ಅತ್ಯಂತ ಕಷ್ಟದ ಪರಿಸ್ಥಿಯಲ್ಲಿ ಜನಿಸಿ ಸ್ವಸಾಮಥ್ರ್ಯದಿಂದ ಎಲ್ಲಾ ವಿಧವಾದ
ನೋವು ಶೋóಣೆಯ ನಡುವೆಯೂ ಬಹುಜನರ ನೋವುಗಳಿಗೆ

ದನಿಯಾಗಿ ಅವರ ಬೇಡುವ ದಿನಗಳ ಇಲ್ಲವಾಗಿಸಿ ಅವರಿಗೆ ಹಕ್ಕಿನ
ದಿನಗಳನ್ನು ತಂದುಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರರು ಎಂದು
ಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ ಹೇಳಿದರು.
ಗುರುವಾರ ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ,
ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆ
ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ
ಏರ್ಪಡಿಸಲಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರರ 131 ನೇ ಹಾಗೂ ಡಾ. ಬಾಬು
ಜಗಜೀವನ್ ರಾಂ ರವರ 115 ನೇ ಜನ್ಮ ದಿನಾಚರಣೆ ಕಾರ್ಯಕ್ರದಲ್ಲಿ
ಮಾತನಾಡಿದ ಅವರು ಅಂಬೇಡ್ಕರ ಅವರಲ್ಲಿದ್ದುದು ವಿಶ್ವಪ್ರಜ್ಞೆ, ಅವರು
ಕೇವಲ ದಲಿತ ನಾಯಕರಲ್ಲ, ಇಡೀ ದೇಶದ ದಮನಿತರ ಪಾಲಿನ ನಾಯಕ,
ಭಲಿಷ್ಟ ಸಮಗ್ರ ಭಾರತಕ್ಕಾಗಿ ಶ್ರಮಿಸಿದವರು, ಅವರನ್ನು ಕೇವಲ
ಸಂವಿಧಾನಕ್ಕೆ ಸೀಮಿತಗೊಳಿಸುವುದು ಬೇಡ, ಹಲವಾರು ಕ್ಷೇತ್ರಗಳಲ್ಲಿ
ಸೇವೆ ಸಲ್ಲಿಸಿದವರು,ಅವರೊಬ್ಬ ಬಹುದೊಡ್ಡ ಚಿಂತಕ, ವಾಗ್ಮಿ,ಬರಹಗಾರರು
ಎಂದರು.
ಭಾರತ ಇಂದು ಅಖಂಡವಾಗುಳಿದಿದೆ ಎಂದರೆ ಅದು ಸಂವಿಧಾನದಿಂದ,
ಅಂತಹ ಸಂವಿಧಾನವನ್ನು ಬದಲಾಯಿಸಬೇಕು, ಅದನ್ನು ಸುಡಬೇಕು
ಎಂಬಂತಹ ಮನಸ್ಥಿತಿಯವರಿಂದ ಸಂವಿಧಾನವನ್ನು ರಕ್ಷಿಸಿ ಸಂವಿಧಾನದ
ಆಶಯಗಳನ್ನು ಎಲ್ಲರೊಳಗೆ ಬಿತ್ತಬೇಕಾಗಿದೆ
ಸುಧಾರಣೆ ಎಂಬ ಕಸಬರಗೆ ಹಿಡಿದು ಸಾಮಾಜಿಕ ಕಸ ಗುಡಿಸಿದ ಬುದ್ದ
ಬಸವ ಅಂಬೇಡ್ಕರರು ನಮ್ಮೊಳಗಿನ ಮಲಪ್ರಜ್ಞೆಯನ್ನು ತೊಲಗಿಸಲು
ಶ್ರಮಿಸಿದವರು, ದೇಶ ಶುಚಿಗೊಳಿಸುವುದಕ್ಕಿಂತ ಮೊದಲು ನಮ್ಮನ್ನು
ನಾವು ಶುಚಿಗೊಳಸಿಕೊಳ್ಳಬೇಕು,ಮೊದಲು ನಾವು
ಅಕ್ಷರವಂತರಾಗಬೇಕು, ಶಿಕ್ಷಣದ ಮುಖಾಂತರ ಸಮಾಜದ
ಮುಖ್ಯವಾಹಿನಿಗೆ ಬರಲು ಸಾಧ್ಯ ಎಂಬ ಮಂತ್ರ ಹೇಳಿಕೊಟ್ಟವರು
ಅಂಬೇಡ್ಕರರು ಎಂದರು.
