ಸಾಸ್ವೆಹಳ್ಳಿ ಯ ಐನೂರು ಬಡಾವಣೆಯ ಡಿಸ್ ಹಾಲೇಶಪ್ಪ ಎಂಬುವರ ಮನೆಯ ಮುಂದಿನ ತೆಂಗಿನಮರಕ್ಕೆ ಸಿಡಿಲು ಬಡಿದು ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಸಾಸ್ ಹಳ್ಳಿಯ ಐದುನೂರು ಬಡಾವಣೆಯಲ್ಲಿ ಶನಿವಾರ ಸಂಜೆ ನಡೆದಿದೆ
ಸಾಸ್ವೆಹಳ್ಳಿ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಜೆ ರಥೋತ್ಸವ ಇರುವುದರಿಂದ ಎಲ್ಲಾ ಜನರು ದೇವಸ್ಥಾನದ ಹತ್ತಿರ ಹೋಗಿದ್ದು ಗುಡುಗು ಸಿಡಿಲು ಮಿಂಚು ಆರ್ಭಟದಿಂದ ಡಿಸ್ ಮಾಲಿಕ ಹಾಲೇಶಪ್ಪ ಎಂಬುವವರ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ನೋಡುನೋಡುತ್ತಿದ್ದಂತೆಯೇ ಧಗಧಗ ಎಂದು ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟುಹೋಯಿತು ಜನರು ಆಶ್ಚರ್ಯದಿಂದ ನೋಡು ನೋಡುತ್ತಿದ್ದಂತೆ ಉರಿದು ಹೋಯಿತು ಸದ್ಯ ಮನೆಯ ಮುಂದೆ ಯಾರು ಇಲ್ಲದ ಸಂದರ್ಭದಲ್ಲಿ ಅನಾಹುತಗಳು ತಪ್ಪಿದಂತಾಗಿದೆ.