರಗಳಲ್ಲಿ ಹೆಚ್ಚಿನ ಜನರು ಬಂದು ಆರೋಗ್ಯ ಸೇವೆಗಳನ್ನು
ಪಡೆಯಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.