ಇಲ್ಲಿನ ಗ್ರಾಪಂನ ಡಿ ಗ್ರೂಪ್ ನೌಕರ ರವಿಕುಮಾರ್ ಎಂಬಾತ ಗ್ರಾಪಂ ಖಾತಾ ಪುಸ್ತಕವನ್ನು ದುರ್ಭಳಿಕೆ ಮಾಡಿಕೊಂಡು ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗವನ್ನು ಎರಡು ಸೈಟ್‌ಗಳನ್ನಾಗಿ ಖಾತೆ ಸೃಷ್ಠಿ ಮಾಡಿ ಪುಸ್ತಕದಲ್ಲಿ ಸ್ವತಹ ಬರೆದು ಕೊಂಡಿರುವುದಾಗಿ ಐನೂರು ಗ್ರಾಮದ ನಾಗರಾಜ್ ನೀಡಿದ ದೂರಿನ ಮೇರೆಗೆ ಹೊನ್ನಾಳಿ ತಾಲ್ಲೂಕ್ ತಾಪಂನ ಕಾರ್ಯನಿರ್ವಹಣಾಧಿಕಾರಿ ರಾಮಭೋವಿ ಬುಧವಾರ ಗ್ರಾಪಂಗೆ ಭೇಟಿನೀಡಿ ಅಧಿಕಾರಿಗಳ ಮತ್ತು ಗ್ರಾಪಂ ಅಧ್ಯಕ್ಷ ಸದಸ್ಯರ ಸಭೆ ನಡೆಸಿದರು.
ಈ ಸಭೆಯಲ್ಲಿ ನೌಕರ ರವಿಕುಮಾರ್ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದು,
ನೌಕರ ರವಿಕುಮಾರ್ ತನ್ನ ಪತ್ನಿ ಹಾಗೂ ಸಂಬAಧಿ ವಿಜಯಕುಮಾರ್ ಪತ್ನಿ ಹೆಸರಿನಲ್ಲಿ ಎರಡು ಸೈಟ್‌ಗಳು ಬರೆದುಕೊಂಡಿರುವ ಜಾಗ ಐನೂರು ಗ್ರಾಮದ ಸರ್ವೆ ನಂಬರ್ 26ರ ಸರ್ಕಾರಿ ಜಾಗವಾಗಿದ್ದು, ವಿಜಯ್‌ಕುಮರ್ ಸಹ ಸರ್ಕಾರಿ ಶಾಲೆಯ ಶಿಕ್ಷಕ ಎಂದು ಗೊತ್ತಾಗಿದೆ.
ಈ ಹಿಂದೆ ಐನೂರು ಗ್ರಾಮದ 44 ನಿರಾಶ್ರಿತ ಕುಟುಂಬಗಳಿಗೆ 94ಸಿ ಅಡಿ ಇದೇ ಸರ್ವೇ ನಂಬರ್‌ನಲ್ಲಿ ನಿವೇಶನ ಜಾರಿಯಾದ ಸಂದರ್ಭದಲ್ಲಿ ಈ ನೌಕರ ಪುಸ್ತಕ ದುರ್ಭಳಕೆ ಮಾಡಿಕೊಂಡು ಸೈಟ್ ನಂಬರ್ 220 ಮತ್ತು 221 ನ್ನು ತನ್ನ ಪತ್ನಿ ಹಾಗೂ ತನ್ನ ಸಂಬAದಿಯ ಪತ್ನಿ ಹೆಸರಿಗೆ ಬರೆದುಕೊಂಡಿದ್ದು ಗೊತ್ತಾಗಿದೆ.
ಇದೀಗ ಇದು ಗೊತ್ತಾಗುತ್ತಿದ್ದಂತೆ ಗ್ರಾಪಂ ಅಧಿಕಾರಿಗಳು ಇದು ನಕಲಿ ಖಾತೆ ಎಂದು ಖಾತೆಯನ್ನು ವಜಾಗೊಳಿಸಿದ್ದು, ತಪ್ಪುಮಾಡಿದ ಅಧಿಕಾರಿಯ ವಿರುದ್ದ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಆಸ್ಪದ ಮಾಡಿದೆ.
ಸಭೆಯಲ್ಲಿ ತಪ್ಪಿತಸ್ಥ ನೌಕರನಿಗೆ ನೋಟಿಸ್ ಜಾರಿ ಮಾಡಿ, ಸ್ಪಷ್ಟಿಕರಣ ಪಡೆದು ಮತ್ತೊಮ್ಮೆ ಸಭೆ ಕರೆಯಲು ರಾಮಭೋವಿ ಗ್ರಾಪಂ ಪಿಡಿಒ ಪರಮೇಶ್ ಕೊಳೂರ್ ಅವರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಗ್ರಾಪಂ ಆಧ್ಯಕ್ಷೆ ಸುಧಾಲೋಕಪ್ಪ ಉಪಾಧ್ಯಕ್ಷೆ ಶಾಂತಕೃಷ್ಣಮೂರ್ತಿ. ಸದಸ್ಯರಾದ ಸವಿತಾ, ಶುಠಿ ಕರಿಬಸಪ್ಪ, ಜಬ್ಬರ್ ಖಾನ್, ಸುಲೇಮಾನ್ ಖಾನ್, ಮುಂತಾದ ಸದಸ್ಯರಿದ್ದರು.