ದಾವಣಗೆರೆ,ಎ.17: ನಮ್ಮ ಕುಟುಂಬದ ಹೆಸರಿನಲ್ಲಿ ಇರುವ ಸುಮಾರು
5ಎಕರೆ 8 ಗುಂಟೆ ಜಮೀನಿನಲ್ಲಿ
ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಕ್ರಮವಾಗಿ ಪಹಣಿ ಪಡೆದುಕೊಂಡು ಮನೆ ನಿರ್ಮಾಣ ಮಾಡುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ ಸಹ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಉಪನ್ಯಾಸಕಿ ವನಜಾಕ್ಷಮ್ಮ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ೦ದು ಮಾತನಾಡಿದ ಅವರು, ಜಮೀನಿಗೆ ಸಂಬಂಧ ಇಲ್ಲದ ವ್ಯಕ್ತಿಗಳಿಂದ ಶಾಸಕರೂ, ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ
ಇಲ್ಲದವರಿಗೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಹಾಗೂ ಸಿಬ್ಬಂದಿಗಳು ಶಾಮೀಲಾಗಿ ಕೇವಲ MLA ರೇಣುಕಾಚಾರ್ಯ ಒಂದೇ ವಾರದಲ್ಲಿ ಅಕ್ರಮವಾಗಿ ಪಹಣಿ ತಯಾರಿಸಿದ್ದಾರೆ. ಜನ ತಿಂಗಳು ಗಟ್ಟಲೆ ಕಚೇರಿ ಅಲೆದಾಡಿದರೂ ಪಹಣಿ ಸಿಗುವುದಿಲ್ಲ. ಶಾಸಕರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಹಶೀಲ್ದಾರರ ಕಚೇರಿ ಮುಂದೆ ಅನಿರ್ಧಿಷ್ಟ ಅವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಕ್ರಮವಾಗಿ ಕ್ರಯಕ್ಕೆ ಪಡೆದು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನಾವುಗಳು ಇ ಸ್ವತ್ತು ತಂತ್ರಾಂಶದ ಅಡಿಯಲ್ಲಿ ನಮ್ಮ ಹೆಸರಲ್ಲಿ ದಾಖಲೆಗಳನ್ನು ನೀಡಲಾಗಿದೆ. ಆದರೂ ಮತ್ತೆ ಮನೆ ಸೇರಿದಂತೆ ವಾಣಿಜ್ಯ ಮಳಿಗೆಗಳನ್ನು ಸಹ ನಿರ್ಮಾಣ ಮಾಡುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ. ಕಾರಣ ನ್ಯಾಯಾಲಯ ಪ್ರಕರಣ ಇತ್ಯರ್ಥ ಆಗುವವರೆಗೂ ನಮ್ಮ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಮ್ಮ ಹೆಸರಿನಲ್ಲಿ ಇರುವ ದಾಖಲೆಗಳಲ್ಲಿ ಶಾಸಕರು ಸೇರಿದಂತೆ ಇತರರ ಹೆಸರು ಸೇರಿಸಲಾಗಿದೆ. ನಮ್ಮ , ಕುಟುಂಬಕ್ಕೆ ಯಾವುದೇ ಸಂಬಂಧ ಇಲ್ಲ.
.
ದೊಡ್ಡ ಕೆಂಚಮ್ಮ ಮಾತನಾಡಿ, ಯಾವುದೇ ಆಸ್ತಿಯನ್ನು ಮತ್ತೊಬ್ಬರಿಗೆ ನೋಂದಣಿ ಮಾಡುವಾಗ 13 ವರ್ಷದ ವಂಶ ವೃಕ್ಷದ ಆಧಾರದ ಮೇಲೆ ಮಾಡಬೇಕು. ಆದರೆ, ಅಂತಹ ಯಾವುದೇ ದಾಖಲೆ ಇಲ್ಲದೇ, ನಿಜವಾದ ಆಸ್ತಿ ವಾರಸುದಾರರು ನಾವು ನಮ್ಮಿಂದ ಯಾವುದೇ ಆಸ್ತಿ ಖರೀದಿ ಮಾಡದೇ ಬೇರೆಯವರಿಂದ ಅಕ್ರಮವಾಗಿ ಆಸ್ತಿ ಪಡೆದಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಡೀ ಕುಟುಂಬ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೀತಾ, ಪ್ರತಿಭಾ, ಸುಭಾಷಚಂದ್ರ ಇತರರಿದ್ದರು.

Leave a Reply

Your email address will not be published. Required fields are marked *