ಶೋಷಣೆಯ ಮೂಲ ಬೇರು ಜಾತಿ, ಅಂತಹ ಜಾತಿ ವ್ಯವಸ್ಥೆಯನ್ನು
ದೂರ ತಳ್ಳಿ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಿದವರು
ಅಂಬೇಡ್ಕರರು,ಶಿಕ್ಷಣದ ಮುಖಾಂತರ ಕ್ರಾಂತಿಗೆ ಕರೆಕೊಟ್ಟವರು
ಅಂಬೇಡ್ಕರರು, ಬಹುತ್ವ ಭಾರತದೊಳಗೆಬಹುತ್ವ ಇಲ್ಲ, ಬಹುಜನರಿಗೆ
ಸಾಮಾಜಿಕ ನ್ಯಾಯ ಸಿಗಬೇಕಾದರೆ ಬಾಬಾ ಸಾಹೇಬರ ಹೋರಾಟವೊಂದೇ ದಾರಿ
ಎಂದರು.
ಪ್ರಾಧ್ಯಾಪಕರು ಹಾಗೂ ಜಗಜೀವನ ರಾಂ ಅಧ್ಯಯನ ಕೇಂದ್ರದ
ನಿರ್ದೇಶಕರಾದ ಡಾ.ಹೆಚ್ ವಿಶ್ವನಾಥ್ ಮಾತನಾಡಿ ಡಾ, ಬಾಬು ಜಗಜೀವನ ರಾಂ ಒಬ್ಬ
ಅತ್ಯುತ್ತಮ ಸಂಸದೀಯ ಪಟು, ಹಲವಾರು ಖಾತೆಗಳನ್ನು
ಯಶಸ್ವಿಯಾಗಿ ನಿಭಾಯಿಸಿದವರು, ಹಸಿರು ಕ್ರಾಂತಿಯ ಹರಿಕಾರರಾಗಿದ್ದ

ಅವರು ಸಚಿವರಾಗಿದ್ದ ಅವಧಿಯಲ್ಲಿ ದೇಶದಲ್ಲಿ ಭೀಕರ ಬರಗಾಲ
ಉಂಟಾದಾಗ ಸರಕಾರದ ಒಡೆತನದ ಭೂಮಿಯನ್ನು ಕೃಷಿ ಕಾರ್ಮಿಕರಿಗೆ
ನೀಡಿದವರು, ಅದರಂತೆಯೇ ವರ್ಗ ಸಂಘರ್ಷದ ವಿರುದ್ದ ಹೋರಾಡಿದ
ಮಹಾನ್ ಚೇತನ ಎಂದರು. ರೈಲ್ವೆ ಇಲಾಖೆ ಸಚಿವರಾಗಿದ್ದಾಗ ಇಲಾಖೆಯ
ಹುದ್ದೆಗಳಲ್ಲಿ ಮೀಸಲು ಕೊಡಿಸುವ ಮೂಲಕ ತುಳಿತಕ್ಕೊಳಗಾದವರ
ಪರ ನಿಂತವರು ಜಗಜೀವನ ರಾಂ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎಸ್.ಎ. ರವೀಂದ್ರನಾಥ್ ಮಾತನಾಡಿ
ಸಂವಿಧಾನ ಉಳಿಸಲು ಯಾರೂ ಹೋರಾಟ ಮಾಡುವುದು ಬೇಡ, ಯಾರೂ
ಸಂವಿಧಾನವನ್ನು ಬದಲಾಯಿಸುತ್ತಲ್ಲ, ಸರ್ಕಾರದ ಸವಲತ್ತುಗಳನ್ನು
ಬಡಜನರಿಗೆ ತಲುಪಿಸುವ ಕಾರ್ಯ ಮಾಡುವುದರಂದಿಗೆ ಬಾಬಾ ಸಾಹೇಬ್
ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರಿಗೆ ಗೌರವ ಸಲ್ಲಿಸೋಣ
ಎಂದರು.
