ಇಂದು ಮುಂಜಾನೆ ದೇವಾಲಯದಲ್ಲಿ ಶಿಲಾ ಮೂರ್ತಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ನಡೆದ ನಂತರ ಆಂಜನೇಯ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ಉತ್ಸವ ಮೂರ್ತಿಗಳ ಮೆರವಣಿಗೆಯೊಂದಿಗೆ ದೇವಾಲಯದಿಂದ ಪೂಜಿಸಿದ ಕಳಸವನ್ನು ತಂದು ನೂತನವಾಗಿ ನಿರ್ಮಾಣಗೊಂಡಿರುವ ರಥಕ್ಕೆ ಕಳಾಸಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರದಲ್ಲಿ ವಿವಿಧ ಹೂವು ಬಣ್ಣ ಬಣ್ಣದ ಪಟಗಳಿಂದ ರಥವನ್ನು ಅಲಂಕರಿಸಲಾಗಿತು.
ದಿನ ವಿಡಿ ವಿವಿಧ ಪೂಜಾ ವಿದಿವಿಧಾನಗಳು ಪೂಜಾ ಕಾರ್ಯಗಳು ದೇವಾಲಯದಲ್ಲಿ ನಡೆದವು, ಸಂಜೆ ಪದ್ದತಿಯಂತೆ ಉತ್ಸವ ಮೂರ್ತಿಗಳನ್ನು ಇಲ್ಲಿನ ವೈ಼ಷ್ಣವ ಸಮಾಜದವರ ಮನೆಗೆ ಮೆರವಣಿಗೆಯ ಮುಕೇನ ಕೋರೂಟಕ್ಕೆ ತಗೆದುಕೊಂಡು ಹೋಗಿ ಬಂದು ರಥೋತ್ಸವಕ್ಕೆ ಬಲೇಬಾನ ಹಾಕಿ, ಉತ್ಸವ ಮೂರ್ತಿಗಳು ರಥವನ್ನೇರಿದ ಮೇಲೆ ನರೆದಿದ್ದ ಜನರು ರಥ ಎಳೆದು ರಾಮ ರಾಮ ಗೋವಿಂದ ಗೋವಿಂದ ಎಂದು ಭಕ್ತಿ ಸಮರ್ಪಿಸಿದರು.
ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಹನುಮ ಜಂತಿಯನ್ನು ಸರಳವಾಗಿ ಆಚರಣೆ ಮಾಡಿದ್ದ ಗ್ರಾಮಸ್ಥರು ಈ ಬಾರಿ ಅದ್ದೂರಿಯಾಗಿಯೆ ನಡೆಸಿದರು, ದೇವಾಲಯದ ಆವರಣದಲ್ಲಿ ಭಕ್ತರಿಗೆ ಬಾದುಷಹ, ಲಾಡು, ಶಾವಿಗೆ ಪಾಯಿಸ, ಚಿತ್ರನ್ನ, ಅನ್ನ ಸಾಂಬಾರ್‌ನ ಬರ್ಜರಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬೀರಗೊಂಡನಹಳ್ಳಿ ಗ್ರಾಮದ ವೀರಭದ್ರಚಾರ್ ಶಿಲ್ಪಿಗಳ ತಂಡ ಕಳೆದ ಆರು ತಿಂಗಳಿAದ ತಮ್ಮ ಭವ್ಯ ಕಲಾಕೃತಿಗಳೊಂದಿಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥ ಮತ್ತು ಉತ್ಸವ ಮೂರ್ತಿಯ ಪಲ್ಲಕ್ಕಿ, ಕುದರೆ ಸವಾರಿ ನಿರ್ಮಾಣ ಮಾಡಿದ್ದು, ಇಂದು ಹನುಮ ಜಯಂತಿಯ0ದು ರಥೋತ್ಸವ ಮಾಡುವ ಮೂಲಕ ನೂತನ ರಥವನ್ನು ಲೋಕರ್ಪಣೆ ಮಾಡಲಾಗಿತು.