ಕಡೆ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದಲ್ಲಿ
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಏ.18 ರಂದು
ನಡೆಯಲಿದೆ. ಕಾರ್ಯಕ್ರಮ ಈ ಹಿಂದೆ ಏ.16 ಕ್ಕೆ ನಿಗದಿಯಾಗಿತ್ತು.
ಜಗಳೂರು ತಾಲೂಕಿನ ಕಸಬ ಹೋಬಳಿ ಬಿದರಕೆರೆ
ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು
ಕಂದಾಯ ಇಲಾಖೆಯ ಸೇವೆಗಳಾದ ಪೌತಿಖಾತೆ ಬದಲಾವಣೆ,
ಸಾಮಾಜಿಕ ಭದ್ರತಾ ಯೋಜನೆ, ಪಿಂಚಣಿ ಸೌಲಭ್ಯ, ಪಡಿತರಚೀಟಿ,
ಪಹಣಿ ಲೋಪದೋಷ ತಿದ್ದುಪಡಿ ಮುಂತಾದ
ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಪ್ರಯೋಜನ
ಪಡೆದುಕೊಳ್ಳಬಹುದಾಗಿದೆ.
ಉಳಿದಂತೆ ತಾಲ್ಲೂಕು ಮಟ್ಟದ ಗ್ರಾಮ ವಾಸ್ತವ್ಯ
ಕಾರ್ಯಕ್ರಮಗಳು ಏಪ್ರಿಲ್ 16 ರಂದೇ ನಡೆಯಲಿವೆ ಎಂದು
ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.