ಹೊನ್ನಾಳಿ:- ಏಪ್ರಿಲ್ -17 -ತಾಲೂಕು ಪಟ್ಟಣದಲ್ಲಿರುವ ಅಗಳ ಮೈದಾನದಲ್ಲಿ ಭಾರತೀಯ ಜನತಾ ಪಾರ್ಟಿ ಹೊನ್ನಾಳಿ ಮಂಡಲ ಅವಳಿ ತಾಲೂಕುಗಳ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೋರ್ಚಾ ಸಹಯೋಗದಲ್ಲಿ ಇಂದು ಭಾರತರತ್ನ ಸಂವಿಧಾನಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾವೇಶವನ್ನು ಎಂಪಿ ರೇಣುಕಾಚಾರ್ಯರು ದೀಪವನ್ನ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.
ಸ್ವಾಗತ ಭಾಷಣವನ್ನು ಭೋವಿ ಸಮಾಜ ನಿಗಮದ ಅಧ್ಯಕ್ಷ ಅಜಯ್ ಚೀಲೂರು ನೆರವೇರಿಸಿದರು.
ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಬಿಜೆಪಿ ಮೋರ್ಚಾ ಕಿಸಾನ್ ಸಂಘದ ಅಧ್ಯಕ್ಷರಾದ ಶಾಂತರಾಜ್ ಪಾಟೀಲ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷವು ದಲಿತರಿಗೆ ಉರಿಯುವ ಮನೆ ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಡಿ ಎಂದು ಹೇಳುತ್ತಾ ನಮ್ಮ ಬಿಜೆಪಿ ಕೇಂದ್ರ ಸರ್ಕಾರವು ದಲಿತ ಮುಖಂಡರಾದ ಬಂಗಾರು ಲಕ್ಷ್ಮಣ ರವರನ್ನು ದಲಿತ ಕುಟುಂಬದಲ್ಲಿ ಹುಟ್ಟಿ ರುವವರನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿತ್ತು ಎಂದು ನೆನಪಿಸಿದರು.
ರೇಣುಕಾಚಾರ್ಯ ಹೊನ್ನಾಳಿ ತಾಲೂಕಿನಲ್ಲಿ ಶಾಸಕರಾದ ಸಂದರ್ಭದಲ್ಲಿ ದಲಿತರ ಕೇರಿಗಳಿಗೆ ಸಿಮೆಂಟ್ ರಸ್ತೆ ಬಾಕ್ಸ್ ಚರಂಡಿ ವ್ಯವಸ್ಥೆ ಪ್ರತಿಯೊಂದು ಮನೆಗಳಿಗೆ ನೀರಿನ ವ್ಯವಸ್ಥೆ ಕಾಮಗಾರಿಗಳನ್ನು ಮಾಡಿ ದಲಿತರ ಕೇರಿಗಳು ವಿಜೃಂಭಿಸುತ್ತವೆ ಎಂದು ಹೇಳಿದರು. ಆದರೆ ಕಾಂಗ್ರೆಸ್ ಪಕ್ಷದವರು ತಮ್ಮ ಮನೆ ಬಾಗಲಿಗೆ ದಲಿತರನ್ನು ಕರೆಸಿಕೊಳ್ಳುತ್ತಿದ್ದರು ಆದರೆ ಹೊನ್ನಾಳಿ ತಾಲೂಕಿನ ಹಾಲಿ ಶಾಸಕ ಎಂಪಿ ರೇಣುಕಾಚಾರ್ಯರು ಪ್ರತಿಯೊಂದು ದಲಿತರ ಕೇರಿಗಳಿಗೆ ಹೋಗಿ ಆಲಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಎಸ್ ಸಿ ಮೋರ್ಚಾ ತಾಲೂಕ ಅಧ್ಯಕ್ಷರು ಉಮೇಶ್ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದಡಿಯಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಲಿತರಿಗೆ ಅನುಕೂಲವಾಗಲೆಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದರ ಜೊತೆಗೆ ಅಂಬೇಡ್ಕರ್ ಹುಟ್ಟುಹಬ್ಬವನ್ನು ಮುಂದಿನ ವರ್ಷ ಸುಮಾರು 20 ಸಾವಿರ ದಲಿತ ಜನರನ್ನು ಸೇರಿಸಿ ಅಂಬೇಡ್ಕರ್ ಅವರ ಹುಟ್ಟುಹಬ್ಬವನ್ನು ಮಾಡುತ್ತೇವೆ ಎಂದು ಮಾರುತಿ ನಾಯಕ್ ತಿಳಿಸಿದರು .ಇದರ ಜೊತೆಗೆ ಇಲ್ಲಿ ಸೇರಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎಲ್ಲಾ ಮುಖಂಡರು ಮತ್ತು ಸಮಾಜದ ಕಾರ್ಯಕರ್ತರುಗಳು ಎಂಪಿ ರೇಣುಕಾಚಾರ್ಯ ಪರವಾಗಿ ಬೆಂಬಲವಾಗಿ ಬೆನ್ನಿಗೆ ನಿಂತು 20 23 ರ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ವಾಗ್ದಾನ ಮಾಡಿದರು.
ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಜೆಕೆ ಸುರೇಶ್ ಮಾತನಾಡಿ ಎಷ್ಟು ಮಳೆಬಂದರೂ ಅಂಬೇಡ್ಕರ್ ಜಯಂತಿಯನ್ನು ಯಶಸ್ವಿ ಗೊಳಿಸಿದ್ದೇವೆ ಎಂದರೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮುದಾಯದವರು ಬಂದು ಇಂದು ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು ನಂತರ ಮಾತನಾಡುತ್ತಾ ಜಿಕೆ ಸುರೇಶ ರವರು ಶಾಸಕ ಎಂ ಪಿ ರೇಣುಕಾಚಾರ್ಯ ಮೇಲೆ ವಿನಾಕಾರಣ ಪ್ರತಿಭೆಟನೆಯನ್ನು ಮಾಡುತ್ತಿದ್ದಾರೆ ಇವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಶಾಸಕ ಎಂ ಪಿ ರೇಣುಕಾಚಾರ್ಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 131ನೇ ಜನ್ಮದಿನ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಮಾವೇಶವನ್ನು ಉದ್ಘಾಟನೆಯನ್ನು ಮಾಡಿ ನಂತರ ಮಾತನಾಡಿ ಸುರಿಯುವ ಮಳೆಯಲ್ಲಿ ಹಳ್ಳಿಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರುಗಳು ಪ್ರವಾಸ ಮಾಡಿ ಗುಡುಗು-ಸಿಡಿಲು ಮಿಂಚು ಎನ್ನದೆ ನಮ್ಮಕೆಲಸ ಮಾಡಿದ್ದಾರೆ ಮತ್ತು ಭಾರತೀಯ ಜನತಾ ಪಾರ್ಟಿಗೂ ಮಳೆಗೂ ನಿಕಟ ಸಂಬಂಧ ಮಳೆಯು ಬಂದು ಶುಭ ಸೂಚನೆಯನ್ನು ಕೊಟ್ಟಿದೆ ಏಕೆಂದರೆ ಕಾಂಗ್ರೆಸ್ ಪಕ್ಷ ಎಂಬ ಕೊಳೆಯು ಮಳೆಯ ಮೂಲಕ ಕೊಚ್ಚಿಹೋಗಿದೆ ಎಂದು ಹೇಳುತ್ತಾ, ಕೆಲವು ದಲಿತ ಮುಖಂಡರುಗಳು ಮಾಜಿ ಶಾಸಕರ ಕೈವಾಡ ದಿಂದ ನನ್ನ ವಿರುದ್ಧ ಆಪಾದನೆಯನ್ನು ಮಾಡಿ ಪ್ರತಿಭಟಿಸಿದ್ದಾರೆ ಎಂದು ಮಾಜಿ ಶಾಸಕ ಡಿ ಜಿ ಶಾಂತನಗೌಡ ರವರ ವಿರುದ್ಧ ಹರಿಹಾಯ್ದರು.
ಭಾರತಕ್ಕೆ ಸ್ವತಂತ್ರ ತಂದು ಕೊಟ್ಟಿದ್ದು ಮಹಾತ್ಮಗಾಂಧಿ ಆದರೆ ಈ ಕಾಂಗ್ರೆಸ್ ಪಕ್ಷದವರಲ್ಲ ನಕಲಿ ಗಾಂಧಿಯವರು ಬಂದರು ಅಷ್ಟೇ ನಾವು ನಮ್ಮ ಹೋರಾಟದ ಫಲವಾಗಿ ದೇಶಾದ್ಯಂತ ಬಿಜೆಪಿ ಪಕ್ಷ ಬಂದಿದೆ. ನೀವು ಅಂಬೇಡ್ಕರ್ ಸತ್ತಾಗ ಅವರಿಗೆ ಅಪಮಾನ, ಅವಮಾನ, ಶವಸಂಸ್ಕಾರಕ್ಕೂ ಜಾಗವನ್ನು ಕೂಡದೇ ಇದ್ದವರು ನಿಮ್ಮಂತ ಕಾಂಗ್ರೆಸ್ ಪಕ್ಷದವರಿಂದ ನಾವು ಕಲಿಯುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ವಿಕೃತ ಮನಸ್ಸಿನ ಕಾಂಗ್ರೆಸ್ ಮುಖಂಡರುಗಳು ಈ ದೇಶದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ನೀವು ಏನು ಮಾಡಿದಿರಿ ಎಂದು ಅವರಿಗೆ ಅರಿವಾಗಲಿಲ್ಲ ಅಂದು, ಅವರು ಮುಗ್ಧ ಮನಸ್ಸಿನವರು ಈಗ ದೇಶಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜ್ಞಾನೋದಯವಾಗಿದೆ, ಭಾರತೀಯ ಜನತಾ ಪಾರ್ಟಿ ಬ್ರಾಹ್ಮಣ ಮತ್ತು ವೀರಶೈವ ಲಿಂಗಾಯತ ಪಾರ್ಟಿ ಅಂತ ಹೇಳುತ್ತಿದ್ದರು, ಈಗ ದಲಿತ ಸಮುದಾಯಗಳು ಈ ದೇಶದಲ್ಲಿರುವ 106 ದಲಿತ ಸಮಾಜಗಳು ಬಿಜೆಪಿ ಬೆಂಬಲಕ್ಕೆ ನಿಂತಿವೆ ಎಂದು ಹೇಳುತ್ತಾ, ನಮ್ಮ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿಯವರು ದೆಹಲಿಯಲ್ಲಿ ಸಾವಿರ ಕೋಟಿ ಹಣವನ್ನ ಖರ್ಚು ಮಾಡಿ ಅಭಿವೃದ್ಧಿಯನ್ನು ಮಾಡಿದ್ದಾರೆ. 2017ರಲ್ಲಿ ಅಂಬೇಡ್ಕರ್ ಜಯಂತಿ ಮಾಡುವುದರ ಮೂಲಕ ಮತ್ತು ಸೇವಾಲಾಲ್ ದೇವಸ್ಥಾನ ಸೂರಗೊಂಡನಕೊಪ್ಪ ಅಭಿವೃದ್ಧಿ, ತಾಂಡಾ ಅಭಿವೃದ್ಧಿ ನಿಗಮ, ಭಾರತೀಯ ಜನತಾ ಪಾರ್ಟಿಯ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಸರ್ಕಾರ ಮಾಡಿದೆ .ಎಸ್ಸಿಎಸ್ಟಿ ಸಮುದಾಯಗಳು ಸರ್ಕಾರದಿಂದ ಹಲವಾರು ಯೋಜನೆಗಳ ಸವಲತ್ತು ಪಡೆದಿದ್ದಾರೆ. ನಾನು ತಾಲೂಕಿನ ಶಾಸಕರಾಗಿ ಎಸ್ಸಿಎಸ್ಟಿ ಸೌಲತ್ತುಗಳನ್ನು ಪಡೆದಿದ್ದರೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ನನ್ನನ್ನು ಸುಮ್ಮನೆ ಬಿಡುತ್ತಿದ್ದರೆ ಏನ್ರೀ ? ರೇಣುಕಾಚಾರ್ಯ ಕಾನೂನು ವಿರುದ್ಧವಾಗಿ ತಪ್ಪು ಮಾಡಿದರೆ ಅವನಿಗೆ ಶಿಕ್ಷೆ ಆಗುತ್ತದೆ ಎಂದು ವಿಧಾನಸೌಧದಲ್ಲಿ ಸಿದ್ದರಾಮಯ್ಯನವರೇ ಹೇಳಿದ್ದಾರೆ, ಮಾಜಿ ಶಾಸಕ ಡಿ ಜಿ ಶಾಂತನಗೌಡ್ರ ಅವರು ತಮ್ಮ ಗೆಸ್ಟ್ ಹೌಸ್ ನಲ್ಲಿ ಸುಮಾರು 15 ರಿಂದ 20 ಬಾರಿ ದಲಿತ ಮುಖಂಡರುಗಳನ್ನು ಕರಿಸಿ ಪದೇ ಪದೇ ಮೀಟಿಂಗ್ ಮಾಡಿ ನನ್ನ ವಿರುದ್ಧ ಪ್ರತಿಭಟನೆ ಮಾಡಿ ಅಂತ ಹೇಳಿದಾಗ ಆ ದಲಿತರು ಮುಖುಡರುಗಳು ಸೇರಿಸಿದ್ದು 300ರಿಂದ 400 ಜನ ಮಾತ್ರ ಅವರಿಗೆ ನಾಚಿಕೆ ಆಗಬೇಕು, ಬಿಜೆಪಿ ಕಾರ್ಯಕರ್ತರು ನನ್ನ ಗಮನಕ್ಕೆ ಬಾರದೆ ಕೇವಲ ಮೂರು ದಿನಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಹಳ್ಳಿಗಳಿಗೆ ಭೇಟಿ ನೀಡಿ ಸಮಾಜವನ್ನು ಒಗ್ಗೂಡಿಸಿ ಇವತ್ತು ಸುಮಾರು 7000 ರಿಂದ 8000 ಕಾರ್ಯಕರ್ತ ಗಳು ಬಂದು ಟಿ ಬಿ ಸರ್ಕಲ್ ಇಂದ ಪಾದಯಾತ್ರೆ ಮೂಲಕ ಸಂಗೊಳ್ಳಿ ರಾಯಣ್ಣ ನವರಿಗೆ ಮಾಲಾರ್ಪಣೆ ಮಾಡಿ ಹಲಿಗೆ ,ಡೊಳ್ಳು ಕುಣಿತ ,ಭಜಂತ್ರಿ ಗಳ ಮೂಲಕ ಹೆಣ್ಣುಮಕ್ಕಳು ಮಂಗಳಾರತಿ ಮಾಡುವುದರ ಮುಖೇನ ಸ್ವಾಗತಿಸಿದ್ದು ದಲಿತರು ಯಾರ ಪರವಾಗಿದ್ದಾರೆ ಎಂದು ಅವರಿಗೆ ಅರ್ಥವಾಗಬೇಕು ಡಿ ಜಿ ಶಾಂತನಗೌಡ ರವರು ಸುಮಾರು 8ರಿಂದ10 ದಲಿತ ಮುಖಂಡರುಗಳನ್ನು ಇಟ್ಟುಕೊಂಡು ರೇಣುಕಾಚಾರ್ಯ ವಿರುದ್ಧ ಪ್ರತಿಭಟಿಸಿದರೆ ಸುಮಾರು 25ರಿಂದ 30 ಸಾವಿರ ಓಟುಗಳು ನನಗೆ ಬಂದೇ ಬಿಟ್ಟವು ,ನಾನು ಗೆದ್ದೆ ಬಿಟ್ಟೆ, ಎಂದು ಮಾಜಿ ಶಾಸಕರಾದ ಡಿಜಿ ಶಾಂತನ ಗೌಡ್ರು ಭ್ರಮನಿರಸ ದಲ್ಲಿದ್ದಾರೆ ಮಾಜಿ ಶಾಸಕರೇ ಇದು ನಿಮ್ಮ ಕನಸು ಅಷ್ಟೇ 2023 ನೇ ಚುನಾವಣೆಯಲ್ಲಿ ಯಾವ ಸಮಾಜದವರು ಯಾರ ಪರವಾಗಿ ಇರುತ್ತಾರೆ ಎಂದು ಕಾದು ನೋಡಿ ಅದು ನಿಮಗೆ ತಕ್ಕ ಪಾಠವನ್ನು ಅವಳಿ ತಾಲೂಕಿನ ಜನರು ಪಾಠವನ್ನು ಕಲಿಸುತ್ತಾರೆ ಎಂದು ಮಾತನ್ನು ಮುಗಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖಂಡರುಗಳು ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಎಂಪಿ ರೇಣುಕಾಚಾರ್ಯ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ಜೆಕೆ ಸುರೇಶ್ ತಾಲೂಕ ಎಸಿ ಮೋರ್ಚಾ ಅಧ್ಯಕ್ಷರಾದ ಉಮೇಶ್ ಬೆಲೆ ಮಲ್ಲೂರು ಎಸ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಕೆವಿ ಚನ್ನಪ್ಪ ಬಿಜೆಪಿಯ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಾಂತರಾಜ್ ಪಾಟೀಲ್ ಬೋವಿ ಸಮಾಜದ ಅಧ್ಯಕ್ಷರಾದ ಶಾಂತರಾಜ್ ಕುಂದೂರು ಪುರಸಭೆಯ ಅಧ್ಯಕ್ಷ ಹೋಬಳಿದಾರ್ ಬಾಬು ಉಪಾಧ್ಯಕ್ಷರಾದ ರಂಜಿತ ವಡ್ಡಿಚೆನ್ನಪ್ಪ, ದಿಡಗೂರು ಪಾಲಾಕ್ಷಪ್ಪ ಬಣಜಾರ ಸಮಾಜದ ತಾಲೂಕು ಅಧ್ಯಕ್ಷ ಜುಂಜಾ ನಾಯಕ್ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯಕ್, ಚಿಲೂರ ಅಜಯ ಚಂದಪ್ಪ ತಿಮ್ಮೇನಹಳ್ಳಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ನಾಯಕ್, ಏಕೆ ಹಾಲೇಶ್ ಕ್ಯಾಸಿನಕೆರೆ ಜಿಲ್ಲಾ ಎಸ್ಸಿಎಸ್ಟಿ ಮೋರ್ಚಾದ ಅಧ್ಯಕ್ಷರುಗಳು ತಾಲೂಕ ಎಸ್ಸಿಎಸ್ಟಿ ಮೋರ್ಚಾದ ಅಧ್ಯಕ್ಷರುಗಳು ಬಿಜೆಪಿಯ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಸಹಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.