ಮಾಯಕೊಂಡ ಕ್ಷೇತ್ರದ ಶಾಸಕರಾದ ಪ್ರೊ. ಲಿಂಗಣ್ಣ ಮಾತನಾಡಿ,
ಅಸ್ಪøಶ್ಯರು, ಮಹಿಳೆಯರು,ರೈತರ ಏಳಿಗೆಗೆ ಶ್ರಮಿಸಿದವರು
ಅಂಬೇಡ್ಕರ್ ಹಾಗೂ ಜಗಜೀವನ ರಾಂ ರವರು, ದಾವಣಗೆರೆ ನಗರದಲ್ಲಿ
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರರ ಭವನ
ಶೀಘ್ರದಲ್ಲಿ ನಿರ್ಮಾಣವಾಗಲು ಎಲ್ಲರೂ ಕೈಜೋಡಿಸೋಣವೆಂದರು.
ಮುಖಂಡರಾದ ಬಿ.ಹೆಚ್.ವೀರಭದ್ರಪ್ಪ, ಹಾಗೂ ಜಯದೇವ ನಾಯ್ಕ
ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾವಣಗೆರೆ ವಿವಿ ವಿಧ್ಯಾರ್ಥಿನಿ ಬಿ.ಎ. ಪದವಿಯಲ್ಲಿ ಚಿನ್ನದ ಪದಕ ಪಡೆದ ಮಮತ
ಅವರನ್ನು ಸನ್ಮಾನಿಸಲಾಯಿತು ಹಾಗೂ ಅಂಬೇಡ್ಕರ್ ಹಾಗೂ ಜಗಜೀವನ ರಾಂ
ಬಗೆಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ
ಸನ್ಮಾನಿಸಲಾಯಿತು.ಹಾಗೂ ಶ್ರದ್ದಾಪೂರ್ವಕವಾಗಿ ಕಾರ್ಯ ನಿರ್ವಹಿಸಿದ
ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಹೆಗ್ಗೆರೆ ರಂಗಪ್ಪ ಹಾಗೂ ಐರಣಿ ಚಂದ್ರು ತಂಡದವರಿಂದ
ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಜಗಜೀವನ ರಾಂ ಭಾವಚಿತ್ರಗಳನ್ನು
ಜಯದೇವ ವೃತ್ತ, ಅಶೋಕ ರಸ್ಥೆ, ಗಾಂಧೀ ವೃತ್ತ, ಪಿಬಿ ರಸ್ಥೆಯ
ಮೂಲಕ ಮಹಾನಗರ ಪಾಲಿಕೆ ಆವರಣಕ್ಕೆ ಕಲಾತಂಡಗಳೊಂದಿಗೆ
ಮೆರವಣಿಗೆಯಲ್ಲಿ ತರಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮೇಯರ್
ಆರ್.ಜಯಮ್ಮ ಗೋಪಿನಾಯ್ಕ್, ಉಪ ಮೇಯರ್ ಗಾಯತ್ರಿಬಾಯಿ, ದೂಢಾ
ಅಧ್ಯಕ್ಷರಾದ ಕೆ.ಎಂ ಸುರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್

ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ, ಮಹಾನಗರ ಪಾಲಿಕೆ
ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರಾದ
ಕೌಸರ್ ರೇಷ್ಮಾ.ಜಿ, ಮಾಜಿ ಮೇಯರ್ ಎಸ್.ಟಿ ವೀರೇಶ್, ಸ್ಥಾಯಿ ಸಮಿತಿ
ಅಧ್ಯಕ್ಷರಾದ ಎಲ್ ಗೋಣೆಪ್ಪ, ಸಮಾಜದ ಮುಖಂಡರಾದ ನೀಲಗಿರಿಯಪ್ಪ,
ಸೋಮ್ಲಾಪುರ ಹನುಮಂತಪ್ಪ,ಆಂಜಿನಪ್ಪ, ಕುಂದವಾಡ ಮಂಜುನಾಥ್
ಮಹಾನಗರ ಪಾಲಿಕೆಯ ಸರ್ವ ಸದಸ್ಯರು ಮತ್ತು ದಲಿತ ಹಾಗೂ
ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *