ಹೊನ್ನಾಳಿಯಲ್ಲಿ ಸೋಮವಾರ ನಡೆಯಲಿರುವ ಬಿಜೆಪಿ ಪಕ್ಷದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೋರ್ಚಾದ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಇದು ರಾಜಕೀಯ ದುರುದ್ದೇಶ ವಾಗಿದೆ ಎಂದು ಮಾಜಿ ಶಾಸಕ ಶಾಂತನಗೌಡ ತಿಳಿಸಿದರು

ಅವರು ಭಾನುವಾರ ಸಾಸ್ವೆಹಳ್ಳಿ ಶ್ರೀ ಆಂಜನೇಯ ಸ್ವಾಮಿ ಮುಳ್ಳು ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ರಥವನ್ನು ವೀಕ್ಷಣೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ

ಏಪ್ರಿಲ್ 14ರಂದು ಸರ್ಕಾರದ ವತಿಯಿಂದ ತಾಲೂಕು ಆಡಳಿತದ ಜೊತೆಗೂಡಿ ಶಾಸಕರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುವುದು ಸರ್ಕಾರದ ನಿಯಮ ನನ್ನ ಅವಧಿಯಲ್ಲಿ 10 ವರ್ಷಗಳ ಕಾಲ ಅಂಬೇಡ್ಕರವರ ಜನ್ಮದಿನಾಚರಣೆಯನ್ನ ಏಪ್ರಿಲ್ 14 ರಂದು ಸರ್ಕಾರದ ನಿಯಮಾವಳಿಗಳ ಪ್ರಕಾರ ನಡೆದುಕೊಂಡುಬಂದಿದೆ ಆದರೆ ಈ ಬಾರಿ ಹಾಲಿ ಶಾಸಕರು ಎಂಪಿ ರೇಣುಕಾಚಾರ್ಯ ಅವರು ಮಾಡಿದ ಭ್ರಷ್ಟಾಚಾರಕ್ಕೆ ತೇಪೆ ಹಾಕಲು ಸೋಮವಾರ ಹೊನ್ನಾಳಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಜೆಪಿ ಪಕ್ಷದಸಹಯೋಗದಲ್ಲಿ ಅಂಬೇಡ್ಕರ್ ಜಯಂತಿ ನಡೆಯುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಮಾಜಿ ಶಾಸಕ ಡಿಜಿ ಶಾಂತನಗೌಡ ತೀವ್ರವಾಗಿ ಖಂಡಿಸಿದರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯ ತಟ್ಟೆಯಲ್ಲಿ ಇವರು ಕೈಹಾಕಿ ಕ ಬಳಸುತ್ತಿರುವುದು ಎಷ್ಟು ನ್ಯಾಯ ಇವರ ಮಾಡುತ್ತಿರುವುದನ್ನು ತಾಲೂಕಿನ ಜನ ಗಮನಿಸುತ್ತಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಅವಳಿ ತಾಲೂಕುಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಜನರು ಕಲಿಸುತ್ತಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸದರು.
ಕಾಂಗ್ರೆಸ್ ಕಾರ್ಯಕರ್ತರಾದ ಸಂತೋಷ್. ತೊಗಲೂರ ಸಿದ್ದಣ್ಣ. ಕೋಟೆ ಮಂಜಣ್ಣ. ಹಾಗೂ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *