ನ್ಯಾಮತಿ : ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆಡಾಡುವುದನ್ನು ತಪ್ಪಿಸಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರು ತಮ್ಮ ಕೆಲಸಗಳಿಗಾಗೀ ಸರ್ಕಾರಿ ಕಚೇರಿಗಳನ್ನು ಅಲೆಯ ಬೇಕಾಗಿತ್ತು, ಆದರೇ ಇದೀಗ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಬಂದು ಅವರ ಸಮಸ್ಯೆ ಆಲಿಸುವ ಜೊತೆಗೆ ಸ್ಥಳದಲ್ಲೇ ಅವನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಜನರು ಸರ್ಕಾರಿ ಕಚೇರಿ ಅಲೆಯುವುದು ತಪ್ಪಿದಂತಾಗಿದೆ ಎಂದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗುವಂತಾಗಿದ್ದು ಗ್ರಾಮ ವಾಸ್ತವ್ಯ ಎಂಬುದು ಅಬೂತ ಪೂರ್ವವಾದ ಕಾರ್ಯಕ್ರಮವಾಗಿದೆ ಎಂದರು.
ಸಾಮಾನ್ಯ ಶಿಕ್ಷಕನ ಮಗನನ್ನು ಮೂರು ಬಾರೀ ಶಾಸಕನ್ನಾಗಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರು ಮಾಡಿದ್ದು ನಾನು ಅವರಿಗೆ ಚಿರಋಣಿ ಎಂದ ರೇಣುಕಾಚಾರ್ಯ ನನ್ನ ಜನ್ಮ ಭೂಮಿ ನಮ್ಮ ಕರ್ಮ ಭೂಮಿ ಕೂಡ ಇದೇ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕುಗಳು ನಿರಿನಿಂದ ವಂಚಿತವಾಗಿದ್ದು ರೈತರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು ಇದನ್ನು ಮನಗಂಡು ಶಾಶ್ವತ ನೀರಾವರಿ ಯೋಜನೆ ಮಾಡ ಬೇಕೆಂಬ ಉದ್ದೇಶದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಎಲ್ಲಾ ಕೆರೆಗಳನ್ನು 518 ಕೋಟಿ ವೆಚ್ಚದಲ್ಲಿ ಭರ್ತಿ ಮಾಡುತ್ತಿದ್ದು ಸದ್ಯದರಲ್ಲದೇ ಅವಳಿ ತಾಲೂಕಿನ ಕರೆಗಳಿಗೆ ನೀರು ಹರಿಯಲಿದೆ ಎಂದರು.
ಗ್ರಾಮದ 27 ಜನರಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿದ ರೇಣುಕಾಚಾರ್ಯ ಕೋವಿಂಡ್ ನಿಂದ ಮೃತಪಟ್ಟವರಿಗೆ ಒಂದು ಲಕ್ಷದ ಪರಿಹಾರದ ಚೆಕ್ ವಿತರಿಸಿದರಲ್ಲದೇ ವೈಯಕ್ತಿಕ ಹತ್ತು ಸಾವಿರ ಪರಿಹಾರ ನೀಡಿದರು.
ಮೇ 17,18,19 ಈ ಮೂರು ದಿನಗಳಲ್ಲಿ ಸಿಎಂ ಅವರ ದಿನಾಂಕ ಕೇಳಿದ್ದು, ಅವರನ್ನು ಕರೆಸಿ ಬೃಹತ್ ಕಾರ್ಯಕ್ರಮ ಮಾಡ ಬೇಕೆಂಬ ಯೋಜನೆ ರೂಪಿಸಿದ್ದು ಇದಕ್ಕೆ ಅವಳಿ ತಾಲೂಕಿನ ಜನರ ಸಹಕಾರ ಬೇಕೆಂದು ಇದೇ ಮನವಿ ಮಾಡಿದರು.
ಈ ಸಂದರ್ಭ ಎಸಿ ತಿಮ್ಮಪ್ಪ, ತಹಶೀಲ್ದಾರ್ ರೇಣುಕಾ, ಉಪತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿದ್ದರು.

Leave a Reply

Your email address will not be published. Required fields are marked *